ಆಸ್ಟ್ರೇಲಿಯಾ 2023ರ ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ 6 ವಿಕೆಟ್ಗಳಿಂದ ಜಯ ದಾಖಲಿಸಿದೆ. ಟೀಂ ಇಂಡಿಯಾ ಪ್ರಯತ್ನ ಮೀರಿ ಗೆಲುವಿಗಾಗಿ ಶ್ರಮಿಸಿದರೂ, ಮ್ಯಾಚ್ ಕೈ ತಪ್ಪಿ ಹೋಗಿದೆ. ಪಂದ್ಯ ಮುಗಿದ ತಕ್ಷಣ ಹಲವಾರು ಬಾಲಿವುಡ್ ತಾರೆಯರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಟೀಂ ಇಂಡಿಯಾದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
ನಟಿ ಕತ್ರಿನಾ ಕೈಫ್ ಇನ್ಸ್ಟಾ ಸ್ಟೋರಿ ಇನ್ಸ್ಟಾಗ್ರಾಮ್ನಲ್ಲಿ ಭಾರತ ತಂಡದ ಫೋಟೋವನ್ನು ಸ್ಟೋರಿ ಹಾಕಿಕೊಂಡಿರುವ ಕ್ರಿಕೆಟಿಗ ಕೆ.ಎಲ್ ರಾಹುಲ್ ಪತ್ನಿ, ನಟಿ ಆಥಿಯಾ ಶೆಟ್ಟಿ, "ಈ ತಂಡ.. ಅತ್ಯುತ್ತಮ ತಂಡ" ಎಂದು ರೆಡ್ ಹಾರ್ಟ್ ಎಮೋಜಿನೊಂದಿಗೆ ಬರೆದುಕೊಂಡಿದ್ದಾರೆ. ಸೋತರೂ ಟೀಂ ಇಂಡಿಯಾವನ್ನು ಶ್ಲಾಘಿಸಿದ್ದಾರೆ. ಮತ್ತೊಂದೆಡೆ, ಬಾಲಿವುಡ್ ನಟಿ ಕತ್ರಿನಾ ಕೈಫ್ ಕೂಡ ಟೀಂ ಇಂಡಿಯಾ ಆಟಗಾರರನ್ನು 'ಕಿಂಗ್ಸ್' ಎಂದು ಕರೆದಿದ್ದಾರೆ. ಈ ಮೂಲಕ ವಿಶ್ವಕಪ್ನ ಭಾರತದ ಸೋಲನ್ನು ಸಕರಾತ್ಮಕವಾಗಿಯೇ ತಾರೆಯರು ಸ್ವೀಕರಿಸಿದ್ದಾರೆ.
ನಟಿ ಆಥಿಯಾ ಶೆಟ್ಟಿ ಇನ್ಸ್ಟಾ ಸ್ಟೋರಿ ಅಮಿತಾಭ್ ಬಚ್ಚನ್ ಧೈರ್ಯ: ಭಾರತೀಯ ಕ್ರಿಕೆಟ್ ತಂಡದ ಆಟಗಾರರಿಗೆ ಹಿಂದಿ ಚಿತ್ರರಂಗದ ಹಿರಿಯ ನಟ ಅಮಿತಾಭ್ ಬಚ್ಚನ್ ಧೈರ್ಯ ತುಂಬಿದ್ದಾರೆ. "ಟೀಂ ಇಂಡಿಯಾ.. ಕಳೆದ ರಾತ್ರಿಯ ಫಲಿತಾಂಶವು ನಿಮ್ಮ ಪ್ರತಿಭೆ, ಸಾಮರ್ಥ್ಯ ಮತ್ತು ನಿಲುವಿನ ಪ್ರತಿಬಿಂಬವಲ್ಲ. ನಿಮ್ಮ ಬಗ್ಗೆ ಹೆಮ್ಮೆ ಇದೆ. ಮುಂದಿನ ದಿನಗಳಲ್ಲಿ ಉತ್ತಮವಾದದ್ದು ಸಂಭವಿಸುತ್ತದೆ. ಮುಂದುವರೆಸಿ" ಎಂದು ಹೇಳಿದ್ದಾರೆ.
