ಕರ್ನಾಟಕ

karnataka

ETV Bharat / entertainment

ಯುವನಟ ರಥ ಕಿರಣ್​ ಅಭಿನಯದ ಅಭಿರಾಮಚಂದ್ರ ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಸಾಥ್

ನಟ ರಥ ಕಿರಣ್​ ಅವರ ಆಲ್ಬಂ ಸಾಂಗ್​ ಅನ್ನು ಪಿಆರ್​ಕೆ ಯೂಟ್ಯೂಬ್​ ಚಾನೆಲ್​ನಲ್ಲಿ ಪ್ರಸ್ತುತ ಪಡಿಸಿದ್ದ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಇದೀಗ ನಟನ ಮೊದಲ ಸಿನಿಮಾದ ಪೋಸ್ಟರ್​ ರಿಲೀಸ್​ ಮಾಡಿ ಆಲ್​ ದಿ ಬೆಸ್ಟ್​ ಹೇಳಿದ್ದಾರೆ.

Ashwini Puneeth Rajkumar released Abhiramachandra Poster
ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ ರಿಲೀಸ್​ ಮಾಡಿದ ಅಶ್ವಿನಿ ಪುನೀತ್​ ರಾಜ್​ಕುಮಾರ್​

By

Published : Jan 20, 2023, 3:38 PM IST

Updated : Jan 20, 2023, 4:01 PM IST

ಅಭಿರಾಮಚಂದ್ರ ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಸಾಥ್

ಸ್ಯಾಂಡಲ್​ವುಡ್​ನಲ್ಲಿ 'ಅಲೆಯಾಗಿ ಬಾ...' ಎಂಬ ಆಲ್ಬಂ ಸಾಂಗ್ ಮೂಲಕ ಗಮನ ಸೆಳೆದ ಯುವ ನಟ‌ ರಥ ಕಿರಣ್​. ಈ‌ ಆಲ್ಬಂ ಸಾಂಗ್ ಸಕ್ಸಸ್ ನಂತರ ರಥ ಕಿರಣ್ ಈಗ ಪೂರ್ಣ ಪ್ರಮಾಣದ ಹೀರೋ ಚಂದವನಕ್ಕೆ ಎಂಟ್ರಿ ಕೊಡ್ತಾ ಇದ್ದಾರೆ‌. ಬಿ ನಾಗೇಂದ್ರ ಗಾಣಿಗ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಅಭಿರಾಮಚಂದ್ರ' ಸಿನಿಮಾ ಮೂಲಕ ಚಂದನವನದಲ್ಲಿ ಸಿನಿ ಜರ್ನಿ ಆರಂಭಿಸಿದ್ದಾರೆ ರಥ ಕಿರಣ. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್​ ಅನ್ನು ಅಶ್ವಿನಿ ಪುನೀತ್ ರಾಜ್‍ಕುಮಾರ್ ಅನಾವರಣ ಮಾಡುವ ಮೂಲಕ ಇಡೀ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.

ಟೈಟಲ್ ಮೂಲಕವೇ ಗಮನ ಸೆಳೆಯುತ್ತಿರುವ ‘ಅಭಿರಾಮಚಂದ್ರ’ ಸಿನಿಮಾಗೆ ನಾಗೇಂದ್ರ ಗಾಣಿಗ ಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಿರಿಕ್ ಪಾರ್ಟಿ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ನಾಗೇಂದ್ರ ಗಾಣಿಗ ಅವರು ‘ಅಭಿರಾಮಚಂದ್ರ’ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಚೈಲ್ಡ್​ವುಡ್ ಸ್ನೇಹ, ಪ್ರೀತಿ ಹಾಗೂ ತ್ರಿಕೋನ ಪ್ರೇಮಕಥೆ ಹೊತ್ತ ಚಿತ್ರದಲ್ಲಿ ರಥ ಕಿರಣ ನಾಯಕ ನಟನಾಗಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಸಿದ್ದು ಮೂಲಿಮನಿ, ನಾಟ್ಯರಂಗ ಕೂಡ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ನಾಯಕಿಯಾಗಿ ಶಿವಾನಿ ರೈ ನಟಿಸಿದ್ದಾರೆ.

ಅಭಿಮಾರಚಂದ್ರ ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​

ಬಹುತೇಕ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಆಗಿದೆ. ಸದ್ಯದಲ್ಲೇ ಸಿನಿಮಾ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಕುಂದಾಪುರ, ಬೆಂಗಳೂರು, ಮೈಸೂರಿನಲ್ಲಿ ಸಿನಿಮಾವನ್ನು ಸೆರೆ ಹಿಡಿಯಲಾಗಿದೆ. ರವಿ ಬಸ್ರೂರು ಸಂಗೀತ ನಿರ್ದೇಶನದಲ್ಲಿ 'ಅಭಿರಾಮಚಂದ್ರ' ಸಿನಿಮಾ ಮೂಡಿ ಬರುತ್ತಿದ್ದು, ರವಿ ಬಸ್ರೂರು ಮೂವೀಸ್ ಬ್ಯಾನರ್​ ಅಡಿ ಸಿನಿಮಾವನ್ನು ಪ್ರಸ್ತುತ ಪಡಿಸಲಾಗುತ್ತಿದೆ. ರವಿ ಬಸ್ರೂರು ಪುತ್ರ ಪವನ್ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದು, ವೀಣಾ ಸುಂದರ್, ಸುಂದರ್ ವೀಣಾ, ಎಸ್. ನಾರಾಯಣ್, ಪ್ರಕಾಶ್ ತೂಮಿನಾಡು ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾ ಬಳಗದಲ್ಲಿದ್ದಾರೆ.

