ಕರ್ನಾಟಕ

karnataka

ETV Bharat / entertainment

'ಚಿಕ್ಕಿಯ ಮೂಗುತಿ‌' ಚಿತ್ರಕ್ಕೆ ಸಿಕ್ತು ಅಶ್ವಿನಿ ಪುನೀತ್ ರಾಜ್‍ಕುಮಾರ್ ಸಾಥ್ - ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ

ಸಿನಿಮಾದ ಟೀಸರ್ ಇದೇ ತಿಂಗಳು 20ಕ್ಕೆ ಪಿಆರ್‌ಕೆ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ.

Ashwini Puneeth Rajkumar Support to Chikkiya Muguthi Film
'ಚಿಕ್ಕಿಯ ಮೂಗುತಿ‌' ಚಿತ್ರಕ್ಕೆ ಸಿಕ್ತು ಅಶ್ವಿನಿ ಪುನೀತ್ ರಾಜ್‍ಕುಮಾರ್ ಸಾಥ್'

By ETV Bharat Karnataka Team

Published : Oct 16, 2023, 3:04 PM IST

ಲವ್ ಸ್ಟೋರಿ, ಕ್ರೈಮ್, ಹಾರರ್ ಸಿನಿಮಾಗಳ ನಡುವೆ ಆಗಾಗ ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ, ವಿನೂತನ ಕಾನ್ಸೆಪ್ಟ್‌ನ ಚಿತ್ರಗಳು ಸಹ ಸದ್ದು ಮಾಡುತ್ತಿರುತ್ತವೆ. ಇದೀಗ ಮತ್ತೊಂದು ಹೊಸ ಬಗೆಯ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಅದೇ ಚಿಕ್ಕಿಯ ಮೂಗುತಿ. ದೇವಿಕಾ ಜನಿತ್ರಿ ನಿರ್ದೇಶನದ ಚಿಕ್ಕಿಯ ಮೂಗುತಿ ಸಿನಿಮಾ ಸದ್ಯ ಟೀಸರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ಈ ಸಿನಿಮಾಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಸಾಥ್ ಸಿಕ್ಕಿದೆ.

ಚಿಕ್ಕಿಯ ಮೂಗುತಿ‌ ಚಿತ್ರದ ದೃಶ್ಯ

ಯೆಸ್ ಪವರ್ ಸ್ಟಾರ್​ರಂತೆ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಹೊಸ‌ ಪ್ರತಿಭೆಗಳ ಸಿನಿಮಾಗಳಿಗೆ ಸಪೋರ್ಟ್ ಮಾಡ್ತಾನೆ‌ ಇದ್ದಾರೆ. ಅಪ್ಪು ಹಾಗೂ ಅಶ್ವಿನಿಯವರ ಆತ್ಮೀಯರು ಆಗಿರುವ ದೇವಿಕಾ ನಿರ್ದೇಶದ ಮೊದಲ ಸಿನಿಮಾ ಇದಾಗಿದೆ. ಚಿಕ್ಕಿಯ ಮೂಗುತಿ ಕಾದಂಬರಿ ಆಧಾರಿತ ಸಿನಿಮಾವಾಗಿದ್ದು, ವಿಶೇಷ ಎಂದರೆ ದೇವಕಿ ಜನಿತ್ರಿ ಅವರೇ ಬರೆದಿದ್ದ ಕಾದಂಬರಿಯೇ ಈಗ ಚಿತ್ರವಾಗಿ ಮೂಡಿ ಬರುತ್ತಿದೆ. ಇನ್ನು ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಚಿಕ್ಕಿಯ ಮೂಗುತಿ‌ ಚಿತ್ರದ ದೃಶ್ಯ

ಅಂದಹಾಗೆ 'ಚಿಕ್ಕಿಯ ಮೂಗುತಿ' ಹೆಸರೇ ಹೇಳುವ ಹಾಗೆ ಇದೊಂದು ಮಹಿಳಾ ಪ್ರಧಾನ ಸಿನಿಮಾ. ಹೆಣ್ಣು ಮಕ್ಕಳ ಹೋರಾಟ, ಶೋಷಣೆ ಬಗ್ಗೆ ಇರುವ ಚಿತ್ರ ಇದಾಗಿದೆ. ಹಿರಿಯ ನಟಿ ತಾರಾ ಅನುರಾಧಾ, ಶ್ವೇತಾ ಶ್ರೀವಾತ್ಸವ್, ಭವಾನಿ ಪ್ರಕಾಶ್, ಅವಿನಾಶ್, ತಬಲ ನಾಣಿ, ರಂಗಾಯಣ ರಘು, ಭರತ್ ಬೋಪಣ್ಣ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ವಿಶೇಷ ಎಂದರೆ ಈ ಸಿನಿಮಾಗೆ ಹೆಣ್ಣು ಮಕ್ಕಳೇ ಶಕ್ತಿ ಎಂದರೆ ತಪ್ಪಾಗಲ್ಲ. ಏಕೆಂದರೆ ನಿರ್ದೇಶಕಿ ಸೇರಿದಂತೆ ಬಹುತೇಕರು ಹೆಣ್ಣು ಮಕ್ಕಳೇ ಸೇರಿಕೊಂಡು ಮಾಡಿರುವ ಸಿನಿಮಾ ಇದಾಗಿದೆ.

