ಬಾಲಿವುಡ್ ನಟರಾದ ಸನ್ನಿ ಡಿಯೋಲ್ ಮತ್ತು ಅಮಿಷಾ ಪಟೇಲ್ ಅಭಿನಯದ 'ಗದರ್ 2' ಚಿತ್ರ ಆಗಸ್ಟ್ನಲ್ಲಿ ಬಿಡುಗಡೆಯಾಗಲಿದೆ. 2001 ರಲ್ಲಿ ನಿರ್ದೇಶಕ ಅನಿಲ್ ಶರ್ಮಾ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರವು ರೊಮ್ಯಾಂಟಿಕ್ ಅಂಡ್ ಆ್ಯಕ್ಷನ್ ಚಿತ್ರವಾಗಿದ್ದು, ಗದರ್ 2 ಕೂಡ ಅನಿಲ್ ಶರ್ಮಾ ನಿರ್ದೇಶನದಲ್ಲಿ ತಯಾರಾಗಿದೆ.
ಇತ್ತೀಚೆಗೆ ಚಿತ್ರದ 'ಉದ್ದ್ ಜಾ ಕಾಲೇ ಕಾವ' ಹಾಡು ಬಿಡುಗಡೆಯಾಗಿದ್ದು, ಇದೀಗ 2001 ಗದರ್‌ನ ಮತ್ತೊಂದು ಹಾಡಿನ ಮರುರೂಪದ ಆವೃತ್ತಿಯನ್ನು ಬಿಡುಗಡೆ ಮಾಡಲು ತಯಾರಕರು ನಿರ್ಧರಿಸಿದ್ದಾರೆ. ವರದಿಗಳ ಪ್ರಕಾರ, ಗದರ್‌ನಲ್ಲಿ ಮೂಲ ಹಾಡನ್ನು ಹಾಡಿದ ಉದಿತ್ ನಾರಾಯಣ್ ಜೊತೆಗೆ ಅರಿಜಿತ್ ಸಿಂಗ್ 'ಮೈನ್ ನಿಕ್ಲಾ ಗಡ್ಡಿ ಲೇಕೆ' ಹಾಡಿನ ಹೊಸ ಆವೃತ್ತಿಯನ್ನು ಹಾಡಲಿದ್ದಾರೆ. ಅಲ್ಲದೇ, ಗದರ್ 2 ಗಾಗಿ ಅರಿಜಿತ್ ಸಿಂಗ್ ಅವರು 'ದಿಲ್ ಜೂಮ್' ಹಾಡನ್ನು ಸಹ ಹಾಡಿದ್ದಾರೆ.
'ಮೈನ್ ನಿಕ್ಲಾ ಗಡ್ಡಿ ಲೇಕೆ' ಮೂಲ ಆವೃತ್ತಿಯು ಸೂಪರ್ ಹಿಟ್ ಆಯಿತು. ಈ ಹಾಡು ಇನ್ನೂ ಜನಪ್ರಿಯವಾಗಿದೆ. 22 ವರ್ಷಗಳ ನಂತರವೂ ಮದುವೆ ಸಮಾರಂಭಗಳು ಮತ್ತು ಇತರ ಕಾರ್ಯಕ್ರಮಗಳಲ್ಲಿ ಆಗಾಗ್ಗೆ ಪ್ಲೇ ಆಗುತ್ತದೆ. 'ಗದರ್ 2' ತಯಾರಕರು ಈ ಹಾಡನ್ನು ರಿಮೇಕ್ ಮಾಡಲು ನಿರ್ಧಾರ ಮಾಡಿದ್ದು, ಅದರ ಮೂಲವನ್ನು ಬದಲಾಯಿಸುವ ಬದಲು ಹೊಸ ಧ್ವನಿ ನೀಡಲು ಬಯಸಿದ್ದಾರೆ. ಅದರಂತೆ ಚಿತ್ರತಂಡ ಹಾಗೂ ಸಂಗೀತ ನಿರ್ದೇಶಕ ಮಿಥುನ್ ಅರಿಜಿತ್ ಸಿಂಗ್ ಅತ್ಯುತ್ತಮ ಆಯ್ಕೆ ಎಂದು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ:'ಮೇಡ್ ಇನ್ ಹೆವೆನ್' ಮತ್ತೆ ಬರಲಿದೆ: ಪೋಸ್ಟರ್ ಬಿಡುಗಡೆಗೊಳಿಸಿ ಗುಡ್ನ್ಯೂಸ್ ಕೊಟ್ಟ ಜೋಯಾ ಅಖ್ತರ್