ಉಜ್ಜಯಿನಿ (ಮಧ್ಯಪ್ರದೇಶ): ನಟ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಇತ್ತೀಚೆಗಷ್ಟೇ ದಾಂಪತ್ಯ ಜೀವನ ಆರಂಭಿಸಿದ್ದಾರೆ. ನವದಂಪತಿ ತಮ್ಮ ವಿವಾಹದ ನಂತರ ಮಧ್ಯಪ್ರದೇಶ ರಾಜ್ಯದ ಉಜ್ಜಯಿನಿಯ ಮಹಾಕಾಳೇಶ್ವರಕ್ಕೆ ಭೇಟಿ ಕೊಟ್ಟು ಬಾಬಾ ಮಹಾಕಾಲ್ಗೆ ಪೂಜೆ ಸಲ್ಲಿಸಿದ್ದಾರೆ.
ಶನಿವಾರದಂದು ಈ ತಾರಾ ದಂಪತಿ ಶಿವನಿಗೆ ಪೂಜೆ ಸಲ್ಲಿಸಿದ್ದಾರೆ. ಬಾಬಾ ಮಹಾಕಾಲ್ ಗರ್ಭಗುಡಿಗೆ ತೆರಳಿ ನಮನ ಸಲ್ಲಿಸಿದ್ದಾರೆ. ಅಲ್ಲಿದ್ದ ಅರ್ಚಕರು ನವಜೋಡಿಗೆ ಮಾರ್ಗದರ್ಶನ ನೀಡಿದರು. ಅಥಿಯಾ ಶೆಟ್ಟಿ ಮತ್ತು ಕೆ ಎಲ್ ರಾಹುಲ್ ವಿಧಿ ವಿಧಾನಗಳನ್ನು ಅನುಸರಿಸಿ ದೇವಾಲಯದಲ್ಲಿ ಆರತಿ ಬೆಳಗಿದರು.
ಮೇಕಪ್ ಇಲ್ಲದೆ ಕಾಣಿಸಿಕೊಂಡ ಸ್ಟಾರ್ ಜೋಡಿ.. ಕೆಎಲ್ ರಾಹುಲ್ ಕ್ರಿಕೆಟ್ ಸಲುವಾಗಿ ಮಧ್ಯಪ್ರದೇಶದಲ್ಲಿದ್ದಾರೆ. ಈ ಸಂದರ್ಭ ದೇವಾಲಯಕ್ಕೆ ದಂಪತಿ ಭೇಟಿ ಕೊಟ್ಟಿದ್ದಾರೆ. ಅಥಿಯಾ ಹಳದಿ ಸೀರೆಯಲ್ಲಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡರು. ಸ್ಟಾರ್ ಕ್ರಿಕೆಟಿಗ ಧೋತಿ ಧರಿಸಿ ದೇವಾಲಯಕ್ಕೆ ಬಂದರು. ಸ್ಟಾರ್ ಜೋಡಿ ಮೇಕಪ್ ಇಲ್ಲದೇ ಕಾಣಿಸಿಕೊಂಡರು.
ದೇವಸ್ಥಾನದ ಅರ್ಚಕರ ಮಾರ್ಗದರ್ಶನ ಪ್ರಕಾರ ನಡೆದುಕೊಂಡು, ದೇವರ ದರ್ಶನ ಪಡೆದರು. ಎರಡು ಗಂಟೆಗಳ ಕಾಲ ಸ್ತೋತ್ರ ಪಠಣ ಮಾಡಿದರು. ದೇವಸ್ಥಾನದ ಅರ್ಚಕರಾದ ಆಶಿಶ್ ಪ್ರಕಾರ, ಮುಂಬರುವ ಪಂದ್ಯಗಳಲ್ಲಿ ಭಾರತ ಕ್ರಿಕೆಟ್ ತಂಡ ಉತ್ತಮ ಪ್ರದರ್ಶನ ನೀಡಲಿ ಎಂದು ಕೆಎಲ್ ರಾಹುಲ್ ಪ್ರಾರ್ಥಿಸಿದ್ದಾರಂತೆ.
