ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಪತಿ, ಕ್ರಿಕೆಟಿಗ ವಿರಾಟ್ ಕೊಹ್ಲಿ ವೆಂಬ್ಲೆ (Wembley) ಯಲ್ಲಿ ನಡೆದ ಎಫ್‌ಎ ಫೈನಲ್ ಕಪ್ ವೀಕ್ಷಿಸಿ ಆನಂದಿಸಿದ್ದಾರೆ. ಐಪಿಎಲ್ ನಂತರ ದಂಪತಿ ಯುಕೆಗೆ ಪ್ರಯಾಣ ಬೆಳೆಸಿದರು ಮತ್ತು ಎಫ್‌ಎ ಕಪ್ ಫೈನಲ್ ವೀಕ್ಷಿಸಲು ಲಂಡನ್‌ನ ವೆಂಬ್ಲೆ ಸ್ಟೇಡಿಯಂನಲ್ಲಿ ವಿರಾಟ್ ತಂಡದ ಸಹ ಆಟಗಾರ ಶುಭ್ಮನ್ ಗಿಲ್ ವಿರುಷ್ಕಾ ಜೊತೆ ಸೇರಿಕೊಂಡರು. ವೀಕ್ಷಕರ ನಡುವೆ ಈ ಮೂವರು ಕಾಣಿಸಿಕೊಂಡರು.
ಅಭಿಮಾನಿಗಳು ಕ್ಲಿಕ್ಕಿಸಿರುವ ಈ ಮೂವರ ಚಿತ್ರಗಳು ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ. ವಿರಾಟ್ ಕೊಹ್ಲಿ 'ಮ್ಯಾಂಚೆಸ್ಟರ್ ಸಿಟಿ'ಯನ್ನು ( Manchester City) ಬೆಂಬಲಿಸಿದಂತೆ ಕಾಣುತ್ತದೆ. ಮ್ಯಾಂಚೆಸ್ಟರ್ ಯುನೈಟೆಡ್ ವಿರುದ್ಧ ಮ್ಯಾಂಚೆಸ್ಟರ್ ಸಿಟಿ ಗೆಲುವು ಕಂಡಿತು. ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಮಾಡಲಾದ ಚಿತ್ರಗಳ ಪೈಕಿ ಒಂದರಲ್ಲಿ, ಅನುಷ್ಕಾ, ವಿರಾಟ್ ಮತ್ತು ಶುಭ್ಮನ್ ಜೊತೆಗೆ ಆಟವನ್ನು ವೀಕ್ಷಿಸುತ್ತಿರುವುದನ್ನು ಕಾಣಬಹುದು.
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ವೈಟ್ ಟೀ ಶರ್ಟ್, ತೋಳಿಲ್ಲದ ಕಪ್ಪು ಜಾಕೆಟ್, ಕಪ್ಪು ಪ್ಯಾಂಟ್ ಧರಿಸಿ ಕಾಣಿಸಿಕೊಂಡಿದ್ದಾರೆ. ಮತ್ತೊಂದೆಡೆ, ಶುಭ್ಮನ್ ಸ್ವೆಟ್‌ಶರ್ಟ್ ಅನ್ನು ಧರಿಸಿದ್ದಾರೆ ಮತ್ತು ವಿರಾಟ್ ಕಂದು ಬಣ್ಣದ ಜಾಕೆಟ್ ಧರಿಸಿದ್ದಾರೆ. ಅವರು ಮೂವರು ಒಟ್ಟಿಗೆ ನಿಂತಿರುವುದನ್ನು ಮತ್ತೊಂದು ಚಿತ್ರದಲ್ಲಿ ಕಾಣಬಹುದು.
