ಕರ್ನಾಟಕ

karnataka

ETV Bharat / entertainment

ವೀಕೆಂಡ್ ವಿತ್ ರಮೇಶ್ 5ನೇ ಸೀಸನ್: ಸಾಧಕರ ಸೀಟ್​ನಲ್ಲಿ ಅಶ್ವಿನಿ ಪುನೀತ್ ರಾಜ್​ಕುಮಾರ್?

ವೀಕೆಂಡ್ ವಿತ್ ರಮೇಶ್ 5ನೇ ಸೀಸನ್​ಗೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಅತಿಥಿಯಾಗಿ ಆಗಮಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಶ್ವಿನಿ ಪುನೀತ್ ರಾಜ್​ಕುಮಾರ್
ಅಶ್ವಿನಿ ಪುನೀತ್ ರಾಜ್​ಕುಮಾರ್

By

Published : Mar 10, 2023, 10:59 PM IST

ಸಾಧಕರ ಸಾಧನೆಯ ಹಾದಿಯ ಬಗ್ಗೆ ಯುವ ಜನತೆಗೆ ಸ್ಫೂರ್ತಿ ತುಂಬುವ ಕನ್ನಡ ಪ್ರಖ್ಯಾತ ರಿಯಾಲಿಟಿ ಶೋ‌ ಎಂದರೆ ಅದು ವೀಕೆಂಡ್ ವಿತ್ ರಮೇಶ್. ಕನ್ನಡ ಚಿತ್ರರಂಗದ ಎವರ್ ಗ್ರೀನ್ ಹೀರೋ ರಮೇಶ್ ಅರವಿಂದ್ ನಡೆಸಿ ಕೊಡುವ ಈ ಕಾರ್ಯಕ್ರಮ ನೋಡಲು ಚಿಕ್ಕವರಿಂದ ಹಿಡಿದು ದೊಡ್ಡವರತನಕ ಎಲ್ಲರೂ ಕಾತರದಿಂದ ಕಾಯುತ್ತಿರುತ್ತಾರೆ. ರಮೇಶ್ ಅರವಿಂದ್ ಅವರ ಕನ್ನಡ ಭಾಷೆಯ ಮೇಲಿನ ಹಿಡಿತ, ಅವರು ಹೋಸ್ಟ್ ಮಾಡುವ ರೀತಿ ಕನ್ನಡಿಗರು ಮನಸೋತಿದ್ದಾರೆ.

ಈಗಾಗಲೇ ನಾಲ್ಕು ಸೀಸನ್‌ಗಳನ್ನು ಯಶಸ್ವಿಯಾಗಿ ಪೂರೈಸಿರೋ ರಮೇಶ್ ಅರವಿಂದ್, ಈಗ 5ನೇ ಸೀಸನ್ ನಡೆಸಿ ಕೊಡಲು ಉತ್ಸುಕರಾಗಿದ್ದಾರೆ. ಸದ್ಯಕ್ಕೆ ವೀಕೆಂಡ್ ವಿತ್ ರಮೇಶ್ ರಿಯಾಲಿಟಿ ಶೋನ ಸಣ್ಣ ಪ್ರೋಮೋ ಕೂಡ ರಿವೀಲ್ ಆಗಿದೆ. ಇದರ ಬೆನ್ನಲ್ಲೇ ಈ ಬಾರಿಯ ಶೋನಲ್ಲಿ ಯಾರೆಲ್ಲ ಸಾಧಕರನ್ನ ಈ ಸಾಧನೆಯ ಹಾಟ್ ಸೀಟ್​​ನಲ್ಲಿ ಕುಳಿತುಕೊಳ್ಳಲಿದ್ದಾರೆ ಎಂಬ ಕುತೂಹಲ ಇಡೀ ಕರ್ನಾಟಕದ ಜನತೆಯಲ್ಲಿ ಮನೆ ಮಾಡಿದೆ.

