‘ನಮ್ ಗಣಿ ಬಿಕಾಂ ಪಾಸ್, ‘ಗಜಾನನ ಆ್ಯಂಡ್ ಗ್ಯಾಂಗ್’ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಅಭಿಷೇಕ್ ಶೆಟ್ಟಿ ನಿರ್ದೇಶನದ ಆರಾಮ್ ಅರವಿಂದ್ ಸ್ವಾಮಿ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು ಶುಭ ಹಾರೈಸಿದ್ದಾರೆ. ತಂಡ ಕೂಡ ಅಶ್ವಿನಿ ಅವರ ಶುಭಾಶಯಗಳಿಗೆ ಧನ್ಯವಾದ ತಿಳಿಸಿ ಟ್ವೀಟ್ ಮಾಡಿದೆ.
ರೋಮ್ಯಾಂಟಿಕ್ ಕಾಮಿಡಿ ಸಿನಿಮಾದ ಈ ಚಿತ್ರದಲ್ಲಿ ಅಕಿರ ಸಿನಿಮಾ ಖ್ಯಾತಿಯ ನಟ ಅನೀಶ್ ತೇಜೇಶ್ವರ್,ಅರವಿಂದ್ ಸ್ವಾಮಿಯಾಗಿ ಮಿಂಚಿದ್ದಾರೆ. ಇವರಿಗೆ ನಾಯಕಿಯರಾಗಿ ಲವ್ ಮಾಕ್ಟೇಲ್ ಬೆಡಗಿ ಮಿಲನ ನಾಗರಾಜ್ ಮತ್ತು ಹೃತಿಕ ಶ್ರೀನಿವಾಸ್ ಕಾಣಿಸಿಕೊಳ್ಳಲಿದ್ದಾರೆ. ಕ್ಯಾಶುಯಲ್ ಲುಕ್ನಲ್ಲಿ ಬಜಾಜ್ ಸ್ಕೂಟರ್ನಲ್ಲಿ ನಟ ಅಜನೀಶ್ ಕುಳಿತಿದ್ದು, ಎಷ್ಟೇ ಒತ್ತಡದಲ್ಲಿ ತಾವು ಆರಾಮ್ ಆಗಿರುವಂತೆ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
‘ಆರಾಮ್ ಅರವಿಂದ್ ಸ್ವಾಮಿ'ಗೆ ಅಭಿಷೇಕ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಹಲವು ಹಿಟ್ ಚಿತ್ರಗಳನ್ನು ನೀಡಿರುವ ಅಭಿಷೇಕ್ ಅವರು ಮತ್ತೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾದ ಮೂಲಕ ಪ್ರೇಕ್ಷಕರನ್ನು ಸೆಳೆಯಲಿದ್ದಾರೆ. ಈಗಾಗಲೇ ಚಿತ್ರೀಕರಣ ಭರದಿಂದ ಸಾಗಿದ್ದು, ಮೊದಲ ಹಂತದ ಚಿತ್ರೀಕರಣ ಮುಗಿಸಿದೆ.
ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ನೀಡಿದ್ದು, ‘ಅಕಿರ’ ಖ್ಯಾತಿಯ ಶ್ರೀಕಾಂತ್ ಪ್ರಸನ್ನ, ‘ಗುಳ್ಟು’ ಸಿನಿಮಾ ಖ್ಯಾತಿಯ ಪ್ರಶಾಂತ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತ ಎರಡು ಶೆಡ್ಯೂಲ್ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಮೂರನೇ ಶೆಡ್ಯೂಲ್ ಕೇರಳದಲ್ಲಿ ಸೆರೆ ಹಿಡಿಯಲು ಪ್ಲ್ಯಾನ್ ಮಾಡಿಕೊಂಡಿದೆ. ಚಿತ್ರಕ್ಕೆ ಸಾಗರ್ ಛಾಯಾಗ್ರಹಣ, ಉಮೇಶ್ ಸಂಕಲನವಿದೆ.
ಅನೀಶ್ ತೇಜೇಶ್ವರ್ ಅವರ ಹುಟ್ಟುಹಬ್ಬದ ದಿನದಂದು ಚಿತ್ರತಂಡ ಅವರಿಗೆ ಉಡುಗೊರೆಯಾಗಿ ವಿಭಿನ್ನವಾಗಿ ವಿಡಿಯೋವನ್ನು ಬಿಡುಗಡೆ ಮಾಡಿತ್ತು. ಸಿನಿಮಾದಲ್ಲಿ ನಟಿ ಮಿಲನಾ ನಾಗರಾಜ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಮಲಯಾಳಂ ಬೆಡಗಿಯಾಗಿ ಟೀಚರ್ ಪಾತ್ರವನ್ನು ಅವರು ಚಿತ್ರದಲ್ಲಿ ನಿರ್ವಹಿಸುತ್ತಿದ್ದು, ಚಿತ್ರದಲ್ಲಿನ ಅವರ ಪೋಸ್ಟರ್ ಅನ್ನು ಕೂಡ ಶೀಘ್ರದಲ್ಲೇ ಹಂಚಿಕೊಳ್ಳುವುದಾಗಿ ಚಿತ್ರತಂಡ ತಿಳಿಸಿದೆ.
ಲವ್ ಮಾಕ್ಟೇಲ್ 3ಗೆ ಸಜ್ಜಾದ ಕೃಷ್ಣ: ಕಳೆದ ಮೂರು ವರ್ಷಗಳ ಹಿಂದೆ ಲವ್ ಮಾಕ್ಟೇಲ್ನಂತಹ ಸೂಪರ್ ಹಿಟ್ ಸಿನಿಮಾ ನೀಡಿದ್ದರು ಮಿಲನಾ- ಕೃಷ್ಣ ಜೋಡೊ. ಇದರ ಯಶಸ್ಸಿನಿಂದಾಗಿ ಲವ್ ಮಾಕ್ಟೇಲ್ 2 ಅನ್ನು ನಿರ್ಮಿಸಿ ಅದರಲ್ಲೂ ಯಶಸ್ಸು ಕಂಡಿದ್ದರು. ಆದಿ ನಿಧಿಯ ಈ ಎರಡು ಚಿತ್ರಗಳು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದವು. ಇದೀಗ ಈ ಚಿತ್ರದ ಮೂರನೇ ಭಾಗಕ್ಕೆ ಕೃಷ್ಣ ಸಜ್ಜಾಗಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಜೊತೆಗೆ ಶಾಕ್ ನೀಡಿದ್ದಾರೆ. ಕಾರಣ, ಲವ್ ಮಾಕ್ಟೇಲ್ನಲ್ಲೇ ಅಂತ್ಯ ಕಂಡ ನಿಧಿ ಪಾತ್ರವನ್ನು ವಿಭಿನ್ನವಾಗಿ ಲವ್ ಮಾಕ್ಟೇಲ್ 2ನಲ್ಲಿ ತೋರಿಸಲಾಗಿತ್ತು. ಇದೀಗ ಮೂರನೇ ಭಾಗದಲ್ಲಿ ಹೇಗೆ ಕಥೆ ರೂಪುಗೊಳ್ಳಲಿದೆ ಎಂಬ ಕುತೂಹಲ ಮೂಡಿದೆ.
ಇದನ್ನೂ ಓದಿ: 'ರಾನಿ' ಪೋಸ್ಟರ್‌ನಲ್ಲಿ ಕಿರಣ್ ರಾಜ್ ಮಾಸ್ ಲುಕ್