ಈ ಮೂವರ ಫೋಟೋ ಕ್ಲಿಕ್ಕಿಸುತ್ತಿದ್ದಂತೆ ಅನುಷ್ಕಾ ಛಾಯಾಗ್ರಾಹಕನನ್ನು ನೋಡಿ ನಗುತ್ತಾರೆ. ವಿರಾಟ್ ಭುಜದ ಮೇಲೆ ಮ್ಯಾಂಚೆಸ್ಟರ್ ಸಿಟಿ ಜೆರ್ಸಿ ಕಾಣಿಸಿಕೊಂಡಿದೆ. ಇದಕ್ಕೂ ಮೊದಲು, ಅಂದರೆ ಫೈನಲ್‌ಗೂ ಒಂದು ದಿನ ಮೊದಲು ಲಂಡನ್‌ನ ಕೆಫೆಯಲ್ಲಿ ಅನುಷ್ಕಾ ಮತ್ತು ವಿರಾಟ್ ಒಟ್ಟಿಗೆ ಕಾಫಿ ಸೇವಿಸಿದ್ದರು. ಆ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ. ವಿರಾಟ್ ಮತ್ತು ಅನುಷ್ಕಾ ಇಬ್ಬರೂ ತಮ್ಮ ಕ್ಷೇತ್ರದಲ್ಲಿ ಸಾಧನೆಗೈದು, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅಭಿಮಾನಿಗಳು ಈ ಜೋಡಿಯ ಸುದ್ದಿ, ಫೋಟೋಗಳಿಗಾಗಿ ಕಾದು ಕುಳಿತಿರುತ್ತಾರೆ. ಅದರಂತೆ ನಿನ್ನೆ ವೈರಲ್ ಆಗಿರುವ ಚಿತ್ರಗಳು ಅಭಿಮಾನಿಗಳ ಗಮನ ಸೆಳೆದಿವೆ. ಈ ಚಿತ್ರಗಳು ಅಭಿಮಾನಿಗಳ ಮೆಚ್ಚುಗೆ ಸಂಪಾದಿಸಿವೆ.
ಇದನ್ನೂ ಓದಿ:39ರ ಸಂಭ್ರಮದಲ್ಲಿ ಚಂದನವನದ 'ಪ್ರಿಯೆ': ಬಣ್ಣದ ಲೋಕದಲ್ಲಿ ಮಿನುಗುತ್ತಿರುವ ಮುದ್ದು'ಮಣಿ'- Photos
ನಟಿ ಅನುಷ್ಕಾ ಶರ್ಮಾ ದಿ ರಬ್ ನೆ ಬನಾ ದಿ ಜೋಡಿ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಬಹುಬೇಡಿಕೆ ನಟಿಯಾಗಿ ಮಿಂಚಿದವರು. ತಾಯಿಯಾದ ಬಳಿಕ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಮಗಳ ಪೋಷಣೆಯಲ್ಲಿ ಬ್ಯುಸಿಯಾಗಿದ್ದ ನಟಿ ಸದ್ಯ ಚಕ್ಡಾ ಎಕ್ಸ್‌ಪ್ರೆಸ್‌ನಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಕಾಣಿಸಿಕೊಂಡಿದ್ದರು. ರೆಡ್ ಕಾರ್ಪೆಟ್ ಮೇಲೆ ಇದೇ ಮೊದಲ ಬಾರಿಗೆ ಹೆಜ್ಜೆ ಹಾಕಿದ್ದರು. 2018ರಲ್ಲಿ ತೆರೆಕಂಡ ಝೀರೋ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದ ಸಿನಿಮಾ. ಶೀಘ್ರದಲ್ಲೇ ಚಕ್ಡಾ ಎಕ್ಸ್‌ಪ್ರೆಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿರುವ ಚಿತ್ರದ ಬಿಡುಗಡೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ.
ಇದನ್ನೂ ಓದಿ:ಸಾಂಪ್ರದಾಯಿಕ ನೋಟಕ್ಕೂ ಸೈ ಎಂದ ಸ್ಯಾಂಡಲ್ವುಡ್ ಗ್ಲ್ಯಾಮರ್ ಗೊಂಬೆ ಪ್ರಣಿತಾ ಸುಭಾಷ್ - ನಿಮಗ್ಯಾವ ನೋಟ ಇಷ್ಟ?!