ಕರ್ನಾಟಕ

karnataka

ETV Bharat / entertainment

India Couture Weekನಲ್ಲಿ ಹೆಜ್ಜೆ ಹಾಕಿದ ಮೈರಾ; ನಿನ್ನ ಬಗ್ಗೆ ಹೆಮ್ಮೆಯಾಗುತ್ತಿದೆ ಮಗಳೆ ಎಂದ ಅರ್ಜುನ್​ ರಾಂಪಾಲ್​ - ಸದ್ಯ ಮಾಡೆಲಿಂಗ್​ ಜಗತ್ತಿನಲ್ಲಿ ಅಂಬೆಗಾಲಿಡಲು

ನನ್ನ ಪುಟ್ಟ ರಾಜಕುಮಾರಿ ಬಗ್ಗೆ ನನಗೆ ಹೆಮ್ಮೆ ಇದೆ. ಸದ್ಯ ಆಕೆ ಕೌಚರ್​ ವೀಕ್​ ಫ್ಯಾಷನ್​ ಶೋನ ರನ್​ವೇಯಲ್ಲಿ ತಮ್ಮ ಅದ್ಬುತ ನಡಿಗೆ ಪ್ರದರ್ಶಿಸಿದ್ದಾಳೆ ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.

Arjun Rampal feels 'proud' as his 'little princess' Myra walks the ramp at India Couture Week - watch
Arjun Rampal feels 'proud' as his 'little princess' Myra walks the ramp at India Couture Week - watch

By

Published : Jul 27, 2023, 3:45 PM IST

ಮುಂಬೈ: ನಟ ಅರ್ಜುನ್​ ರಾಂಪಾಲ್​ ಮಗಳು ಸದ್ಯ ಮಾಡೆಲಿಂಗ್​ ಜಗತ್ತಿನಲ್ಲಿ ಅಂಬೆಗಾಲಿಡಲು ಆರಂಭಿಸಿದ್ದಾಳೆ. ಮುಂಬೈ ಫ್ಯಾಷನ್​ ವೀಕ್​ನಲ್ಲಿ ಮೊದಲ ಬಾರಿಗೆ ಬೆಕ್ಕಿನ ನಡಿಗೆ ಹಾಕಿದ ಮೈರಾ ಇದೀಗ ಮತ್ತೊಮ್ಮೆ ಇಂಡಿಯಾ ಕೌಚರ್​ ವೀಕ್​ನ ರನ್​ವೇಯಲ್ಲಿ ವಾಕ್​ ಮಾಡಿದ್ದಾರೆ. ಫ್ಯಾಷನ್​ ಜಗತ್ತಿನಲ್ಲಿ ಮಗಳ ಬೆಳವಣಿಗೆ ಕುರಿತು ನಟ ಅರ್ಜುನ್​ ಸಂತಸ ವ್ಯಕ್ತ ಪಡಿಸಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮುದ್ದು ಮಗಳ ಫ್ಯಾಷನ್​ ಶೋನ ವಿಡಿಯೋವನ್ನು ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.

ನನ್ನ ಪುಟ್ಟ ರಾಜಕುಮಾರಿ ಬಗ್ಗೆ ನನಗೆ ಹೆಮ್ಮೆ ಇದೆ. ಸದ್ಯ ಆಕೆ ಕೌಚರ್​ ವೀಕ್​ ಫ್ಯಾಷನ್​ ಶೋನ ರನ್​ವೇಯಲ್ಲಿ ತಮ್ಮ ಅದ್ಬುತ ನಡಿಗೆ ಪ್ರದರ್ಶಿಸಿದ್ದಾಳೆ ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ. ಇದೇ ವೇಳೆ, ಅರ್ಜುನ್​ ರಾಂಪಾಲ್​ ರೆಡ್ ಹಾರ್ಟ್​​ ಎಮೋಜಿ ಬಳಕೆ ಮಾಡಿ ಮಗಳ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ. ಮಗಳ ಬಗ್ಗೆ ತಂದೆಯ ಈ ಬರಹಕ್ಕೆ ಅರ್ಜುನ್​ ಗೆಳತಿ ಗೇಬ್ರಿಯೆಲಾ ಡಿಮೆಟ್ರಿಡ್ಸ್​ ಕೂಡ ಕ್ಲಾಪಿಂಗ್​ ಎಮೋಜಿ ಹಾಕಿ ಸಂದೇಶ ರವಾನಿಸಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಸಾಮಾಜಿಕ ಜಾಲತಾಣಿಗರು, ತಂದೆಯಂತೆಯೇ ಮಗಳು. ಎಷ್ಟು ಸುಂದರ ಮೈರು ಎಂದಿದ್ದಾರೆ. ಮತ್ತೊಬ್ಬರು ಆಕೆ ಅಮ್ಮನಂತೆ ಅವಳು. ತುಂಬಾ ಸುಂದರ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ ಆಕೆಯ ಚಹರೆಯನ್ನು ತಾಯಿಗೆ ಹೋಲಿಕೆ ಮಾಡಿದ್ದಾರೆ. ತಮ್ಮ ವೃತ್ತಿಯಲ್ಲಿ ಆಕೆ ಬಲು ಬೇಗ ಮತ್ತು ಉತ್ತಮ ರೀತಿಯಲ್ಲಿ ಬೆಳೆಯುತ್ತಿದ್ದಾರೆ. ಅವಳೊಬ್ಬ ಪರಿಪೂರ್ಣ ಕಲಾವಿದೆ. ನೀವು ಮಗಳನ್ನು ಅದ್ಬುತವಾಗಿ ಬೆಳೆಸಿದ್ದೀರಿ ಎಂದು ಮತ್ತೊಬ್ಬರು ಬರೆದಿದ್ದಾರೆ.

