ಕರ್ನಾಟಕ

karnataka

ETV Bharat / entertainment

ವಿಶ್ವಾದ್ಯಂತ ತೆರೆ ಕಾಣಲಿದೆ ಅರುಣ್ ವಿಜಯ್ ಅಭಿನಯದ ಬಹು ನಿರೀಕ್ಷಿತ ಮಿಷನ್ ಚಾಪ್ಟರ್ 1 ಸಿನಿಮಾ - Nimisha Sajayan

ಮಿಷನ್ ಚಾಪ್ಟರ್ 1 ಸಿನಿಮಾವನ್ನು ಕೇವಲ 70 ದಿನದಲ್ಲಿ ಚೆನ್ನೈ ಹಾಗೂ ಲಂಡನ್​ನಲ್ಲಿ ಶೂಟಿಂಗ್ ನಡೆಸಲಾಗಿದೆ.

ಮಿಷನ್ ಚಾಪ್ಟರ್ 1 ಸಿನಿಮಾ
ಮಿಷನ್ ಚಾಪ್ಟರ್ 1 ಸಿನಿಮಾ

By

Published : Apr 3, 2023, 10:28 PM IST

ಮಿಷನ್ ಚಾಪ್ಟರ್ 1 ಸಿನಿಮಾ ತಂಡ

ಕಾಲಿವುಡ್ ಹೀರೋ ಅರುಣ್ ವಿಜಯ್ ಅಭಿನಯದ ಬಹು ನಿರೀಕ್ಷಿತ ಮಿಷನ್ ಚಾಪ್ಟರ್-1 ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ತಮಿಳಿನ ಪ್ರತಿಭಾನ್ವಿತ ನಿರ್ದೇಶಕ ವಿಜಯ್ ಆಕ್ಷನ್ ಕಟ್ ಹೇಳಿದ್ದು, ದುಬಾರಿ ಬಜೆಟ್ ನಲ್ಲಿ ಎ ರಾಜಶೇಖರ್ ಹಾಗೂ ಎಸ್ ಸ್ವಾತಿ ನಿರ್ಮಾಣ ಮಾಡಿದ್ದಾರೆ. 'ಮಿಷನ್: ಚಾಪ್ಟರ್-1’ ಸಿನಿಮಾವನ್ನು ಕೇವಲ 70 ದಿನದಲ್ಲಿ ಚೆನ್ನೈ ಹಾಗೂ ಲಂಡನ್ ನಲ್ಲಿ ಶೂಟಿಂಗ್ ನಡೆಸಲಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸೆಟ್ ಹಾಕಿ ಚಿತ್ರೀಕರಿಸಲಾಗಿದ್ದು, ನಾಯಕ ಅರುಣ್ ವಿಜಯ್ ಅದ್ಭುತ ಸ್ಟಂಟ್ ಮಾಡಿದ್ದಾರೆ.

ಸಿನಿಮಾ ಸ್ಕ್ರಿಪ್ಟ್ ಅಧ್ಯಯನ

ಇದನ್ನೂ ಓದಿ :ಡೇಟಿಂಗ್​ ವದಂತಿ: ಅನನ್ಯಾ ಬಗ್ಗೆ ಕೇಳಿದಾಗ ಮುಗುಳುನಗೆ ಬೀರಿದ ಆದಿತ್ಯ ರಾಯ್

ಈ ಹಿನ್ನೆಲೆಯಲ್ಲಿ ಇಂಡಿಯನ್, ಖೈದಿ ನಂಬರ್ 150, 2.0, ದರ್ಬಾರ್ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಇದೀಗ ಮಿಷನ್: ಚಾಪ್ಟರ್ 1 ಸಿನಿಮಾವನ್ನು ವಿಶ್ವಾದ್ಯಂತ ರಿಲೀಸ್ ಮಾಡಲಿದೆ.

