ಕರ್ನಾಟಕ

karnataka

ಅಪ್ಪು ಜನ್ಮದಿನಕ್ಕೆ ದಿನಗಣನೆ: ಮಡದಿ ಅಶ್ವಿನಿ ತೆಗೆದುಕೊಂಡ ನಿರ್ಧಾರವೇನು ಗೊತ್ತಾ?

By

Published : Mar 11, 2023, 7:56 PM IST

ಮಾರ್ಚ್ 17ರಂದು ಪುನೀತ್​ ರಾಜ್​ಕುಮಾರ್​ ಹುಟ್ಟುಹಬ್ಬ ಆಚರಣೆಗೆ ಅಭಿಮಾನಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಆದ್ರೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಗಟ್ಟಿ ಮನಸ್ಸಿನಿಂದ ಒಂದು ನಿರ್ಧಾರ ಕೈಗೊಂಡಿದ್ದಾರೆ.

ashwini puneeth rajkumar fly to america
ಅಶ್ವಿನಿ - ಪುನೀತ್​ ಕುಟುಂಬ

ಭಾರತೀಯ ಚಿತ್ರರಂಗದಲ್ಲಿ ನಗು ಮುಖದ ಒಡೆಯ ಅಂತಾ ಕರೆಸಿಕೊಂಡ ಏಕೈಕ ನಟ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್. ಈ ಪರಮಾತ್ಮ ನಮ್ಮನೆಲ್ಲ ಅಗಲಿ ಒಂದೂವರೆ ವರ್ಷ ಆಗುತ್ತಿದೆ. ಆದರೆ, ಈ ಕರ್ನಾಟಕ ರತ್ನನ ನೆನಪು ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದೆ.

ಅಶ್ವಿನಿ - ಪುನೀತ್​

ಮಾರ್ಚ್ 17 ದೊಡ್ಮನೆ ಅಭಿಮಾನಿಗಳ ಪಾಲಿಗೆ ಅವಿಸ್ಮರಣೀಯ ದಿನ. ಪ್ರತಿ ವರ್ಷ ಈ ದಿನವನ್ನು ಪ್ರೀತಿಯ ಅಪ್ಪು ಜೊತೆ ಸೆಲೆಬ್ರೇಶನ್ ಮಾಡುತ್ತಿದ್ದ ಪವರ್ ಫ್ಯಾನ್ಸ್​​ಗಳು ಕಳೆದ ಎರಡು ವರ್ಷ ಅಪ್ಪು ಅನುಪಸ್ಥಿತಿಯಲ್ಲಿ ಹುಟ್ಟಿದ ದಿನವನ್ನು ಆಚರಿಸಿದ್ರು. ಅದೇ ರೀತಿ, ಈ ವರ್ಷವೂ ಅಪ್ಪು ಜನ್ಮ ದಿನವನ್ನು ಆಚರಿಸಲು ದೊಡ್ಮನೆ ಅಭಿಮಾನಿಗಳು ಪ್ಲಾನ್ ಮಾಡುತ್ತಿದ್ದಾರೆ. ಅದ್ರೆ ಇಂತಹ ಸಮಯದಲ್ಲಿ ದಿವಂಗತ ನಟ ಪುನೀತ್​ ರಾಜ್​ಕುಮಾರ್​ ಮಡದಿ ಅಶ್ವಿನಿ ಬಹಳ ನೋವಿನಲ್ಲಿ ಒಂದು ನಿರ್ಧಾರಕ್ಕೆ ಬಂದಿದ್ದಾರೆ‌‌‌‌. ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರ ಆ ನಿರ್ಧಾರ ಏನು ಅಂತ ಗೊತ್ತಾದ್ರೆ ದೊಡ್ಮನೆ ಅಭಿಮಾನಿಗಳು ಮತ್ತಷ್ಟು ಭಾವುಕರಾಗ್ತಾರೆ.

ಅಪ್ಪು ನಿಧನರಾಗಿ ದಿನಗಳು ಉರುಳಿದರೂ ಅಭಿಮಾನಿಗಳ ಅಂಗಳದಲ್ಲಿ ಮಾತ್ರ ಪರಮಾತ್ಮನ ಆತ್ಮ ಇನ್ನೂ ಜೀವಂತ. ಅಪ್ಪು ಜನ್ಮ ದಿನವನ್ನು ಸ್ಫೂರ್ತಿ ದಿನವನ್ನಾಗಿ ಆಚರಿಸಿ ಆ ಕೆಲಸದಲ್ಲಿ ತಮ್ಮ ಮೆಚ್ಚಿನ ನಟನನ್ನು ಕಾಣೋ ತವಕ ಅಭಿಮಾನಿಗಳದ್ದು. ಅಲ್ಲದೇ ಅದಕ್ಕೆ ಬೇಕಾದ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಪುತ್ರಿಯೊಂದಿಗೆ ಅಶ್ವಿನಿ ಪುನೀತ್ ರಾಜ್​ಕುಮಾರ್