ನಟ ಅರ್ಜುನ್​ ರಾಂಪಾಲ್​ ಅವರ ಮೊದಲ ಪತ್ನಿ, ಮಾಡೆಲ್​ ಆಗಿರುವ ಮೆಹ್ರಾ ಜೆಸಿಯಾ ಮಗಳು ಮೈರಾ ಆಗಿದ್ದಾಳೆ. ಮತ್ತೊಬ್ಬ ಮಗಳು ಮಹಿಕಾ ರಾಂಪಾಲ್​ ಆಗಿದ್ದು, ಆಕೆ ಫ್ಯಾಷನ್​ ಜಗತ್ತಿನಿಂದ ದೂರ ಉಳಿದಿದ್ದಾರೆ. ಮೈರಾ ಮೊದಲ ಬಾರಿಗೆ 2023ರಲ್ಲಿ ಮುಂಬೈನಲ್ಲಿ ನಡೆದ ಡಿಯೋರಾ ಫ್ಯಾಷನ್​ ವೀಕ್​ನಲ್ಲಿ ಹೆಜ್ಜೆ ಹಾಕಿದ್ದರು.

ಮೊದಲ ಪತ್ನಿಯಿಂದ ದೂರಾಗಿರುವ ಅರ್ಜುನ್​ ರಾಂಪಾಲ್​ ಸದ್ಯ ತಮ್ಮ ಗೆಳತಿ ಗೇಬ್ರಿಯೆಲಾ ಡಿಮೆಟ್ರಿಡ್ಸ್ ಜೊತೆಗೆ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ ಈ ಜೋಡಿ ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದ್ದರು. ಈ ಕುರಿತು ನಟ ಅರ್ಜುನ್​ ರಾಂಪಾಲ್​ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು. ನನ್ನ ಕುಟುಂಬ ಮತ್ತು ನಾನು ಇಂದು ಸುಂದರ ಗಂಡು ಮಗುವನ್ನು ತಮ್ಮ ಕುಟುಂಬಕ್ಕೆ ಸ್ವಾಗತಿಸಿದ್ದೇವೆ. ತಾಯಿ ಮತ್ತು ಮಗ ಆರೋಗ್ಯವಾಗಿದ್ದಾರೆ. ವೈದ್ಯರ ಮತ್ತು ನರ್ಸ್​ ಅವರು ತಂಡಕ್ಕೆ ಧನ್ಯವಾದಗಳು ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದರು. ನಟ ಅರ್ಜುನ್​ ರಾಂಪಾಲ್​ ಕೂಡ ಮಾಡೆಲ್​ ಆಗಿ ತಮ್ಮ ವೃತ್ತಿಯನ್ನು ಆರಂಭಿಸಿದ್ದರು. ಬಳಿಕ ಸಿನಿಮಾಗಳಲ್ಲಿ ಅದ್ಬುತ ಪಾತ್ರಗಳಿಂದ ಮಿಂಚಿದರು.

ಇದನ್ನೂ ಓದಿ: ಆಭರಣ ಜಾಹೀರಾತಿನಿಂದ ಸಿಕ್ಕ ಮೊದಲ ಸಂಭಾವನೆಯನ್ನು ಚಾರಿಟಿಗೆ ನೀಡಿದ ನಟ ಮಹೇಶ್ ಬಾಬು ಪುತ್ರಿ ಸಿತಾರಾ

ABOUT THE AUTHOR

...view details