ಒಡಹುಟ್ಟಿದವರು ನಮ್ಮ ಮೊದಲನೇ ಬೆಸ್ಟ್ ಫ್ರೆಂಡ್ಸ್ ಆಗಿರ್ತಾರೆ. ನಮ್ಮ ರಹಸ್ಯಗಳು, ದುಃಖ ಮತ್ತು ಸಂತೋಷವನ್ನು ಹಂಚಿಕೊಳ್ಳಲು ಅವರೇ ಸುರಕ್ಷಿತ ಮನಸ್ಸುಗಳು. ಒಂದೇ ಕುಟುಂಬದಲ್ಲಿ ಬೆಳೆದಿರುವುದು ಇದಕ್ಕೆ ಬಲವಾದ ಕಾರಣ. ಇಂದು ವಿಶ್ವ ಒಡಹುಟ್ಟಿದವರ ದಿನ. ಒಡಹುಟ್ಟುದವರ ದಿನದ ಸಂದರ್ಭದಲ್ಲಿ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸಹೋದರ ಅಹಾನ್ ಶೆಟ್ಟಿ ಜೊತೆಗಿನ ಹೃದಯಸ್ಪರ್ಶಿ ಫೋಟೋ ಹಂಚಿಕೊಂಡಿದ್ದಾರೆ.
ಅಥಿಯಾ ಶೆಟ್ಟಿ ಭಾರತದ ಕ್ರಿಟಿಗ ಕೆ.ಎಲ್.ರಾಹುಲ್ ಅವರನ್ನು ಮದುವೆಯಾಗಿದ್ದಾರೆ. ಮದುವೆ ಸಂದರ್ಭದ ಇದುವರೆಗೆ ಎಲ್ಲೂ ಹಂಚಿಕೊಂಡಿರದ ಸಹೋದರನ ಜೊತೆಗಿನ ಫೋಟೋವನ್ನು ಅವರು ಶೇರ್ ಮಾಡಿದ್ದಾರೆ. ಈ ಮೂಲಕ ಒಡಹುಟ್ಟಿದವರ ದಿನಕ್ಕೆ ಶುಭಾಶಯವನ್ನು ಸಹೋದರನಿಗೆ ತಿಳಿಸಿದ್ದಾರೆ. ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಪೋಸ್ಟ್ ಮಾಡಿರುವ ಅಥಿಯಾ ಶೆಟ್ಟಿ, "ಯಾವಾಗಲೂ ನನಗೆ ದಾರಿ ತೋರಿಸುತ್ತಿರುವೆ" ಎಂದು ಬರೆದುಕೊಂಡಿದ್ದು, ಅಹಾನ್ ಶೆಟ್ಟಿ ಅವರನ್ನು ಟ್ಯಾಗ್ ಮಾಡಿದ್ದಾರೆ.
ಅಥಿಯಾ ಫೋಟೋ ಪೋಸ್ಟ್ ಮಾಡಿದ ತಕ್ಷಣ, ಅಭಿಮಾನಿಗಳು ಕಾಮೆಂಟ್ಗಳ ಸುರಿಮಳೆ ಸುರಿಸಲು ಪ್ರಾರಂಭಿಸಿದ್ದಾರೆ. ಕಾಮೆಂಟ್ಗಳ ತುಂಬಾ ಅಥಿಯಾ ಶೆಟ್ಟಿ ಹಾಗೂ ಅಹಾನ್ ಶೆಟ್ಟಿ, ಸಹೋದರ- ಸಹೋದರಿ ಜೋಡಿಯನ್ನು ಹೊಗಳಿದ್ದಾರೆ. ಅಭಿಮಾನಿಯೊಬ್ಬರು, "ಜಗತ್ತಿನ ಅತ್ಯುತ್ತಮ ಸಹೋದರ ಸಹೋದರಿ, ದೇವರು ನಿಮ್ಮಿಬ್ಬರನ್ನೂ ಸಾಕಷ್ಟು ಪ್ರೀತಿಯಿಂದ ಆಶೀರ್ವದಿಸಲಿ. ಪಂಜಾಬ್ನಿಂದ ನಾನು ನಿಮ್ಮಿಬ್ಬರ ದೊಡ್ಡ ಅಭಿಮಾನಿ @athiyashetty @ahan.shetty️" ಎಂದು ಹರಸಿದ್ದಾರೆ. ಮತ್ತೊಬ್ಬರು, "ಸಹೋದರಿಯರ ಬಂಧವನ್ನು ಪ್ರೀತಿಸಿ" ಎಂದಿದ್ದಾರೆ.