ಹೈದರಾಬಾದ್:ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಮತ್ತು ಕ್ನನಡಿಗ ಕೆಎಲ್ ರಾಹುಲ್ ಇಂದು ಸಪ್ತಪದಿ ತುಳಿದಿದ್ದಾರೆ. ಮಹಾರಾಷ್ಟ್ರದ ಖಂಡಾಲಾದಲ್ಲಿರುವ ಸುನಿಲ್ ಶೆಟ್ಟಿ ಅವರ ಫಾರ್ಮ್‌ಹೌಸ್‌ನಲ್ಲಿ ನಿಕಟ ಕುಟುಂಬ ಮತ್ತು ಸ್ನೇಹಿತರು ಭಾಗವಹಿಸಿದ್ದ ಆತ್ಮೀಯ ಸಮಾರಂಭದಲ್ಲಿ ಇಬ್ಬರು ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ವಿವಾಹದ ಕಾರ್ಯಕ್ರಮದ ಫೋಟೋವನ್ನು ಹಂಚಿಕೊಂಡಿರುವ ಕೆಎಲ್ ರಾಹುಲ್ ನಿನ್ನ ಪ್ರೀತಿಯ ಬೆಳಕಲ್ಲಿ, ನಾನು ಹೇಗೆ ಪ್ರೀತಿಸಬೇಕೆಂದು ಕಲಿಯುತ್ತೇನೆ ಎಂದು ಬರೆದುಕೊಂಡಿದ್ದಾರೆ.
ವಿವಾಹದ ಬಗ್ಗೆ ಟ್ವೀಟ್ ಮಾಡಿರುವ ಕ್ರಿಕೆಟಿಗ ಕೆಎಲ್ ರಾಹುಲ್, ಇಂದು ನನ್ನ ಅತ್ಯಂತ ಪ್ರೀತಿಪಾತ್ರರ ಸಾಕ್ಷಿಯಾಗಿ ಮನೆಯಲ್ಲಿ ಮದುವೆಯಾದೆವು. ಅದು ನಮಗೆ ಅಪಾರ ಸಂತೋಷ ಮತ್ತು ಪ್ರಶಾಂತತೆಯನ್ನು ನೀಡಿದೆ. ತುಂಬಿದ ಹೃದಯದಿಂದ ಎಲ್ಲರಿಗೂ ಕೃತಜ್ಞತೆಗಳು. ನಮ್ಮ ದಾಂಪತ್ಯಕ್ಕೆ ನಿಮ್ಮ ಆಶೀರ್ವಾದವನ್ನು ಬಯಸುತ್ತೇವೆ ಎಂದು ಬರೆದುಕೊಂಡಿದ್ದಾರೆ.
ಅಥಿಯಾ ಮತ್ತು ಕೆಎಲ್ ರಾಹುಲ್ ವಿವಾಹ: ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ ಅವರ ಏಕೈಕ ಪುತ್ರಿ ಅಥಿಯಾ ಶೆಟ್ಟಿ ಮತ್ತು ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಇಂದು ಹಸೆಮಣೆ ಏರಿ ವಿವಾಹ ಎಂಬ ಬಂಧನಕ್ಕೆ ಒಳಗಾಗಿದ್ದಾರೆ. ಇದಕ್ಕೆ ಸಾಕ್ಷಿಯಾದ ಕೆಲ ತಾರೆಯರು ಇಬ್ಬರಿಗೂ ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿದ್ದಾರೆ
ಸಂಜಯ್ ದತ್ ಶುಭಾಶಯ ತಿಳಿಸಿ ಇನ್ಸ್ಟಾದಲ್ಲಿ ಸ್ಟೇಟಸ್ ಹಾಕಿಕೊಂಡಿರುವುದು
ಸಂಜಯ್ ದತ್:ಸಂಜಯ್ ದತ್ ಅವರು ತಮ್ಮ ಮದುವೆಯಾದ ದಂಪತಿಗಳನ್ನು ಅಭಿನಂದಿಸುತ್ತಾ ಸಾಮಾಜಿಕ ಮಾಧ್ಯಮದಲ್ಲಿ ಆಶೀರ್ವಾದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಸಂಜಯ್ ದತ್, 'ಅಣ್ಣಾ ನೀವು ಈ ವಿಶೇಷ ದಿನಕ್ಕೆ ಸಾಕ್ಷಿಯಾಗಿದ್ದಕ್ಕೆ ಅಭಿನಂದನೆಗಳು, ಅಥಿಯಾ-ರಾಹುಲ್ ಅವರ ಮದುವೆಗೆ ಅನೇಕ ಅಭಿನಂದನೆಗಳು, ಮಕ್ಕಳು ಜೀವನಕ್ಕಾಗಿ ಸಂತೋಷವಾಗಿರಲಿ' ಎಂದು ಬರೆದಿದ್ದಾರೆ.