ಚಿಕ್ಕಿಯ ಮೂಗುತಿ‌ ಚಿತ್ರದ ದೃಶ್ಯ

ಮಹಿಳೆಯರಿಗೂ ಇದೆ ಮೀಸಲಾತಿ:ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ತಾರಾ, ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದಂತೆ ಈ ಸಿನಿಮಾದಲ್ಲೂ ಮಹಿಳೆಯರಿಗೂ ಮೀಸಲಾತಿ ಇದೆ. ಎಲ್ಲರೂ ಹೆಣ್ಣು ಮಕ್ಕಳೇ ಸೇರಿಕೊಂಡು ಮಾಡಿರುವ ಸಿನಿಮಾ, ಅದ್ಭತವಾಗಿ ಸಿನಿಮಾ ಮೂಡಿಬಂದಿದೆ. ದೇವಿಕಾ ಅವರ ಮೊದಲು ಸಿನಿಮಾ ಅಂತ ಅನಿಸುವುದೇ ಇಲ್ಲ, ಉತ್ತಮವಾಗಿ ಮೂಡಿ ಬಂದಿದೆ ಎಂದು ಹೇಳಿದರು.

ಚಿಕ್ಕಿಯ ಮೂಗುತಿ‌ ಚಿತ್ರದ ದೃಶ್ಯ

ಇನ್ನು ನಟಿ ಶ್ವೇತಾ ಶ್ರೀವಾತ್ಸವ್​ ಮಾತನಾಡಿ, ಮಗುವಿಗೆ ಜನ್ಮ ನೀಡಿದ ಬಳಿಕ ನಟನೆ ಮಾಡಿದ ಮೊದಲ ಸಿನಿಮಾ ಎಂದು ಹೇಳಿದರು. ಭವಾನಿ ಪ್ರಕಾಶ್ ಕೂಡ ಪಾತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಚಿಕ್ಕಿಯ ಮೂಗುತಿ‌ ಚಿತ್ರದ ದೃಶ್ಯ

ನಿರ್ದೇಶಕಿ ದೇವಿಕಾ ಅವರು ಈ ಮೊದಲು ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು. ಅನೇಕ 40ಕ್ಕೂ ಅಧಿಕ ಕಾದಂಬರಿಗಳನ್ನು ಬರೆದಿದ್ದಾರೆ. ಇದೀಗ ಅವರ ಒಂದು ಕಾದಂಬರಿ ಚಿಕ್ಕಿಯ ಮೂಗುತಿ ಸಿನಿಮಾವಾಗಿ ತೆರೆ ಮೇಲೆ ಬರಲು ಸಜ್ಜಾಗಿದೆ. ಸದ್ಯ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿಕ್ಕಿಯ ಮೂಗುತಿ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ. ಸಿನಿಮಾದ ಟೀಸರ್ ಇದೇ ತಿಂಗಳು 20ಕ್ಕೆ ಪಿಆರ್‌ಕೆ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ.

ಚಿಕ್ಕಿಯ ಮೂಗುತಿ‌ ಚಿತ್ರದ ದೃಶ್ಯ

ಚಿಕ್ಕಿಯ ಮೂಗುತಿ ಚಿತ್ರ ಜನಿತ್ರಿ ಪ್ರೊಡಕ್ಷನ್ ನಿರ್ಮಾಣವಾಗಿದೆ. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿದ್ದು, ವೆಂಕಟೇಶ್ ಆರ್ ಕ್ಯಾಮೆರಾ ವರ್ಕ್ ಜೊತೆಗೆ ಎಡಿಟಿಂಗ್ ಕೂಡ ಮಾಡಿದ್ದಾರೆ. ಸದ್ಯ ಟೀಸರ್ ರಿಲೀಸ್ ಮಾಡಿರುವ ತಂಡ ಆದಷ್ಟು ಬೇಗ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲಿದ್ದಾರೆ.

ಚಿಕ್ಕಿಯ ಮೂಗುತಿ‌ ಚಿತ್ರದ ದೃಶ್ಯ

ಇದನ್ನೂ ಓದಿ:ಪ್ರಜ್ವಲ್ ದೇವರಾಜ್ 40ನೇ ಸಿನಿಮಾಗೆ ಗುರುದತ್ ಗಾಣಿಗ ಆ್ಯಕ್ಷನ್ ಕಟ್..

ABOUT THE AUTHOR

...view details