ಬಾಲಿವುಡ್ನ ನಟ, ನಿರ್ಮಾಪಕ ಅರ್ಬಾಜ್ ಖಾನ್ ಮತ್ತು ಅವರ ಮಾಜಿ ಪತ್ನಿ, ನಟಿ ಮಲೈಕಾ ಅರೋರಾ ಅವರ ಪುತ್ರ ಅರ್ಹಾನ್ ಖಾನ್ ಬಾಲಿವುಡ್ ಪ್ರವೇಶಿಸಲು ಸಿದ್ಧರಾಗಿದ್ದಾರೆ. ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಫಿಲ್ಮ್ ಮೇಕಿಂಗ್ ಕಲಿಯುತ್ತಿರುವ ಅರ್ಹಾನ್ ಖಾನ್ ಶೀಘ್ರದಲ್ಲೇ ತನ್ನ ಮುಂದಿನ ನಿರ್ಮಾಣ ಉದ್ಯಮದಲ್ಲಿ ತನ್ನ ತಂದೆಯೊಂದಿಗೆ ಸೇರಿಕೊಳ್ಳಲಿದ್ದಾರೆ.
ಸಂದರ್ಶನವೊಂದರಲ್ಲಿ, ತನ್ನ ಮಗ ಸಿನಿಮಾ ಕ್ಷೇತ್ರದಲ್ಲಿ ಸಾಧಿಸಬೇಕೆಂಬ ಕನಸುಗಳಿವೆ ಎಂದು ಅರ್ಬಾಜ್ ಖಾನ್ ಖಚಿತಪಡಿಸಿದ್ದಾರೆ. ಅಲ್ಲದೇ ಚಿತ್ರ ನಿರ್ಮಾಪಕ ರೆ ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸೆಟ್‌ನಲ್ಲಿ ಅರ್ಹಾನ್ ಅವರು ಈಗಾಗಲೇ 30 ದಿನಗಳ ಇಂಟರ್ನ್‌ಶಿಪ್ ಅನ್ನು ಸಹ ಪೂರ್ಣಗೊಳಿಸಿದ್ದಾರೆ. ಹಾಗಾಗಿ ಮತ್ತೊಂದು ಖಾನ್ ಕುಡಿ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಲಿದೆಯೆಂದು ನೆಟಿಜೆನ್ಗಳು ಹೇಳುತ್ತಿದ್ದಾರೆ.