ಮುದ್ದು ಮನಸೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ಅರುಣ್ ರಾಮ್ ಗೌಡ. ಈ ಸಿನಿಮಾ ಬಳಿಕ 3 ಗಂಟೆ 30 ದಿನ 30 ಸೆಕೆಂಡ್, ಪತಿ ಬೇಕು.ಕಾಮ್ ಹಾಗೂ ಪುನೀತ್ ರಾಜ್ಕುಮಾರ್ ಅಭಿನಯದ ಯುವರತ್ನ ಚಿತ್ರಗಳಲ್ಲಿ ಅಭಿನಯಿಸಿ ಗಮನ ಸೆಳದಿರೋ ನಟ ಅರುಣ್ ರಾಮ್ ಗೌಡ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ನಟ ಅರುಣ್ ರಾಮ್ ಗೌಡ ಅಭಿನಯದ ಹೆಸರಿಡದ ಚಿತ್ರದ ಫಸ್ಟ್ ಗ್ಲಿಂಪ್ಸ್ ಅನ್ನು ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಬಿಡುಗಡೆ ಮಾಡುವ ಮೂಲಕ ಚಿತ್ರರಂಡ ಗಮನ ಸೆಳೆದಿದೆ.
ನಿರ್ದೇಶನದ ಜೊತೆಗೆ ನಟನೆ: ಕೆಲ ವರ್ಷಗಳ ಬಳಿಕ ಅರುಣ್ ರಾಮ್ ಗೌಡ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ರೀ ಎಂಟ್ರಿ ಕೊಡುತ್ತಿದ್ದಾರೆ. ಅರುಣ್ ರಾಮ್ ಗೌಡ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಪ್ರಮುಖ ಪಾತ್ರದಲ್ಲೂ ನಟಿಸುತ್ತಿದ್ದಾರೆ.
ಅರುಣ್ ನಿರ್ದೇಶನದ ಮೊದಲ ಚಿತ್ರ:ಈ ಬಗ್ಗೆ ಮಾತನಾಡಿರೋ ನಟ ಅರಣ್ ರಾಮ್ ಗೌಡ, ಇದೊಂದು ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ. ಅಷ್ಟೇ ಅಲ್ಲ ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಜೊತೆಗೆ ಪ್ರಮುಖ ಪಾತ್ರದಲ್ಲೂ ನಟಿಸುತ್ತಿದ್ದೇನೆ. ಈ ಚಿತ್ರದ ನಾಯಕಿ, ವಿಲನ್ ಸೇರಿದಂತೆ ಎಲ್ಲ ಕಲಾವಿದರು ಹಾಗೂ ತಂತ್ರಜ್ಞರು ಸಾಕಷ್ಟು ಜನಪ್ರಿಯರಾಗಿರುವವರೇ ಇರುತ್ತಾರೆ. ನನ್ನ ಹುಟ್ಟುಹಬ್ಬದ ಈ ದಿನ ಅಯೋಧ್ಯೆಯಲ್ಲಿ ಈ ಚಿತ್ರದ ಫಸ್ಟ್ ಗ್ಲಿಂಪ್ಸ್ ಬಿಡುಗಡೆ ಮಾಡಿ, ಶ್ರೀರಾಮನ ಆಶೀರ್ವಾದ ಪಡೆದುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದರು.