ಕರ್ನಾಟಕ

karnataka

ETV Bharat / entertainment

ಕ್ಯಾನ್ಸರ್​ನಿಂದ ಬಳಲುತ್ತಿರುವ ಪುಟಾಣಿ ಅಭಿಮಾನಿಯ ಆಸೆ ಈಡೇರಿಸಿದ ಅಶ್ವಿನಿ ಪುನೀತ್​ ರಾಜ್​ಕುಮಾರ್​ - ಈಟಿವಿ ಭಾರತ ಕನ್ನಡ

Ashwini Puneeth Rajkumar: ಕ್ಯಾನ್ಸರ್​ನಿಂದ ಬಳಲುತ್ತಿರುವ ಅಪ್ಪುವಿನ ಪುಟಾಣಿ ಅಭಿಮಾನಿಯ ಆಸೆಯನ್ನು ಅಶ್ವಿನಿ ಪುನೀತ್​ ರಾಜ್​ಕುಮಾರ್​ ಈಡೇರಿಸಿದ್ದಾರೆ.

Ashwini Puneeth Rajkumar fulfills the wish of appu fan who is suffering from cancer
ಕ್ಯಾನ್ಸರ್​ನಿಂದ ಬಳಲುತ್ತಿರುವ ಪುಟಾಣಿ ಅಭಿಮಾನಿಯ ಆಸೆ ಈಡೇರಿಸಿದ ಅಶ್ವಿನಿ ಪುನೀತ್​ ರಾಜ್​ಕುಮಾರ್​

By ETV Bharat Karnataka Team

Published : Nov 7, 2023, 9:15 PM IST

Updated : Nov 7, 2023, 10:59 PM IST

ಕನ್ನಡ ಚಿತ್ರರಂಗದ ರಾಜಕುಮಾರ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಪುಟಾಣಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಅಪ್ಪುವನ್ನು ಆರಾಧಿಸುತ್ತಾರೆ. ಮರೆಯಾಗಿ 'ಪರಮಾತ್ಮ'ನಲ್ಲಿ ಲೀನರಾಗಿರುವ ಇವರು ಜೀವಂತವಾಗಿರುವಾಗ ಅಭಿಮಾನಿಗಳನ್ನು ಬಹಳ ಪ್ರೀತಿಯಿಂದ ಕಾಣುತ್ತಿದ್ದರು. ಹೀಗಾಗಿ ಅಪ್ಪು ನಮ್ಮನ್ನಗಲಿ ಎರಡು ವರ್ಷ ಕಳೆದರೂ, ಅಭಿಮಾನಿಗಳ ಹೃದಯದಲ್ಲಿ ಇಂದಿಗೂ ಜೀವಂತವಾಗಿದ್ದಾರೆ. ಜೊತೆಗೆ ಪತ್ನಿ ಅಶ್ವಿನಿ​ ಕೂಡ ಪುನೀತ್​ ಹಾದಿಯಲ್ಲೇ ಸಾಗುತ್ತಿದ್ದಾರೆ.

ಹೌದು.. ಪುನೀತ್ ರಾಜ್​​ಕುಮಾರ್ ಬದುಕಿದ್ದಾಗ ಅದೆಷ್ಟೋ ಜನರಿಗೆ ತಮ್ಮಿಂದ್ದಾದಷ್ಟು ಸಹಾಯ ಮಾಡುತ್ತಿದ್ದರು. ಹೀಗಾಗಿ ಇಂದಿಗೂ ಅಭಿಮಾನಿ ದೇವರುಗಳ ಮನೆಯಲ್ಲಿ ಅಪ್ಪು ಸಾಕ್ಷಾತ್​ ದೇವರೇ ಆಗಿದ್ದಾರೆ. ಅದೇ ಆದರ್ಶದಲ್ಲಿ ಅಶ್ವಿನಿಯವರು ಸಾಗುತ್ತಿದ್ದಾರೆ. ಇದೀಗ ಕ್ಯಾನ್ಸರ್​ ಪೀಡಿತ ಬಾಲಕ ಹರ್ಷನನ್ನು ಮನೆಗೆ ಕರೆಸಿ ಆತನ ಆಸೆಯನ್ನು ಈಡೇರಿಸಿದ್ದಾರೆ.

6 ವರ್ಷದ ಹರ್ಷ ಬ್ಲಡ್​ ಕ್ಯಾನ್ಸರ್​ನಿಂದ ಬಳಲುತ್ತಿದ್ದಾನೆ. ಆತನಿಗೆ ಪುನೀತ್​ ರಾಜ್​ಕುಮಾರ್​ ಅಂದ್ರೆ ಪಂಚ ಪ್ರಾಣ. ಅವರ ಅಗಲಿಕೆ ನಂತರ ಅಪ್ಪು ಮನೆಗೆ ಹೋಗಬೇಕು, ಅಶ್ವಿನಿಯವರನ್ನು ಭೇಟಿ ಮಾಡಬೇಕು ಎಂದು ಹರ್ಷ ಹಠ ಹಿಡಿದಿದ್ದನಂತೆ. ಈ ವಿಚಾರ ತಿಳಿದ ಅಶ್ವಿನಿ ಅವರು ತಮ್ಮ ಕಾರು ಚಾಲಕನ ಸಹಾಯದಿಂದ ತಮ್ಮದೇ ಕಾರಿನಲ್ಲಿ ಆ ಬಾಲಕನನ್ನು ಮನೆಗೆ ಕರೆಸಿಕೊಂಡಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಪುನೀತ್​ ನಿವಾಸಕ್ಕೆ ಹರ್ಷ ಬಂದಿದ್ದು, ಆತನ ಬಹುದಿನದ ಆಸೆ ಈಡೇರಿದಂತಾಗಿದೆ.

ಇದನ್ನೂ ಓದಿ:'ಕೆಂಡ' ಚಿತ್ರಕ್ಕೆ ನಿರ್ಮಾಪಕಿಯಾಗಿ ಹೊಸ ದಾಖಲೆ ಬರೆದ 'ಗಂಟುಮೂಟೆ' ರೂಪಾ ರಾವ್

ಚಿತ್ರದುರ್ಗ ಮೂಲದ ಹರ್ಷನ ತಂದೆ ತಾಯಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹರ್ಷನ ತಂದೆ ಗಾರೆ ಕೆಲಸ ಮಾಡ್ತಿದ್ರೆ ತಾಯಿ ಒಂದು ಆಫೀಸ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಹರ್ಷನಿಗೆ ಬ್ಲಡ್ ಕ್ಯಾನ್ಸರ್ ಇದ್ದ ಕಾರಣ ಅತನ ಕೊನೆ ಅಸೆಗಳನ್ನು ಈಡೇರಿಸಿ ಎಂದು ವೈದ್ಯರು ಹೇಳಿದ್ದರಂತೆ. ಹೀಗಾಗಿ ಪೋಷಕರು ಪುನೀತ್ ಮನೆಗೆ ಮಗನನ್ನು ಕರೆದುಕೊಂಡು ಹೋಗಿ ಅವನ ಆಸೆಯನ್ನು ಈಡೇರಿಸಿದ್ದಾರೆ.

ಹರ್ಷನ ಮೆಡಿಕಲ್ ಡಿಟೈಲ್ಸ್, ಫೋಟೊಗಳು, ಪುನೀತ್ ಅಗಲಿದಾಗ ಅತ್ತಿದ್ದ ವಿಡಿಯೋವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಇವರ ತಂದೆ ತಾಯಿ ಕಳುಹಿಸಿದ್ದರು. ಇದನ್ನು ನೋಡಿದ್ದ ಅಶ್ವಿನಿ ಅವರು ಇತ್ತೀಚೆಗೆ ಆ ಪುಟ್ಟ ಅಭಿಮಾನಿ ಹರ್ಷನನ್ನು ಮನೆಗೆ ಕರೆಸಿಕೊಂಡಿದ್ದಾರೆ. ಪುಟಾಣಿ ಹರ್ಷನ ಆಸೆಯನ್ನು ಪೂರೈಯಿಸಿದ್ದಾರೆ. ಪುನೀತ್ ರಾಜ್​ಕುಮಾರ್​ ಹಾದಿಯಲ್ಲೇ ಅಶ್ವಿನಿ ಕೂಡ ಸಾಗುತ್ತಿರೋದು ನಟನ ಅಭಿಮಾನಿಗಳಿಗೆ ಸಂತೋಷ ಉಂಟು ಮಾಡಿದೆ.

ಇದನ್ನೂ ಓದಿ:ಯೋಗರಾಜ್ ಭಟ್ರ 'ಗರಡಿ' ಮುಂದೆ 'ನಾ ಕೋಳಿಕೆ ರಂಗ' ಅಂತಿದ್ದಾರೆ ನಟ ಮಾಸ್ಟರ್​ ಆನಂದ್​

Last Updated : Nov 7, 2023, 10:59 PM IST

ABOUT THE AUTHOR

...view details