ಪ್ರೇಕ್ಷಕರಿಗೆ ವಿಭಿನ್ನ ಬಗೆಯ ಚಿತ್ರಗಳನ್ನು ಉಣ ಬಡಿಸುತ್ತಿದೆ: ಸಿನಿಮಾ ನಿರ್ಮಾಣ ಹಾಗೂ ವಿತರಣೆಯಲ್ಲಿ ಭಾರೀ ಹೆಸರು ಮಾಡಿರುವ ಲೈಕಾ, ಪ್ರೇಕ್ಷಕರಿಗೆ ವಿಭಿನ್ನ ಬಗೆಯ ಚಿತ್ರಗಳನ್ನು ಉಣಬಡಿಸುತ್ತಿದೆ. ಪೊನ್ನಿಯಿನ್ ಸೆಲ್ವನ್-2, ಇಂಡಿಯನ್-2, ಲಾಲ್ ಸಲಾಂ ಸೇರಿದಂತೆ ಹಲವು ಚಿತ್ರಗಳ ನಿರ್ಮಾಣ ಮಾಡ್ತಿರುವ ಲೈಕಾ ಮಾಲೀಕ ಸುಭಾಷ್ ಕರಣ್, ‘ಮಿಷನ್:ಚಾಪ್ಟರ್-1’ ಅಖಂಡ ವಿಶ್ವ ತಲುಪಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಮಿಷನ್ ಚಾಪ್ಟರ್ 1 ಸಿನಿಮಾ

ಇದನ್ನೂ ಓದಿ :ಇನ್‌ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟ ದಳಪತಿ ವಿಜಯ್: ಒಂದೇ ದಿನ 4 ಮಿಲಿಯನ್​ಗೂ ಹೆಚ್ಚು ಫಾಲೋವರ್ಸ್‌!

ಆಮಿ ಜಾಕ್ಸನ್ ಸಣ್ಣದೊಂದು ಗ್ಯಾಪ್ ಬಳಿಕ ಈ ಸಿನಿಮಾ ಮೂಲಕ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದು, ಮಾಲಿವುಡ್ ಖ್ಯಾತ ನಟಿ ನಿಮಿಷಾ ಸಜಯನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಭರತ್ ಬೋಪಣ್ಣ, ವಿರಾಜ್, ಅಭಿ ಹಾಸನ್ ಸೇರಿದಂತೆ ಹಲವರು ನಟಿಸಿದ್ದಾರೆ.

ನಾಲ್ಕು ಭಾಷೆಯಲ್ಲಿ ಸಜ್ಜಾಗ್ತಿರುವ ಸಿನಿಮಾ : ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿರುವ ‘ಮಿಷನ್: ಚಾಪ್ಟರ್-1’ ಸಿನಿಮಾಗೆ ಜಿವಿ ಪ್ರಕಾಶ್ ಕುಮಾರ್ ಸಂಗೀತ, ವಿಜಯ್ ಸಂಭಾಷಣೆ, ಆಂಥೋನಿ ಸಂಕಲನ, ಶರವಣ್ ವಸಂತ ಕಲಾ ನಿರ್ದೇಶನ, ಸಂದೀಪ್ ಕೆ ವಿಜಯ್ ಛಾಯಾಗ್ರಹಣ ಸಿನಿಮಾಕ್ಕಿದೆ. ಶೀಘ್ರದಲ್ಲಿಯೇ ಈ ಚಿತ್ರದ ಟ್ರೇಲರ್, ಆಡಿಯೋ ಹಾಗೂ ರಿಲೀಸ್ ಡೇಟ್ ಅನೌನ್ಸ್ ಆಗಲಿದ್ದು, ನಾಲ್ಕು ಭಾಷೆಯಲ್ಲಿ ಸಜ್ಜಾಗ್ತಿರುವ ‘ಮಿಷನ್:ಚಾಪ್ಟರ್-1’ ಸಿನಿಮಾವನ್ನು ಲೈಕಾ ವಿಶ್ವಾದ್ಯಂತ ವಿತರಣೆ ಮಾಡಲಿದೆ.

ರೈನ್​ಬೋ ಪೋಸ್ಟರ್​ ಔಟ್​​ :ಸಿನಿಮಾ ರಂಗದಲ್ಲಿ ಸೂಪರ್​ ಸ್ಟಾರ್​ ಹೀರೋಗಳಂತೆಯೇ ನಾಯಕಿಯರು ಕೂಡ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಒಂದೆಡೆ ನಾಯಕ ನಟರ ಜೊತೆ ಸಿನಿಮಾಗಳನ್ನು ಮಾಡುತ್ತಾ, ಮತ್ತೊಂದೆಡೆ ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸುತ್ತಾ ಪ್ರಸಿದ್ಧರಾಗಿದ್ದಾರೆ.​ ಈ ನಾಯಕಿಯರ ಸಾಲಿನಲ್ಲಿ ಅನುಷ್ಕಾ, ಸಮಂತಾ, ನಯನ ತಾರಾ ಪ್ರಮುಖರು. ಇದೀಗ ಈ ಪಟ್ಟಿಗೆ ರಶ್ಮಿಕಾ ಮಂದಣ್ಣ ಕೂಡ ಸೇರಲಿದ್ದಾರೆ. ಇಷ್ಟು ದಿನ ಹೀರೋಗಳ ಜೊತೆ ನಾಯಕಿಯಾಗಿ ನಟಿಸಲು ಒಪ್ಪಿಕೊಳ್ಳುತ್ತಿದ್ದ ರಶ್ಮಿಕಾ ಮೊದಲ ಬಾರಿಗೆ ಸ್ತ್ರೀ ಪ್ರಧಾನ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

ಕಿರಿಕ್​ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿರಿಸಿದ ಈ ಬೆಡಗಿ ಸದ್ಯ ಬಹುಭಾಷಾ ತಾರೆಯಾಗಿದ್ದಾರೆ. ನ್ಯಾಷನಲ್​ ಕ್ರಶ್​ ರಶ್ಮಿಕಾ ಕೆಲವೇ ವರ್ಷಗಳಲ್ಲಿ ಟಾಪ್​ ಹೀರೋಯಿನ್​ ಆಗಿ ಮಿಂಚುತ್ತಿದ್ದಾರೆ. ಅಲ್ಲು ಅರ್ಜುನ್​ ಜೊತೆಗೆ ಪುಷ್ಪ ಸಿನಿಮಾದ ಮೂಲಕ ಕ್ರೇಜ್ ಹೆಚ್ಚಿಸಿಕೊಂಡಿದ್ದಾರೆ. ಸದ್ಯ ಸೌತ್​ ಸಿನಿಮಾ ಮಾಡುತ್ತಲೇ ಬಾಲಿವುಡ್​ನಲ್ಲೂ ಸಾಲು ಸಾಲು ಆಫರ್​ಗಳನ್ನು ಪಡೆಯುತ್ತಿದ್ದಾರೆ. ಇತ್ತೀಚೆಗೆ ಅವರ ಹಿಂದಿ ಚಿತ್ರ 'ಮಿಷನ್​ ಮಜ್ನು' ಮತ್ತು ತೆಲುಗು ಸಿನಿಮಾ 'ವಾರಿಸುಡು' ಅಷ್ಟೊಂದು ಹಿಟ್​ ಆಗಿಲ್ಲ ಅಂದ್ರು, ರಶ್ಮಿಕಾ ಸೌಂದರ್ಯಕ್ಕೆ ಪ್ರೇಕ್ಷಕರು ಮನ ಸೋತಿದ್ದಾರೆ.

ಇದನ್ನೂ ಓದಿ :ಇನ್‌ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟ ದಳಪತಿ ವಿಜಯ್: ಒಂದೇ ದಿನ 4 ಮಿಲಿಯನ್​ಗೂ ಹೆಚ್ಚು ಫಾಲೋವರ್ಸ್‌!

ABOUT THE AUTHOR

...view details