ಜನವರಿ 23ರಂದು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಮಹಾರಾಷ್ಟ್ರದ ಖಂಡಾಲಾದಲ್ಲಿರುವ ಅಥಿಯಾರ ತಂದೆ, ನಟ ಸುನೀಲ್ ಶೆಟ್ಟಿ ಫಾರ್ಮ್‌ಹೌಸ್‌ನಲ್ಲಿ ಕುಟುಂಬಸ್ಥರು ಮತ್ತು ಸ್ನೇಹಿತರು ಸೇರಿದಂತೆ ಕೆಲವೇ ಮಂದಿಯ ಸಮ್ಮುಖದಲ್ಲಿ ಈ ಮದುವೆ ಸಮಾರಂಭ ನಡೆದಿತ್ತು. ವಿವಾಹವಾಗುವವರೆಗೂ ತಮ್ಮ ಪ್ರೀತಿಯನ್ನು ಗುಟ್ಟಾಗಿಯೇ ಇಟ್ಟುಕೊಂಡಿದ್ದ ಈ ಜೋಡಿ ಮದುವೆ ಬಳಿಕ ಫೋಟೋ ಹಂಚಿಕೊಂಡಿದ್ದರು.
ಇದನ್ನೂ ಓದಿ:'15ನೇ ವಯಸ್ಸಿನಲ್ಲಿ ಅತ್ಯಾಚಾರಕ್ಕೊಳಗಾಗಿದ್ದೆ..': ಬಾಲ್ಯದ ಕಹಿ ಘಟನೆ ವಿವರಿಸಿದ ಪ್ಯಾರಿಸ್ ಹಿಲ್ಟನ್
ವಿವಾಹ ಸಮಾರಂಭದ ದಿನ ಕೆಲವೇ ಕೆಲ ಫೋಟೋಗಳನ್ನು ಮಾತ್ರ ಶೇರ್ ಮಾಡಿಕೊಂಡಿದ್ದರು. ಬಳಿಕ ಹಂತ ಹಂತವಾಗಿ ಅರಿಶಿಣ ಶಾಸ್ತ್ರ, ಮೆಹೆಂದಿ, ಸಂಗೀತ ಕಾರ್ಯಕ್ರಮಗಳ ಫೊಟೋಗಳನ್ನು ಹಂಚಿಕೊಂಡರು. ಅವರ ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಭಾರೀ ಮೆಚ್ಚುಗೆ ಗಳಿಸಿದ್ದವು.
ಇದನ್ನೂ ಓದಿ:ಏರಿಳಿತಗಳ ನಡುವೆ ಸಮಂತಾ ಸಾಧನೆ: ಮನೋರಂಜನಾ ಕ್ಷೇತ್ರದಲ್ಲಿ 13 ವರ್ಷ ಪೂರೈಸಿದ ನಟಿ
ಕರ್ನಾಟಕ ಮೂಲದವರಾದ ನಟ ಸುನೀಲ್ ಶೆಟ್ಟಿ ಪುತ್ರಿ ರಾಹುಲ್ ಜೊತೆ ಬಹು ಸಮಯದಿಂದ ಡೇಟಿಂಗ್ನಲ್ಲಿದ್ದರು ಎಂಬ ಮಾಹಿತಿ ಇದೆ. ಆದರೆ, ತಮ್ಮ ಪ್ರೀತಿ ಬಗ್ಗೆ ಆಗಲಿ ಅಥವಾ ಮದುವೆ ವಿಷಯವನ್ನಾಗಲಿ ಎಲ್ಲಿಯೂ ಮುಕ್ತವಾಗಿ ಚರ್ಚಿಸಿರಲಿಲ್ಲ. ಸಂದರ್ಶನಗಳಲ್ಲಿ ತಂದೆ ಸುನೀಲ್ ಶೆಟ್ಟಿ ಸುಳಿವು ನೀಡಿದ್ದರಷ್ಟೇ. ಮದುವೆ ಬಳಿಕ ಅಂದೇ ನಟ ಸುನೀಲ್ ಶೆಟ್ಟಿ ಅಧಿಕೃತವಾಗಿ ಈ ಮದುವೆಯ ಬಗ್ಗೆ ಖಚಿತಪಡಿಸಿದ್ದರು.