ಎ.ಜಿ.ಎಸ್ ಎಂಟರ್ಟೈನ್ಮೆಂಟ್ ಹಾಗೂ ರವಿ ಬಸ್ರೂರು ಮ್ಯೂಸಿಕ್ ಮತ್ತು ಮೂವೀಸ್ ಬ್ಯಾನರ್ ನಡಿ ಎ.ಜಿ. ಸುರೇಶ್ ಹಾಗೂ ಮಲ್ಲೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಸುರೇಶ್ ಆರುಮುಗಂ ಸಂಕಲನ ಚಿತ್ರಕ್ಕಿದೆ. ಸದ್ಯ ಪೋಸ್ಟರ್​ನಿಂದ‌ ಗಮನ ಸೆಳೆಯುತ್ತಿರೋ ಅಭಿರಾಮಚಂದ್ರ ಚಿತ್ರದ ಟ್ರೇಲರ್ ಅನ್ನು ಕೂಡ ಶೀಘ್ರದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.

ಅಶ್ವಿನಿ ಪುನೀತ್​ ರಾಜ್​ಕುಮಾರ್​ ಹಾಗೂ ನಟ ರಥ ಕಿರಣ್​

ಪಿಆರ್​ಕೆ ಮೊದಲ ಆಲ್ಬಂ ಸಾಂಗ್​ 'ಅಲೆಯಾಗಿ ಬಾ..':ನಟರಥ ಕಿರಣ್​ ಹಾಗೂ ಡಾ. ಹರ್ಷಿತಾ ಅವರು ಅಭಿನಯಿಸಿದ್ದ ಆಲ್ಬಂ ಸಾಂಗ್​ 'ಅಲೆಯಾಗಿ ಬಾ..' ಪಿಆರ್​ಕೆ ಯುಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆಯಾಗಿತ್ತು. ಇದು ಪಿಆರ್​ಕೆ ಪ್ರಸ್ತುತ ಪಡಿಸಿದ ಮೊದಲ ಆಲ್ಬಂ ಸಾಂಗ್​ ಆಗಿತ್ತು. ಲೋಹಿತ್​ ಕೀರ್ತಿ ಅವರು ಆಲ್ಬಂ ಸಾಂಗ್​ಗೆ ಆ್ಯಕ್ಷನ್​ ಕಟ್​ ಹೇಳಿದ್ದರು. ಭರತ್​ ಬಿಜೆ ಅವರ ಸಂಗೀತ ನಿರ್ದೇಶನ ಈ ಆಲ್ಬಂ ಸಾಂಗ್​ಗೆ ರಾಜೇಶ್​ ಕೃಷ್ಣನ್​ ಮತ್ತು ಆಶಾ ಭಟ್​ ಅವರು ಧ್ವನಿಯಾಗಿದ್ದರು.

ರುಣಾಯು ಪ್ರೊಡಕ್ಷನ್​ ಹೌಸ್​ ಅಡಿಯಲ್ಲಿ ಮಲ್ಲೇಶ್​ ಹಾಗೂ ಸುರೇಶ್​ ಈ ಆಲ್ಬಂ ಸಾಂಗ್​ ಅನ್ನು ನಿರ್ಮಾಣ ಮಾಡಿದ್ದರು. ಇದೀಗ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರ ಹೋಂ ಪ್ರೊಡಕ್ಷನ್​ ಪಿಆರ್​ಕೆ ಮೊದಲ ಆಲ್ಬಂ ಸಾಂಗ್​ನಲ್ಲಿ ಅಭಿನಯಿಸಿದ್ದ ನಟ ರಥ ಕಿರಣ್​ ಅವರ ಮೊದಲ ಚಿತ್ರಕ್ಕೆ ಅಶ್ವಿನಿ ಪುನೀತ್​ ರಾಜ್​ ಕುಮಾರ್​ ಅವರು ಪೋಸ್ಟರ್​ ರಿಲೀಸ್​ ಮಾಡುವ ಮೂಲಕ ಸಾಥ್​ ಕೊಟ್ಟಿದ್ದಾರೆ.

ಇದನ್ನೂ ಓದಿ:ನಟ್ವರ್ ಲಾಲ್ ಟೀಸರ್ ರಿಲೀಸ್​: ತನುಷ್ ಜೋಡಿಯಾಗಿ ಸೋನಲ್ ಮೊಂಥೆರೋ

Last Updated : Jan 20, 2023, 4:01 PM IST

ABOUT THE AUTHOR

...view details