ಕರ್ನಾಟಕ

karnataka

ETV Bharat / entertainment

ಸದ್ದಿಲ್ಲದೇ ನಡೀತು ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಮಗಳ ಮದುವೆ - ಎ.ಆರ್​ ರೆಹಮಾನ್ ಮಗಳ ಮದುವೆ

ದೇಶದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್​ ಅವರ ಪುತ್ರಿ ಖತೀಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮಗಳ ಮದುವೆ ಸಮಾರಂಭದ ಕೆಲವೊಂದು ಫೋಟೋಗಳನ್ನು ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

AR Rahman's daughter Khatija
AR Rahman's daughter Khatija

By

Published : May 6, 2022, 10:41 AM IST

ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಹೆಸರಾಂತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್​ ಮಗಳ ಮದುವೆ ಸದ್ದಿಲ್ಲದೇ ನಡೆದಿದೆ. ತಮಿಳುನಾಡಿನ ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಖತೀಜಾ ರೆಹಮಾನ್ ಅವರು ರಿಯಾಸ್ದೀನ್ ಶೇಖ್ ಮೊಹಮ್ಮದ್​​​ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.


ಮದುವೆ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಮತ್ತು ಆಪ್ತ ವಲಯವಷ್ಟೇ ಭಾಗಿಯಾಗಿತ್ತು. ನವದಂಪತಿ ಮೇಲೆ ದೇವರ ಕೃಪೆ ಇರಲಿ. ನಿಮ್ಮೆಲ್ಲರ ಪ್ರೀತಿ ಮತ್ತು ಶುಭ ಹಾರೈಕೆಗಳಿಗಾಗಿ ಧನ್ಯವಾದ ಎಂದು ಎ.ಆರ್‌.ರೆಹಮಾನ್‌ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:'ದಂಗಲ್'​​ ದಾಖಲೆ ಉಡೀಸ್​ ಮಾಡಿದ 'ಕೆಜಿಎಫ್​ 2': ಹಿಂದಿಯಲ್ಲಿ ಹೆಚ್ಚು ಗಳಿಸಿದ 2ನೇ ಚಿತ್ರ ಎಂಬ ಹೆಗ್ಗಳಿಕೆ!

​​ರಿಯಾಸ್ದೀನ್​ ಶೇಖ್​ ಸಂಗೀತ ವೃತ್ತಿಯ ಹಿನ್ನೆಲೆ ಹೊಂದಿದ್ದು, ಸೌಂಡ್​ ಇಂಜಿನಿಯರ್​​ ಆಗಿ ಕೆಲಸ ಮಾಡ್ತಿದ್ದಾರೆ. ರೆಹಮಾನ್​ ಅವರ ಅನೇಕ ಲೈವ್​ ಸಂಗೀತ ಸಮಾರಂಭಗಳಲ್ಲಿ ಇವರು ಕೆಲಸ ಮಾಡಿದ್ದಾರೆ. ಖತೀಜಾ ಕೂಡ ಸಂಗೀತ ಲೋಕದಲ್ಲಿ ಗುರುತಿಸಿಕೊಂಡಿದ್ದು, ಅನೇಕ ಸಿನಿಮಾ ಹಾಡುಗಳಿಗೆ ಧ್ವನಿಯಾಗಿದ್ದಾರೆ.

ABOUT THE AUTHOR

...view details