ಕರ್ನಾಟಕ

karnataka

ETV Bharat / entertainment

ಬಿಗ್​ಬಾಸ್​ 16: ನಿಮೃತ್​ ಹಣೆ ಮೇಲೆ ಬೇಕಾರ್​ ಎಂದು ಬರೆದ ಅರ್ಚನಾ - ವಿಭಿನ್ನ ಟಾಸ್ಕ್​ ಮಾಡುವಂತೆ ಸೂಚಿಸಲಾಗಿದೆ

ಬಿಗ್ ಬಾಸ್ ಸ್ಪರ್ಧಿಗಳಿಗೆ ಪ್ರ್ಯಾಂಕ್​ ಕರೆಗಳ ಮೂಲಕ ಆಟ ಪ್ರಾರಂಭಿಸಿದ್ದು, ಒಬ್ಬೊಬ್ಬ ಸ್ಪರ್ಧಿಗಳಿಗೆ ಒಂದು ಸೆಲೆಬ್ರಿಟಿಗಳ ಹೆಸರಿನಲ್ಲಿ ಕರೆ ಮಾಡಿ, ವಿಭಿನ್ನ ಟಾಸ್ಕ್​ ಮಾಡುವಂತೆ ಸೂಚಿಸಲಾಗಿದೆ.

Archana wrote Bekar on Nimrits forehead
ನಿಮೃತ್​ ಹಣೆ ಮೇಲೆ ಬೇಕಾರ್​ ಎಂದು ಬರೆದ ಅರ್ಚನಾ

By

Published : Oct 3, 2022, 7:07 PM IST

ಮುಂಬೈ (ಮಹಾರಾಷ್ಟ್ರ):ಬಿಗ್ ಬಾಸ್ 16 ರ ಸ್ಪರ್ಧಿ ಅರ್ಚನಾ ಗೌತಮ್ ಅವರು ರಿಯಾಲಿಟಿ ಶೋನ ಇತ್ತೀಚಿನ ಸಂಚಿಕೆಯೊಂದರಲ್ಲಿ ಬಿಗ್​ ಬಾಸ್​ ಮನೆಯ ಕ್ಯಾಪ್ಟನ್​ ನಿಮೃತ್ ಕೌರ್ ಅಹ್ಲುವಾಲಿಯಾ ಅವರೊಂದಿಗೆ ಜಗಳವಾಡಿದ್ದು, ಜೋರಾದ ಮಾತುಕತೆ ನಂತರ ಅರ್ಚನಾ ನಿಮೃತನ ಹಣೆಯ ಮೇಲೆ 'ಬೇಕಾರ್'(ತ್ಯಾಜ್ಯ) ಎಂದು ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ ನಿಮೃತ್ ಅವರನ್ನು ಮನೆಯ ಕ್ಯಾಪ್ಟನ್ ಎಂದು ಘೋಷಿಸಿದ್ದು, ಸ್ಪರ್ಧಿಗಳಿಗೆ ಅವರ ಕರ್ತವ್ಯಗಳನ್ನು ಹಂಚುವ ಜವಾಬ್ದಾರಿ ಕ್ಯಾಪ್ಟನ್​ದಾಗಿತ್ತು. ಅದರಂತೆಯೇ ನಿಮೃತ್​ ಅರ್ಚನಾಗೆ ಮನೆ ಮಂದಿಗೆ ಅಡುಗೆ ಮಾಡುವಂತೆ ಹೇಳಿದ್ದಾರೆ. ಅಡುಗೆ ಮಾಡುವುದನ್ನು ಹೆಚ್ಚು ಇಷ್ಟ ಪಡುವ ಅರ್ಚನಾ ಆ ಜವಾಬ್ದಾರಿಯನ್ನು ತುಂಬಾ ಖುಷಿಯಿಂದಲೇ ಒಪ್ಪಿಕೊಂಡಿದ್ದಾರೆ.

ಆದರೆ, ಸ್ವಲ್ಪ ಸಮಯದ ನಂತರ ನಿಮೃತ್​ ಅಡುಗೆ ಮಾಡಲು ಈಗಾಗಲೇ ಆರು ಜನರಿದ್ದಾರೆ ಎಂದು ಅರ್ಚನಾ ಅವರನ್ನು ಆ ಕರ್ತವ್ಯದಿಂದ ತೆಗೆದುಹಾಕಿದ್ದಾರೆ. ಇದರಿಂದ ಆಕ್ರೋಶಗೊಂಡ ಅರ್ಚನಾ ನಿಮೃತ್​ ಜೊತೆ ಮಾತಿಗಿಳಿದಿದ್ದಾರೆ.

ನೀವು ನೀಡಿದ ಅಡುಗೆ ಮಾಡುವ ಜವಾಬ್ದಾರಿಯನ್ನು ನಾನು ಇಷ್ಟಪಟ್ಟಿದ್ದೆ. ಆದರೆ, ನೀವು ಯಾಕೆ ನಾನು ಇಷ್ಟಪಟ್ಟಿದ್ದ ಆ ಜವಾಬ್ದಾರಿಯನ್ನು ನನ್ನಿಂದ ಹಿಂಪಡೆಯುತ್ತಿದ್ದೀರಿ ಎಂದು ಅರ್ಚನಾ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ನಿಮೃತ್​ 'ನಾನು ಕ್ಯಾಪ್ಟನ್​ ಮತ್ತು ನಾನು ಯಾವಾಗ ಬೇಕಾದರೂ ಕರ್ತವ್ಯಗಳನ್ನು ಬದಲಾಯಿಸಬಹುದು ಎಂದಿದ್ದಾರೆ. ಅದಕ್ಕೆ ಪ್ರತಿಯಾಗಿ ಅರ್ಚನಾ, ಹೌದು ನೀವು ಕ್ಯಾಪ್ಟನ್​ ಮತ್ತು ನೀವು ಕರ್ತವ್ಯಗಳನ್ನು ನೀಡಬಹುದು. ಆದರೆ, ಅವುಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಮಾತಿಗೆ ಮಾತು ಬೆಳೆದಿದೆ.

