ನವದೆಹಲಿ: ಅಂತಾರಾಷ್ಟ್ರೀಯ ಕಲಾವಿದ ಎಡ್ ಶೀರಾನ್ ಅವರ '2 ಸ್ಟೆಪ್' ಆಲ್ಬಮ್ ಸಾಂಗ್ನ ಹೊಸ ಆವೃತ್ತಿಗೆ ಗಾಯಕ ಅರ್ಮಾನ್ ಮಲಿಕ್ ಕೈಜೋಡಿಸಿದ್ದಾರೆ. ಈ ಬಗ್ಗೆ ಸ್ವತಃ ಅರ್ಮಾನ್ ಮಲಿಕ್ ಸಾಮಾಜಿಕ ಜಾಲತಾಣಗಳಲ್ಲಿ ಸಂಸತ ಹಂಚಿಕೊಂಡಿದ್ದಾರೆ.
ಎಡ್ ಶೀರನ್ ಅವರೊಂದಿಗೆ '2 ಸ್ಟೆಪ್' ಆಲ್ಬಮ್ ಸಾಂಗ್ನ ಎರಡನೇ ಆವೃತ್ತಿಯಲ್ಲಿ ಕಾಣಿಸಿಕೊಂಡಿರುವುದಕ್ಕೆ ನಾನು ಹರ್ಷಗೊಂಡಿದ್ದೇನೆ. ಅವರು ಯಾವಾಗಲೂ ಸ್ಫೂರ್ತಿದಾಯಕ ವ್ಯಕ್ತಿ. ನಾನು ಅವರ ಸಂಗೀತ ಮತ್ತು ಅದ್ಭುತ ಗೀತ ರಚನೆಯ ದೊಡ್ಡ ಅಭಿಮಾನಿಯಾಗಿದ್ದೇನೆ ಎಂದು ಅರ್ಮಾನ್ ಮಲಿಕ್ ಟ್ವೀಟ್ ಮಾಡಿದ್ದಾರೆ.
ಅಲ್ಲದೇ, ಇದು ಕೇವಲ ನನಗೆ ಒಂದು ದೊಡ್ಡ ಕ್ಷಣವಲ್ಲ. ಆದರೆ, ಇತರ ಭಾರತೀಯ ಕಲಾವಿದರಿಗೂ ದೊಡ್ಡ ಕ್ಷಣ. ಈ ರೀತಿಯ ಹೆಚ್ಚಿನ ಸಹಯೋಗಗಳಿಗೆ ಇದು ಪ್ರಾರಂಭ ಎಂದು ನಾನು ಪ್ರಾಮಾಣಿಕವಾಗಿ ಭಾವಿಸಿದ್ದೇನೆ ಎಂದು ಹೇಳಿದ್ದಾರೆ.
ಈ ಹಾಡು ಆತ್ಮವಿಶ್ವಾಸ, ನಿಮ್ಮ ಕಲೆಯಲ್ಲಿನ ಶಕ್ತಿಯನ್ನು ಕಂಡುಕೊಳ್ಳುವುದು ಮತ್ತು ನಿಮ್ಮ ಪ್ರೀತಿಪಾತ್ರರ ಮೇಲೆ ಒಲವು ತೋರುವುದರ ಕುರಿತಾಗಿದೆ. ನಾವು ಪ್ರೀತಿಸುವ ಜನರ ಬೆಂಬಲ ನಮಗೆ ಇದ್ದಾಗ ನಾವು ಯಾವುದೇ ಪ್ರತಿಕೂಲ ಪರಿಸ್ಥಿತಿ ಎದುರಿಸಬಹುದು. ಮುಂದೆ ಹೋಗದಂತೆ ಯಾವುದೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಈ ಸಮಯದಲ್ಲಿ ಎರಡು ಹೆಜ್ಜೆಗಳು ಎಂದು ಅರ್ಮಾನ್ ಮಲಿಕ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ನಟ ಸಲ್ಮಾನ್ಗೆ ಜೀವ ಬೆದರಿಕೆ ಪತ್ರ ಯಾರು ಬರೆದಿದ್ದಾರೋ ಗೊತ್ತಿಲ್ಲ: ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