ಮಾರ್ಚ್ 17 ಬಂತು ಅಂದ್ರೆ ಸಾಕು ಸದಾಶಿವನಗರದ ಪವರ್ ಹೌಸ್​ನಲ್ಲಿ ದಸರಾ ಕಳೆ ಕಾಣುತ್ತಿತ್ತು. ಅದ್ರೆ ಈ ಬಾರಿ ಆ ಕಳೆ ಕಾಣಲ್ಲ. ರಾಜ್ಯದ ಮೂಲೆ ಮೂಲೆಗಳಿಂದ ಪುನೀತ್​ರನ್ನು ಪ್ರೀತಿಸೋ ಜನ ಬರ್ತಾರೆ. ‌‌ಅಪ್ಪು ಇಲ್ಲ ಅನ್ನೋ ನೋವಲ್ಲಿ ಕಣ್ಣೀರಾಕ್ತಾರೆ. ಇದನ್ನೆಲ ನೋಡಿದ್ರೆ ಅಪ್ಪು ನೆನಪು ಮತ್ತಷ್ಟು ಕಾಡುತ್ತೆ. ಹಾಗೆಂದು ಅಪ್ಪು ಜನ್ಮದಿನದಂದು ಯಾರೂ ಮನೆ ಬಳಿ ಬರಬೇಡಿ ಅಂತ ಹೇಳೊಕೆ ಆಗದ ಅಶ್ವಿನಿ ಪುನೀತ್ ರಾಜ್‍ಕುಮಾರ್ ನೋವಿನಲ್ಲೇ ಒಂದು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ.

ಅಶ್ವಿನಿ - ಪುನೀತ್​

ಇದನ್ನೂ ಓದಿ:ರಾಕಿಂಗ್​ ಸ್ಟಾರ್​ ಯಶ್ 19ನೇ​ ಸಿನಿಮಾ ಬಗ್ಗೆ ಸಿಕ್ಕೇ ಬಿಡ್ತು ಇಂಟ್ರೆಸ್ಟಿಂಗ್​ ಡೀಟೆಲ್ಸ್​​

ಅಮೆರಿಕ ಫ್ಲೈಟ್ ಹತ್ತಿದ ಅಶ್ವಿನಿ: ಅಪ್ಪು ಅಗಲಿಕೆ ನಂತರ ಅಭಿಮಾನಿಗಳನ್ನು ಮನೆ ಬಳಿ ಬರಬೇಡಿ ಎಂದು ಹೇಳಲಾಗದೇ ಬಹಳ ನೋವಿನಲ್ಲೇ ಅಪ್ಪು ಹುಟ್ಟುಹಬ್ಬಕ್ಕೂ ಮುನ್ನ ಅಶ್ವಿನಿ ಪುನೀತ್ ರಾಜ್​ಕುಮಾರ್ ವಿದೇಶದಲ್ಲಿರುವ ಮಗಳನ್ನು ನೋಡಲು ಹೊರಟಿದ್ದಾರೆ‌. ಅಮೆರಿಕದಲ್ಲಿ ದೊಡ್ಡ ಮಗಳು ಧೃತಿ, ಹೈಯರ್ ಎಜುಕೇಷನ್ ಮಾಡುತ್ತಿರುವ ಹಿನ್ನೆಲೆ ಅಶ್ವಿನಿ ಪುನೀತ್ ರಾಜ್​​ಕುಮಾರ್ ಇಂದು ಅಮೆರಿಕ ಫ್ಲೈಟ್ ಹತ್ತಿದ್ದಾರೆ. ಒಂದು ವಾರಗಳ ಕಾಲ ದೊಡ್ಡ ಮಗಳ ಜೊತೆ ಕಾಲ ಕಳೆದು ಮಾರ್ಚ್ 19ಕ್ಕೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಅಶ್ವಿನಿ - ಪುನೀತ್​

ಇದನ್ನೂ ಓದಿ:ಕಬ್ಜ ರಿಯಲ್​​ ಹೀರೋ ಆರ್ ಚಂದ್ರು: ನಿರ್ದೇಶಕರ ಬಗ್ಗೆ ಉಪ್ಪಿ ಗುಣಗಾನ

ABOUT THE AUTHOR

...view details