ಕರ್ನಾಟಕ

karnataka

ETV Bharat / entertainment

ಮಿಲಿ ಸಿನಿಮಾ ಬಿಡುಗಡೆ: ಜಾನ್ವಿ ಬಗ್ಗೆ ಸಹೋದರ ಅರ್ಜುನ್​ ಕಪೂರ್​ ಗುಣಗಾನ - ಮಿಲಿ ಸಿನಿಮಾ ಬಗ್ಗೆ ಅರ್ಜುನ್​ ಕಪೂರ್ ವಿಮರ್ಷೆ

ಜಾನ್ವಿ ಕಪೂರ್​ ಅಭಿನಯದ ಮಿಲಿ ಸಿನಿಮಾ ಇಂದು ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಜಾನ್ವಿ ಅಭಿನಯದ ಬಗ್ಗೆ ನಟ, ಸಹೋದರ ಅರ್ಜುನ್​ ಕಪೂರ್​ ಗುಣಗಾನ ಮಾಡಿದ್ದಾರೆ.

Arjun Kapoor reviews Mili movie acted by Janhvi Kapoor
ಜಾನ್ವಿ ಬಗ್ಗೆ ಸಹೋದರ ಅರ್ಜುನ್​ ಕಪೂರ್​ ಗುಣಗಾನ

By

Published : Nov 4, 2022, 5:49 PM IST

ಬಾಲಿವುಡ್​ ಬಹು ಬೇಡಿಕೆ ನಟಿ ಜಾನ್ವಿ ಕಪೂರ್​ ಅಭಿನಯದ ಮಿಲಿ ಸಿನಿಮಾ ಇಂದು ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಮಥುಕುಟ್ಟಿ ಕ್ಸೇವಿಯರ್ ನಿರ್ದೇಶನದ ಮಿಲಿ ಚಿತ್ರ 2019 ರಲ್ಲಿ ಬಿಡುಗಡೆಯಾಗಿದ್ದ ಮಲಯಾಳಂ 'ಹೆಲೆನ್' ಚಿತ್ರದ ಹಿಂದಿ ರಿಮೇಕ್.

ನೈಜ ಘಟನೆಗಳನ್ನು ಆಧರಿಸಿರುವ ಈ ಚಿತ್ರದಲ್ಲಿ ಮಿಲಿ ಎಂಬ ಹುಡುಗಿಯ ಪಾತ್ರದಲ್ಲಿ ನಟಿ ಜಾನ್ವಿ ಕಪೂರ್ ನಟಿಸಿದ್ದಾರೆ. ಸಹೋದರ ಮತ್ತು ನಟ ಅರ್ಜುನ್​ ಕಪೂರ್​​ ಜಾನ್ವಿ ಕಪೂರ್‌ ಅವರ ಸಿನಿಮಾ ಶ್ಲಾಘಿಸಿದ್ದಾರೆ. ತಾರೆಯಾಗಿ ಅವರ ಬೆಳವಣಿಗೆ ಅಸಾಧಾರಣವಾಗಿದೆ ಎಂದು ಹಾಡಿ ಹೊಗಳಿದ್ದಾರೆ.

ಅರ್ಜುನ್ ಕಪೂರ್​ ಇನ್​ಸ್ಟಾಗ್ರಾಮ್​​ನಲ್ಲಿ ಮೂರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮೊದಲನೆಯದು ಅರ್ಜುನ್ ಮತ್ತು ಜಾನ್ವಿ ಕ್ಯಾಮರಾಗೆ ಫೋಸ್ ನೀಡುತ್ತಿರುವ ಬಾಲ್ಯದ ಚಿತ್ರ. ಫೋಟೋಶೂಟ್‌ಗೆ ಪೋಸ್ ನೀಡುತ್ತಿರುವ ಮತ್ತೊಂದು ಚಿತ್ರ ಇತ್ತೀಚಿನದು ಎಂದು ತೋರುತ್ತದೆ. ಜೊತೆಗೆ ಮಿಲಿ ಚಿತ್ರದ ಪೋಸ್ಟರ್ ಸಹ ಹಂಚಿಕೊಂಡಿದ್ದಾರೆ.

ಜಾನ್ವಿ ಕಪೂರ್ ಅನ್ನು ಹೊಗಳುತ್ತಾ ಅರ್ಜುನ್ ಹೀಗೆ ಬರೆದಿದ್ದಾರೆ - "ನೀವು ನನ್ನನ್ನು ಹೆಮ್ಮೆ ಪಡುವಂತೆ ಮಾಡುತ್ತಿದ್ದೀರಿ. ಸ್ಟಾರ್ ಆಗಿ ನಿಮ್ಮ ಬೆಳವಣಿಗೆ ಅಸಾಧಾರಣವಾಗಿದೆ. ನೀವು ಇದೀಗ ನಿಮ್ಮ ಭವಿಷ್ಯವನ್ನು ಪ್ರಾರಂಭಿಸಿದ್ದೀರಿ, ಇದು ನಿಜವಾಗಿಯೂ ರೋಮಾಂಚನಕಾರಿಯಾಗಿದೆ. ಮಿಲಿ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದೀರಿ. ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ನಾನು ಬಯಸುತ್ತೇನೆ. ನಿಜವಾಗಿಯೂ ಎಲ್ಲರ ಪ್ರೀತಿಯನ್ನು ನೀವು ಪಡೆಯುತ್ತೀರಿ. ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಎಂದು ಬರೆದಿದ್ದಾರೆ.

ಇದನ್ನೂ ಓದಿ:'ಯಶೋದಾ' ಆ್ಯಕ್ಷನ್‌ಗೆ ಬೆರಗಾದ ಹಾಲಿವುಡ್ ಸಾಹಸ ನಿರ್ದೇಶಕ ಯಾನಿಕ್ ಬೆನ್

ನಟಿ ಜಾನ್ವಿ ಕಪೂರ್ ಜೊತೆಗೆ ಮಿಲಿ ಚಿತ್ರದಲ್ಲಿ ನಟರಾದ ಸನ್ನಿ ಕೌಶಲ್ ಮತ್ತು ಮನೋಜ್ ಪಹ್ವಾ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜಾನ್ವಿ ತಮ್ಮ ತಂದೆ ಬೋನಿ ಕಪೂರ್ ಅವರೊಂದಿಗೆ ಮೊದಲ ಬಾರಿ ಕೆಲಸ ಮಾಡಿದ್ದಾರೆ. ಬೋನಿ ಕಪೂರ್ ನಿರ್ಮಾಣದ ಮಿಲಿ ಚಿತ್ರವನ್ನು ಝೀ ಸ್ಟುಡಿಯೋಸ್​ ಪ್ರಸ್ತುತ ಪಡಿಸಿದೆ.

ಸುನಿಲ್​ ಕಾರ್ತಿಕೇಯನ್​ ಕ್ಯಾಮರಾ ವರ್ಕ್, ಎ ಆರ್​ ರೆಹೆಮಾನ್​​ ಸಂಗೀತ ಚಿತ್ರಕ್ಕಿದೆ. 'ಮಿಲಿ' ಮಹಿಳೆಯೊಬ್ಬರು ಫ್ರೀಜರ್‌ನಲ್ಲಿ ಜೀವಂತವಾಗಿರಲು ಹೋರಾಡಿದ ಕಥೆಯಾಗಿದ್ದು, ಜಾನ್ವಿ ಕಪೂರ್​ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ABOUT THE AUTHOR

...view details