ಅಲ್ಲದೇ, "ನಿಮ್ಮ ಪ್ರತಿಭೆ, ಸಾಮರ್ಥ್ಯ ಮತ್ತು ನಿಲುವು ಎಲ್ಲವನ್ನೂ ಮೀರಿದೆ. ಸರ್ವೋಚ್ಛವಾಗಿದೆ. ನೀವು ಆಡಿದ 10 ಪಂದ್ಯಗಳಲ್ಲಿ ಅದು ಸಾಬೀತಾಗಿದೆ. ಈ ವರ್ಲ್ಡ್ ಕಪ್ನಲ್ಲಿ ಎಷ್ಟು ಮಾಜಿ ಚಾಂಪಿಯನ್ಗಳು ಮತ್ತು ಇತರ ಟೀಂಗಳನ್ನು ಸೋಲಿಸಿದ್ದೀರಿ ಎಂದು ಒಮ್ಮೆ ಹಿಂತಿರುಗಿ ನೋಡಿ. ನೀವು ಬೆಸ್ಟ್. ಯಾವಾಗಲೂ ಹಾಗೆಯೇ ಉಳಿಯುತ್ತೀರಿ" ಎಂದು ಧೈರ್ಯದ ಮಾತುಗಳನ್ನಾಡಿದ್ದಾರೆ.
ಮತ್ತೊಂದೆಡೆ, ಬಾಲಿವುಡ್ ನಟಿ ಆಲಿಯಾ ಭಟ್ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಭಾರತ ತಂಡದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. "ನಮ್ಮ ಹೃದಯ ಎಂದಿಗೂ ಗೆಲ್ಲುತ್ತದೆ. ಭಾರತ ತಂಡ ಉತ್ತಮವಾಗಿ ಆಡಿದೆ. ನಾವು ತಲೆ ಎತ್ತಿ ನೋಡುವಂತೆ ನೀವು ಮಾಡಿದ್ದೀರಿ" ಎಂದು ಬರೆದುಕೊಂಡಿದ್ದಾರೆ.
ನಟಿ ಆಥಿಯಾ ಶೆಟ್ಟಿ ಇನ್ಸ್ಟಾ ಸ್ಟೋರಿ ಇಡೀ ವಿಶ್ವವೇ ನಮ್ಮ ಕ್ರೀಡಾ ಪರಂಪರೆಯ ಬಗ್ಗೆ ಹೆಮ್ಮೆಪಡುವಂತೆ ಮಾಡಿದ್ದಕ್ಕಾಗಿ ಬಾಲಿವುಡ್ ನಟ ಶಾರುಖ್ ಖಾನ್ ಕೂಡ ತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ. 'ಭಾರತ ತಂಡ ಇಡೀ ಪಂದ್ಯಾವಳಿಯನ್ನು ಆಡಿದ ರೀತಿ ಗೌರವಯುತವಾಗಿದೆ. ಕ್ರೀಡೆ ಅಂದ ಮೇಲೆ ಸೋಲು, ಗೆಲುವು ಇದ್ದೇ ಇರುತ್ತದೆ. ದುರದೃಷ್ಟವಶಾತ್, ಇಂದು ಸೋಲು ಅನುಭವಿಸಿದ್ದೇವೆ. ಆದರೂ ನಮ್ಮ ಕ್ರೀಡಾ ಪರಂಪರೆಯ ಬಗ್ಗೆ ಹೆಮ್ಮೆ ತಂದಿದ್ದಕ್ಕಾಗಿ ಭಾರತದ ಕ್ರಿಕೆಟ್ ತಂಡಕ್ಕೆ ಧನ್ಯವಾದಗಳು. ನೀವು ಇಡೀ ಭಾರತಕ್ಕೆ ಮೆರುಗು ತಂದಿದ್ದೀರಿ. ಪ್ರೀತಿ ಮತ್ತು ಗೌರವದೊಂದಿಗೆ ನಮ್ಮ ದೇಶವನ್ನು ಒಂದು ಹೆಮ್ಮೆಯ ರಾಷ್ಟ್ರವನ್ನಾಗಿ ಮಾಡುತ್ತೀರಿ. 2023ರ ವಿಶ್ವಕಪ್‌ನಾದ್ಯಂತ ನಿಮ್ಮ ಪ್ರಾಮಾಣಿಕ ಪ್ರಯತ್ನಗಳು ಶ್ಲಾಘನೀಯ' ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ:'ನಾವು ಯಾವಾಗಲೂ ನಿಮ್ಮೊಂದಿಗಿರುತ್ತೇವೆ': ವಿಶ್ವಕಪ್ ಸೋಲಿನ ಬಳಿಕ ಭಾರತ ಕ್ರಿಕೆಟ್ ತಂಡಕ್ಕೆ ಮೋದಿ ಸಂದೇಶ