ಬಹುಭಾಷಾ ನಟ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮತ್ತೆ ನಿರ್ದೇಶನದತ್ತ ಮುಖಮಾಡಿದ್ದಾರೆ. ಅರ್ಜುನ್ ಇದೀಗ ಮಗಳು ಐಶ್ವರ್ಯ ಸಿನಿಮಾಗೆ ಮತ್ತೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಅಲ್ಲದೆ, ಸರ್ಜಾ ಚಿತ್ರದ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ.
ಅರ್ಜುನ್ ಮಗಳು ಐಶ್ವರ್ಯ ಸರ್ಜಾ 'ಪ್ರೇಮ ಬರಹ' ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಬಳಿಕ ಯಾವುದೇ ಚಿತ್ರದಲ್ಲಿ ನಟಿಸಿರಲಿಲ್ಲ. ಅರ್ಜುನ್ ತಮ್ಮದೇ ಶ್ರೀರಾಮ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್ನಡಿ ನಿರ್ಮಿಸಲಿರುವ 15ನೇ ಚಿತ್ರ ಇದಾಗಿದೆ. ಈ ಬಾರಿ ಐಶ್ವರ್ಯ ಅರ್ಜುನ್ ಜೊತೆ ತೆಲುಗು ಯುವ ನಾಯಕನನ್ನು ಪರಿಚಯಿಸುತ್ತಿದ್ದಾರೆ. ನಾಯಕನಾಗಿ ತೆಲುಗು ಚಿತ್ರರಂಗದ ಯುವ ನಟ ವಿಶ್ವಕ್ ಸೇನ್ ನಟಿಸಲಿದ್ದಾರೆ.