ಅಜಯ್ ದೇವಗನ್:ಸುನೀಲ್ ಶೆಟ್ಟಿ ಅವರ ಮಗಳು ಮತ್ತು ಅಳಿಯ (ಅಥಿಯಾ-ರಾಹುಲ್) ಅವರ ಮದುವೆಗೆ ಶುಭ ಹಾರೈಸುತ್ತಾ, ಸಿಂಗಂ ಸ್ಟಾರ್ ಅಜಯ್ ದೇವಗನ್ ಬರೆದಿದ್ದಾರೆ, "ನನ್ನ ಸ್ನೇಹಿತ ಸುನಿಲ್ ನಿಮಗೆ ಅನೇಕ ಅಭಿನಂದನೆಗಳು ... ಸುಂದರ ದಂಪತಿಗೆ ಅನೇಕ ಅಭಿನಂದನೆಗಳು ಮತ್ತು ಆಶೀರ್ವಾದಗಳು, ಯಾವಾಗಲೂ ಅವರ ಪ್ರೀತಿ ಸಮೃದ್ಧವಾಗಿರಲಿ." ಎಂದು ಶುಭ ಸಂದರ್ಭದಲ್ಲಿ ಶುಭಾಶಯ ಎಂದಿದ್ದಾರೆ.
ಅತಿಥಿಗಳನ್ನು ಸ್ವಾಗತಿಸುತ್ತಿರುವ ಸುನಿಲ್ ಶೆಟ್ಟಿ ಮತ್ತು ಅವರ ಪುತ್ರ
ಇಶಾ ಡಿಯೋಲ್:ಬಾಲಿವುಡ್‌ನ ಡಿಯೋಲ್ ಕುಟುಂಬದ ಮಗಳು ಇಶಾ ಡಿಯೋಲ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಟ್ವೀಟ್ ಮೂಲಕ ಅಥಿಯಾ-ರಾಹುಲ್ ಅವರ ಮದುವೆಗೆ ಶುಭಹಾರೈಸಿದ್ದಾರೆ. ಇಶಾ ತಮ್ಮ ಅಭಿನಂದನಾ ಸಂದೇಶದಲ್ಲಿ, 'ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಅವರಿಗೆ ಶುಭಾಶಯಗಳು, ದೇವರು ನಿಮ್ಮಿಬ್ಬರನ್ನು ಆಶೀರ್ವದಿಸಲಿ, ಪ್ರೀತಿ ಮುಂದುವರಿಯಲಿ ಎಂದು ಬರೆದುಕೊಂಡಿದ್ದಾರೆ.
ಸಪ್ತಪದಿ ತುಳಿಯುತ್ತಿರುವ ನವ ಜೋಡಿ
ಮದುವೆಯಲ್ಲಿ ದಕ್ಷಿಣ ಭಾರತದ ಖಾದ್ಯದ ವ್ಯವಸ್ಥೆ:ಸುನೀಲ್ ಶೆಟ್ಟಿ ಅವರು ತಮ್ಮ ಮಗಳು ಅಥಿಯಾ ಅವರ ಮದುವೆಗೆ ದಕ್ಷಿಣ ಭಾರತದ ವಿಶೇಷ ಖಾದ್ಯವನ್ನು ಸಿದ್ಧಪಡಿಸಿದ್ದಾರೆ. ಮದುವೆಗೆ ಬರುವ ಅತಿಥಿಗಳಿಗೆ ತಟ್ಟೆಯಲ್ಲಿ ಅಲ್ಲ ಬಾಳೆ ಎಲೆಯಲ್ಲಿ ಊಟ ಬಡಿಸಲಾಗುತ್ತಿದೆ. ಅಥಿಯಾ ಮತ್ತು ಕೆಎಲ್ ರಾಹುಲ್ ಸೋಮವಾರ ಸಂಜೆ 4 ಗಂಟೆಗೆ ಖಂಡಾಲಾ ಬಂಗಲೆಯಲ್ಲಿ ವಿವಾಹವಾಗಿದ್ದಾರೆ. ಅಥಿಯಾ ಮತ್ತು ಕೆಎಲ್ ರಾಹುಲ್ ಮದುವೆಗೆ ಸುಮಾರು 100 ಅತಿಥಿಗಳು ಸಾಕ್ಷಿಯಾಗಿದ್ದಾರೆ.
ಕೆ ಎಲ್ ರಾಹುಲ್ ಮತ್ತು ಅಥಿಯಾ ನಡುವಿನ ಪ್ರೇಮ ಸಂಬಂಧದ ಬಗ್ಗೆ ಎರಡು ಮೂರು ವರ್ಷಗಳಿಂದ ಗಾಸಿಪ್ಗಳು ಹರಿದಾಡುತ್ತಿದ್ದವು. ಆದರೆ ಹೋದ ವರ್ಷ ಅಥಿಯಾ ಜನ್ಮದಿನದಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೆ ಎಲ್ ರಾಹುಲ್ ಶುಭಾಶಯ ಕೋರುವ ಮೂಲಕ ತಮ್ಮ ಪ್ರೀತಿಯ ಬಗ್ಗೆ ಎಲ್ಲರಿಗೂ ತಿಳಿಸಿದರು. ನಂತರ ಡೇಟಿಂಗ್ನಲ್ಲಿದ್ದ ಜೋಡಿ ಇಂದು ಸಪ್ತಪದಿ ತುಳಿದಿದ್ದಾರೆ.
ಇದನ್ನೂ ಓದಿ:ಕೆಎಲ್ ರಾಹುಲ್ ಅಷ್ಟೇ ಅಲ್ಲ, ಬಾಲಿವುಡ್ ನಟಿಯರನ್ನು ತಮ್ಮ ಬಾಳ ಸಂಗಾತಿಯನ್ನಾಗಿ ಮಾಡಿಕೊಂಡ ಭಾರತೀಯ ಕ್ರಿಕೆಟಿಗರು ಇವರು!