ಮಾತುಕೇಳಲು ನಿರಾಕರಣೆ:ಈ ಮಾತಿನ ಚಕಮಕಿ ಮಧ್ಯೆ ಸ್ಫರ್ಧಿಗಳಾದ ಸುಂಬುಲ್ ತೌಕೀರ್ ಖಾನ್ ಮತ್ತು ಟೀನಾ ದತ್ತಾ ಅವರು ನಿಮೃತ್ ಅವರನ್ನು ಬೆಂಬಲಿಸಿದ್ದು, ಅವಳು ನಾಯಕಿ ಮತ್ತು ಎಲ್ಲರೂ ಅವಳು ಏನು ಹೇಳುತ್ತಾಳೋ ಅದನ್ನು ಮಾಡಬೇಕು ಎಂದು ಹೇಳಿದ್ದಾರೆ. ಆದರೆ, ಅರ್ಚನಾ ಅವರ ಮಾತು ಕೇಳಲು ನಿರಾಕರಿಸಿದರು.

ಇದರ ಮಧ್ಯೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಪ್ರ್ಯಾಂಕ್​ ಕರೆಗಳ ಮೂಲಕ ಆಟ ಪ್ರಾರಂಭಿಸಿದ್ದು, ಸ್ಪರ್ಧಿ ಮತ್ತು ನಟ ಶಾಲಿನ್ ಭಾನೋಟ್ ಅವರಿಗೆ ಅಮೀರ್ ಖಾನ್ ಎಂದು ಮಾತನಾಡುತ್ತಿರುವಂತೆ ಕರೆ ಮಾಡಿ ಪೂಲ್‌ನಲ್ಲಿ ಸ್ನಾನ ಮಾಡಲು ಹೇಳಿದ್ದಾರೆ. ಗೌತಮ್ ವಿಗ್ ಅವರಿಗೆ ಹೃತಿಕ್ ರೋಷನ್ ಹೆಸರಿನಲ್ಲಿ ಪ್ರಾಂಕ್ ಕಾಲ್ ಮಾಡಿ, ಶರ್ಟ್ ರಹಿತವಾಗಿ ಹೋಗಿ ದೇಹವನ್ನು ತೋರಿಸಲು ಮತ್ತು ಪ್ರತಿ ಬೆಡ್ ರೂಮ್‌ಗಳಲ್ಲಿ ಕಹೋ ನಾ ಪ್ಯಾರ್ ಹೈ ಚಲನಚಿತ್ರದ ಸಿಗ್ನೇಚರ್​ ಸ್ಟೆಪ್​ ಹಾಕುವಂತೆ ಹೇಳಿದ್ದಾರೆ.

ನಿಮೃತ್​ ಅಸಮಾಧಾನ:ಟೀನಾ ಅವರಿಗೆ ಸೋನು ನಿಗಮ್ ಅವರ ಪ್ರ್ಯಾಂಕ್​ ಕಾಲ್ ಹಾಕಿ ಸಲ್ಮಾನ್ ಖಾನ್ ಮತ್ತು ಭಾಗ್ಯಶ್ರೀ ಅಭಿನಯದ ಮೈನೆ ಪ್ಯಾರ್ ಕಿಯಾ ಚಿತ್ರದ ದಿಲ್ ದೀವಾನಾ ಬಿನ್ ಸಜ್ನಾ ಕೆ ಹಾಡನ್ನು ಹಾಡಲು ಕೇಳಲಾಯಿತು. ಪಂಕಜ್ ತ್ರಿಪಾಠಿಯ ಧ್ವನಿಯಲ್ಲಿ ಕೊನೆಯ ಕರೆ ಅರ್ಚನಾಗೆ ಆಗಿತ್ತು. ಈ ವೇಳೆ ಕರೆಯಲ್ಲಿ ಅವಳು ಹೋಗಿ ನಿಷ್ಪ್ರಯೋಜಕ ಎಂದು ಭಾವಿಸುವ ವ್ಯಕ್ತಿಯ ಹಣೆಯ ಮೇಲೆ 'ಬೇಕಾರ್​' ಎಂದು ಬರೆಯಬೇಕಾಗಿತ್ತು.

ಅದರಂತೆಯೇ ಲಿಪ್ಸ್ಟಿಕ್ ತೆಗೆದುಕೊಂಡು ನಿಮೃತ್ ಹಣೆಯ ಮೇಲೆ 'ಬೇಕಾರ್​' ಎಂದು ಬರೆಯಲು ಹೋಗಿದ್ದಾರೆ. ಆದರೆ ನಿಮೃತ್ ಅರ್ಚನಾ ಅವಳನ್ನು ಮುಟ್ಟಲು ಬಿಡಲಿಲ್ಲ. ಆದರೆ ಹೇಗಾದರೂ ಮಾಡಿ ಟಾಸ್ಕ್ ಕಂಪ್ಲೀಟ್​ ಮಾಡಿದ್ದಾರೆ. ಇದರಿಂದ ನಿಮೃತ್​ ಅಸಮಾಧಾನಗೊಂಡರು.

ಇದನ್ನೂ ಓದಿ:ಸಂಡೇ ವಿತ್ ಸುದೀಪ್​.. ನಾಮಿನೇಟ್ ಆದ 12 ಮಂದಿಯಲ್ಲಿ ಮೂವರು ಸೇಫ್.. ಯಾರಾಗ್ತಾರೆ ಔಟ್?

ABOUT THE AUTHOR

...view details