ಕರ್ನಾಟಕ

karnataka

ETV Bharat / entertainment

ಮಗಳೊಂದಿನ ವಿಡಿಯೋ ಹಂಚಿಕೊಂಡ ನಟ ಅಪೂರ್ವ ಅಗ್ನಿಹೋತ್ರಿ - ಈಟಿವಿ ಭಾರತ ಕನ್ನಡ

ಅಪೂರ್ವ ಅಗ್ನಿಹೋತ್ರಿ ಮತ್ತು ನಟಿ ಶಿಲ್ಪಾ ಸಕ್ಲಾನಿ ತಮ್ಮ ಮಗುವಿನೊಂದಿಗಿರುವ ಮುದ್ದಾದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ

apoorva-agnihotri-and-shilpa-saklani-shared-the-video
ಮಗಳೊಂದಿನ ವಿಡಿಯೋ ಹಂಚಿಕೊಂಡ ನಟ ಅಪೂರ್ವ ಅಗ್ನಿಹೋತ್ರಿ

By

Published : Dec 3, 2022, 8:09 PM IST

ಕಿರುತೆರೆ ನಟ ಅಪೂರ್ವ ಅಗ್ನಿಹೋತ್ರಿ ಮತ್ತು ನಟಿ ಶಿಲ್ಪಾ ಸಕ್ಲಾನಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ 18 ವರ್ಷಗಳ ಬಳಿಕ ಪೋಷಕರಾಗಿದ್ದಾರೆ. ತಮ್ಮ ಮಗುವಿನೊಂದಿಗಿರುವ ಮುದ್ದಾದ ವಿಡಿಯೋವನ್ನು ನಟ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ದಂಪತಿಗಳು ತಮ್ಮ ಹೆಣ್ಣು ಮಗುವನ್ನು ತೋಳಿನಲ್ಲಿ ಹಿಡಿದು, ಮುದ್ದು ಮಾಡುತ್ತಿರುವ ಸುಂದರ ದೃಶ್ಯ ಕಂಡುಬಂದಿದೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆದ ತಕ್ಷಣವೇ ವೈರಲ್ ಆಗಿದೆ. ಅಲ್ಲದೇ ಸ್ನೇಹಿತರು, ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ನಟ ವಿಡಿಯೋಗೆ ಬಹಳ ಸುಂದರವಾಗಿ ಕ್ಯಾಪ್ಶನ್ ಕೂಡ ಬರೆದುಕೊಂಡಿದ್ದಾರೆ."ತುಂಬಾ ಖುಷಿಯಿಂದ ನನ್ನ ಮಗಳು ಇಶಾನಿ ಕಾನು ಅಗ್ನಿಹೋತ್ರಿಯನ್ನು ಪರಿಚಯಿಸಲು ಬಯಸುತ್ತೇನೆ. ಅವಳಿಗೆ ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನೀಡಿ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಡಿ. 9ರಿಂದ ಒಟಿಟಿಯಲ್ಲಿ ಪ್ರಸಾರವಾಗಲಿದೆ ಮಾನ್ಸೂನ್ ರಾಗ ಸಿನಿಮಾ

ABOUT THE AUTHOR

...view details