ಈ ಮಧ್ಯೆ ಈ ವೀಕೆಂಡ್ ವಿತ್ ರಮೇಶ್ ಸೀಸನ್ 5ರಲ್ಲಿ ದೊಡ್ಮನೆಯಿಂದ ಈ ಶೋಗೆ ಅತಿಥಿಯಾಗಿ ಬರ್ತಾರೆ ಎಂಬ ಸುದ್ದಿಯೊಂದು ಚಿತ್ರರಂಗದಲ್ಲಿ ಹೆಚ್ಚು ಕೇಳಿ ಬರುತ್ತಿದೆ. ಯಾರು ಆ ದೊಡ್ಮನೆಯವರು ಅಂತೀರಾ? ಅವರೇ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್. ಹೌದು, ಈ ವೀಕೆಂಡ್ ವಿತ್ ರಮೇಶ್ ಸೀಸನ್ 5ರಲ್ಲಿ ಅಶ್ವಿನಿ ಅವರು ಅತಿಥಿಯಾಗಿ ಬರಲಿದ್ದಾರಂತೆ.

ಮೊದಲ ಸಂಚಿಕೆಯ ಮೊದಲ ಅತಿಥಿಯಾಗಿದ್ರು ಅಪ್ಪು: ಇನ್ನು ವೀಕೆಂಡ್ ವಿತ್ ರಮೇಶ್‌ನ ಮೊದಲ ಸೀಸನ್‌ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮೊದಲ ಸಂಚಿಕೆಗೆ ಅತಿಥಿಯಾಗಿ ಆಗಮಿಸಿದ್ದರು. ಪುನೀತ್ ರಾಜ್‌ಕುಮಾರ್ ಶೋನಲ್ಲಿ ಭಾಗವಹಿಸಿದ್ದಕ್ಕೆ ಯಾವುದೇ ಸಂಭಾವನೆ ಪಡೆದಿಲ್ಲ ಎಂದು ವರದಿಯಾಗಿತ್ತು. ಇದೀಗ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ ಯಾವುದೇ ಸಂಭಾವನೆ ಪಡೆಯದೇ ಶೋನಲ್ಲಿ ಭಾಗವಹಿಸುತ್ತಿದ್ದಾರಂತೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಧಾರಕ್ಕೆ ರಾಜವಂಶದ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನು ಈ ವೀಕೆಂಡ್ ವಿತ್ ರಮೇಶ್ ಸೀಸನ್ 5ರಲ್ಲಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅಲ್ಲದೇ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಡಾಲಿ ಧನಂಜಯ್, ಮೋಹಕ‌ ತಾರೆ ರಮ್ಯಾ, ರಾಜಕಾರಣಿ ಬಿ.ಎಸ್ ಯಡಿಯೂರಪ್ಪ, ಕ್ರಿಕೆಟ್ ಸ್ಟಾರ್​​ಗಳಾದ ರಾಹುಲ್ ದ್ರಾವಿಡ್, ಜಾವಗಲ್‌ ಶ್ರೀನಾಥ್, ವೆಂಕಟೇಶ್ ಪ್ರಸಾದ್ ಸೇರಿದಂತೆ ಇನ್ನು ಹಲವು ಸಾಧಕರು ಭಾಗವಹಿಸಲಿದ್ದಾರೆ ಅಂತಾ ವೀಕೆಂಡ್ ವಿತ್ ರಮೇಶ್ ಶೋನ ನಿರ್ದೇಶಕರ ಆಪ್ತವಲಯ ಹೇಳುತ್ತಿದೆ. ಆದರೆ ಈ ಬಾರಿಯ ವೀಕೆಂಡ್ ವಿತ್ ರಮೇಶ್ ಸೀಸನ್ 5ರಲ್ಲಿ ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಭಾಗವಹಿಸುತ್ತಿರುವುದು ಅಪ್ಪು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಇದನ್ನೂ ಓದಿ: ಆಸ್ಕರ್​ ವೇದಿಕೆಯಲ್ಲಿ ನಾಟು ನಾಟು ಹಾಡಿಗೆ ನೃತ್ಯ ಮಾಡಲಿದ್ದಾರಾ ರಾಮ್​​ಚರಣ್​, ಜೂ.ಎನ್​ಟಿಆರ್​?!

ABOUT THE AUTHOR

...view details