ದಾಂಪತ್ಯ ಜೀವನ ಆರಂಭಿಸಿದ ಒಂದು ವಾರದ ಬಳಿಕ ನಟಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಮೊದಲ ಬಾರಿಗೆ ರೆಸ್ಟೋರೆಂಟ್ ಒಂದರ ಹೊರಗೆ ಒಟ್ಟಿಗೆ ಕಾಣಿಸಿಕೊಂಡರು. ಅವರ ಈ ಸುಂದರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ವರದಿಗಳ ಪ್ರಕಾರ, ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಮದುವೆಯ ನಂತರ ಮೊದಲ ಬಾರಿ ಡಿನ್ನರ್ ಡೇಟ್ಗೆ ಹೊರಗೆ ಹೋಗಿದ್ದಾರೆ. ಬಾಂದ್ರಾದ ರೆಸ್ಟೋರೆಂಟ್‌ನ ಹೊರಗೆ ನವದಂಪತಿಗಳು ಒಟ್ಟಾಗಿ ಕಾಣಿಸಿಕೊಂಡರು. ಅಥಿಯಾ ಮತ್ತು ಕೆಎಲ್ ರಾಹುಲ್ ಕ್ಯಾಶುಯಲ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದು, ಪಾಪರಾಜಿಗಳ ಕ್ಯಾಮರಾದಲ್ಲಿ ಅವರ ಫೋಟೋಗಳು ಸೆರೆಯಾಗಿವೆ. ಅಥಿಯಾ ಅವರು ಸಡಿಲವಾದ ಹೂವಿನ ಶರ್ಟ್ ಮತ್ತು ಡೆನಿಮ್ ಧರಿಸಿದ್ದರು. ಈ ಉಡುಪಿಗೆ ಮ್ಯಾಚ್ ಆಗುವಂತೆ ಲೈಟ್ ಮೇಕ್ಅಪ್ ಮಾಡಿದ್ದರು. ಅವರ ಕೈಗಳ ಮೇಲೆ ಮೆಹಂದಿ ಬಣ್ಣವೂ ಕಾಣಿಸಿತು. ವಾರ ಕಳೆದರೂ ಮೆಹೆಂದಿ ಮಾಸಿರಲಿಲ್ಲ. ಸಿಂಧೂರ ಮತ್ತು ಮಂಗಳಸೂತ್ರವನ್ನು ಧರಿಸದೇ, ಕ್ಯಾಶುವಲ್ ಲುಕ್ನಲ್ಲಿ ಕಾಣಿಸಿಕೊಂಡರು. ಇನ್ನೂ ಕೆಎಲ್ ರಾಹುಲ್ ನೀಲಿ ಜೀನ್ಸ್ ಮತ್ತು ಬಿಳಿ ಟೀ-ಶರ್ಟ್‌ನಲ್ಲಿ ಕಾಣಿಸಿಕೊಂಡರು.
ಕರ್ನಾಟಕ ಮೂಲದ ಬಾಲಿವುಡ್ನ ಹಿರಿಯ ನಟ ಸುನೀಲ್ ಶೆಟ್ಟಿ ಪುತ್ರಿ, ಬಾಲಿವುಡ್ ನಟಿ ಮತ್ತು ಕನ್ನಡಿಗ, ಕ್ರಿಕೆಟರ್ ಕೆಎಲ್ ರಾಹುಲ್ ಬಹು ಸಮಯದಿಂದ ಡೇಟಿಂಗ್ನಲ್ಲಿದ್ದರು. ಆದರೆ, ತಮ್ಮ ಪ್ರೀತಿ ಬಗ್ಗೆಯಾಗಲಿ, ಮದುವೆ ಬಗ್ಗೆಯಾಗಲಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಮದುವೆ ದಿನ ಸುನೀಲ್ ಶೆಟ್ಟಿ ಅಧಿಕೃತವಾಗಿ ಈ ಮದುವೆಯ ಬಗ್ಗೆ ಖಚಿತಪಡಿಸಿದರು. ಆದರೆ ಸುನೀಲ್ ಶೆಟ್ಟಿ ಕೂಡ ಈ ಮೊದಲ ಸಂದರ್ಶನಗಳಲ್ಲಿ ಮದುವೆ ಬಗ್ಗೆ ಅಧಿಕೃತವಆಗಿ ಸಂಪೂರ್ಣ ಮಾಹಿತಿ ಹಂಚಿಕೊಂಡಿರಲಿಲ್ಲ.
ಕಳೆದ ಸೋಮವಾರ (ಜನವರಿ 23) ದಂದು ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಹಸೆಮಣೆ ಏರಿ ತಮ್ಮ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಮಹಾರಾಷ್ಟ್ರದ ಖಂಡಾಲಾದಲ್ಲಿರುವ ನಟ ಸುನೀಲ್ ಶೆಟ್ಟಿ ಫಾರ್ಮ್‌ಹೌಸ್‌ನಲ್ಲಿ ಕುಟುಂಬಸ್ಥರು ಮತ್ತು ಸ್ನೇಹಿತರು ಸೇರಿದಂತೆ ಕೆಲವೇ ಮಂದಿಯ ಸಮ್ಮುಖದಲ್ಲಿ ಇಬ್ಬರೂ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ವಿವಾಹದ ಬಳಿಕ ಫೋಟೋ ಶೇರ್ ಮಾಡಿದ ಕೆಎಲ್ ರಾಹುಲ್, ನಿನ್ನ ಪ್ರೀತಿಯ ಬೆಳಕಲ್ಲಿ, ನಾನು ಹೇಗೆ ಪ್ರೀತಿಸಬೇಕೆಂದು ಕಲಿಯುತ್ತೇನೆ ಎಂದು ಬರೆದುಕೊಂಡಿದ್ದರು.