ಕರ್ನಾಟಕ

karnataka

ETV Bharat / entertainment

'ಅಪ್ಪುದಿನ' ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್ ಭಾವುಕ - mysore film festival

ಅಪ್ಪುದಿನ ಚಲನಚಿತ್ರೋತ್ಸವಕ್ಕೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಚಾಲನೆ ನೀಡಿ ಭಾವುಕರಾದರು.

Ashwini puneeth rajkumar launched the Appu dina film festival
ಅಪ್ಪುದಿನ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್

By

Published : Sep 28, 2022, 4:01 PM IST

Updated : Sep 28, 2022, 4:37 PM IST

ಮೈಸೂರು: ಮೈಸೂರು ದಸರಾ 2022 ನಿಮಿತ್ತ ಚಲನ ಚಿತ್ರೋತ್ಸವ ಉಪ ಸಮಿತಿಯಿಂದ ಆಯೋಜಿಸಲಾಗಿರುವ 'ಅಪ್ಪುದಿನ' ಚಲನಚಿತ್ರೋತ್ಸವನ್ನು ಡಾ. ಪುನೀತ್ ರಾಜ್​​ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಸಚಿವ ಎಸ್.ಟಿ.ಸೋಮಶೇಖರ್ ಅವರು ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೊಂಚ ಭಾವುಕರಾದರು.

ಅಪ್ಪುದಿನ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್

ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಅಪ್ಪು ಅಭಿನಯದ ಚಲನಚಿತ್ರಗಳು ಪ್ರದರ್ಶನವಾಗಲಿದ್ದು, ಈ ದಿನವನ್ನು ಅಪ್ಪು ದಿನದ ಚಲನಚಿತ್ರೋತ್ಸವ ಎಂದು ಆಚರಣೆ ಮಾಡಲಾಗುತ್ತಿದೆ. ಪುನೀತ್ ಅಭಿನಯದ ಬೆಟ್ಟದ ಹೂ, ರಾಜಕುಮಾರ, ರಣ ವಿಕ್ರಮ, ಯುವರತ್ನ ಸೇರಿದಂತೆ ಅವರ ನಟನೆಯ ಎಲ್ಲ ಚಲನಚಿತ್ರಗಳು ಐನಾಕ್ಸ್ ಚಿತ್ರ ಮಂದಿರದಲ್ಲಿ ಪ್ರದರ್ಶನವಾಗಲಿದೆ. ಸಿನಿಮಾ ನೋಡಲು ಅಭಿಮಾನಿಗಳು ಬರುತ್ತಿದ್ದಾರೆ.

ಇದನ್ನೂ ಓದಿ:ವಿಶ್ವ ಪ್ರವಾಸೋದ್ಯಮ ಜಾಥಾಕ್ಕೆ ಚಾಲನೆ ನೀಡಿದ ಸಚಿವ ಎಸ್ ಟಿ ಸೋಮಶೇಖರ್: ವಿಡಿಯೋ

ಉದ್ಘಾಟನೆ ನಂತರ ಅಶ್ವಿನಿ ಪುನೀತ್ ರಾಜ್​​ಕುಮಾರ್ ಕೆಲ ಹೊತ್ತು ಸಚಿವ ಎಸ್.ಟಿ ಸೋಮಶೇಖರ್ ಹಾಗೂ ಶಾಸಕರ ಜೊತೆ ಕುಳಿತು ಬೆಟ್ಟದ ಹೂ ಸಿನಿಮಾ ವೀಕ್ಷಿಸಿದರು.

Last Updated : Sep 28, 2022, 4:37 PM IST

ABOUT THE AUTHOR

...view details