ಬಾಲಿವುಡ್ ರೊಮ್ಯಾಂಟಿಕ್ ಹೀರೋ ಶಾರುಖ್ ಖಾನ್ ಅವರಿಗೆ ವಿಶ್ವಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಎಸ್‌ಆರ್‌ಕೆ ಸೂಪರ್ಸ್ಟಾರ್ ಜೊತೆ ಜೊತಗೆ ಫ್ಯಾಮಿಲಿ ಮ್ಯಾನ್ ಕೂಡ ಹೌದು. ತಮ್ಮ ಹೆಚ್ಚಿನ ಸಮಯವನ್ನು ಹೆಂಡತಿ ಮಕ್ಕಳಿಗಾಗಿ ಮೀಸಲಿಡುತ್ತಾರೆ. ಇದೀಗ ಮಕ್ಕಳು ತಮ್ಮ ಉದ್ಯಮ ಕ್ಷೇತ್ರಕ್ಕೆ ಎಂಟ್ರಿ ಕೊಡುತ್ತಿದ್ದು, ಎಸ್‌ಆರ್‌ಕೆ ಸಂಪೂರ್ಣ ಸಹಕಾರ ಕೊಡುತ್ತಿದ್ದಾರೆ.
ಸೀಮಿತ ಬಿಡುಗಡೆಯ ಐಷಾರಾಮಿ ಸ್ಟ್ರೀಟ್‌ವೇರ್ ಎಂದು ಹೆಸರಿಸಲಾಗಿರುವ ಬಟ್ಟೆ ಬ್ಯಾಂಡ್ ಅನ್ನು D'yavol X ಅನ್ನು ಶಾರುಖ್ ಪುತ್ರ ಆರ್ಯನ್ ಖಾನ್ ಪರಿಚಯಿಸಿದ್ದಾರೆ. ಇದರ ಜಾಹೀರಾತಿಗಾಗಿ ಆರ್ಯನ್ ಕ್ಯಾಮರಾ ಹಿಂದೆ ಇದ್ದರೆ, ತಂದೆ ಶಾರುಖ್ ಕ್ಯಾಮರಾ ಮುಂದೆ ಬಂದಿದ್ದಾರೆ. ಸೋಮವಾರ ಆರ್ಯನ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, ಜಾಹೀರಾತಿನ ಟೀಸರ್ ಅನ್ನು ಹಂಚಿಕೊಂಡಿದ್ದಾರೆ. ಇಂದು ಸಂಪೂರ್ಣ ಜಾಹೀರಾತು ರಿಲೀಸ್ ಅಗಲಿದೆ. ಈ ಸಣ್ಣ ವಿಡಿಯೋ ತುಣುಕಲ್ಲಿ ಕಿಂಗ್ ಖಾನ್ ಹೊರತುಪಡಿಸಿ ಬೇರೆ ಯಾರೂ ಇಲ್ಲ. ಆರ್ಯನ್ ತಮ್ಮ ತಂದೆಯ ಸೀನ್ಗಳನ್ನು ನಿರ್ದೇಶಿಸಿದ್ದು, ಅಭಿಮಾನಿಗಳು ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ.
ಟೀಸರ್, ನೆಲದ ಮೇಲೆ ಪೇಂಟ್ ಬ್ರಷ್ನಿಂದ ಆರಂಭಗೊಂಡಿದೆ. ಯಾರೋ ಅದನ್ನು ಎತ್ತಿಕೊಂಡಿದ್ದು, ಶಾರುಖ್ ಅವರಂತೆ ಕಂಡಿದ್ದಾರೆ. ಆದರೂ ಅವರ ಮುಖವನ್ನು ಬಹಿರಂಗಪಡಿಸುವ ಮೊದಲು ಕ್ಯಾಮರಾದ ದೃಷ್ಟಿ ಬದಲಾಗುತ್ತದೆ. ಕೊನೆಯಲ್ಲಿ ಎಸ್‌ಆರ್‌ಕೆ ಅವರ ಮುಖವು ಒಂದು ಸೆಕೆಂಡಿಗೆ ಕಾಣಿಸಿಕೊಳ್ಳುತ್ತದೆ.
ಇದು ಜಾಹೀರಾತಿನ ಸಣ್ಣ ತುಣುಕಷ್ಟೇ. ಇದನ್ನು ಹಂಚಿಕೊಂಡ ಆರ್ಯನ್ ಕಾಪ್ಷನ್ನಲ್ಲಿ A ಇಂದ Zವರೆಗಿನ ಅಕ್ಷರಗಳನ್ನು ಬರೆದಿದ್ದು, X ಜಾಗದಲ್ಲಿ ಸ್ಥಳ ಖಾಲಿ ಬಿಟ್ಟಿದ್ದಾರೆ. ''X 24 ಗಂಟೆಗಳಲ್ಲಿ ಬರಲಿದೆ. ವಿಶೇಷ ವಿಷಯಕ್ಕಾಗಿ @dyavol.x ಅನ್ನು ಅನುಸರಿಸಿ" ಎಂದು ಬರೆದುಕೊಂಡಿದ್ದಾರೆ. ಇಂದು ಶಾರುಖ್ ಖಾನ್ ಅವರ ಜಾಹೀರಾತು ಬಿಡುಗಡೆ ಆಗಲಿದೆ.