ಕರ್ನಾಟಕ

karnataka

ETV Bharat / entertainment

ಪೂಮಾ ಸಂಸ್ಥೆಗೆ ಕ್ಲಾಸ್ ತೆಗೆದುಕೊಂಡ ಅನುಷ್ಕಾ.. ಪ್ರಚಾರಕ್ಕಾಗಿ ಹೀಗೆ ಮಾಡಿದ್ರಾ ಶರ್ಮಾ? - ಅನುಷ್ಕಾ ಶರ್ಮಾ ಲೇಟೆಸ್ಟ್ ನ್ಯೂಸ್

ನಟಿ ಅನುಷ್ಕಾ ಶರ್ಮಾ ಅವರು ಪೂಮಾ ಸಂಸ್ಥೆಯೊಂದಿಗೆ ಕೈ ಜೋಡಿಸಲಿದ್ದಾರೆನ್ನುವ ಮಾಹಿತಿ ಇದೆ.

Anushka Sharma
ಅನುಷ್ಕಾ ಶರ್ಮಾ

By

Published : Dec 20, 2022, 8:59 PM IST

ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಅನೇಕ ಬ್ರ್ಯಾಂಡ್​ಗಳಿಗೆ ಅಂಬಾಸಿಡರ್ ಆಗಿದ್ದಾರೆ. ಇಂದು ಅನುಷ್ಕಾ ಶರ್ಮಾ ಅವರು ಪೂಮಾ ಸಂಸ್ಥೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ತಮ್ಮ ಒಪ್ಪಿಗೆ ಇಲ್ಲದೇ ಪೂಮಾ ಸಂಸ್ಥೆ ಫೋಟೋ ಬಳಸಿದ್ದೇ ಇದಕ್ಕೆ ಕಾರಣ ಎಂದು ಭಾವಿಸಲಾಗಿತ್ತು. ಆದ್ರೆ ಅಸಲಿಯತ್ತೇ ಬೇರೆ. ಅನುಷ್ಕಾ ಶರ್ಮಾ ಅವರು ಪೂಮಾ ಸಂಸ್ಥೆಯೊಂದಿಗೆ ಕೈ ಜೋಡಿಸಲಿದ್ದಾರೆನ್ನುವ ಮಾಹಿತಿ ಇದೆ. ಅದರ ಪ್ರಚಾರದ ಭಾಗವಾಗಿ ಹೀಗೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಅನುಷ್ಕಾ ಶರ್ಮಾ ತಮ್ಮ ಅನುಮತಿಯಿಲ್ಲದೇ ಅವರ ಚಿತ್ರಗಳನ್ನು ಬಳಸಿದ್ದಕ್ಕಾಗಿ ಬ್ರ್ಯಾಂಡ್ ಅನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ವರ್ಷದ ಅಂತ್ಯದ ಮಾರಾಟವನ್ನು ಪ್ರಚಾರ ಮಾಡುತ್ತ ಅಥ್ಲೀಟರ್ಸ್​ ಬ್ರ್ಯಾಂಡ್, ಪೂಮಾ ಸಂಸ್ಥೆ ಅನುಷ್ಕಾ ಅವರ ಚಿತ್ರಗಳನ್ನು ಬಳಸಿತ್ತು. ಪೂಮಾದ ಲೇಟೆಸ್ಟ್ ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳ ಪ್ರಕಾರ, ಕ್ರೀಡಾ ಉಡುಪುಗಳ ಪ್ರಮೋಶನ್​ ಪ್ರಾಜೆಕ್ಟ್​ಗೆ ನಟಿ ಶೀಘ್ರದಲ್ಲೇ ಸಹಿ ಹಾಕಲಿದ್ದಾರೆ ಎಂದು ತಿಳಿದುಬಂದಿದೆ. "PUMA x ANUSHKA" ಎಂದು ಬರೆದಿರುವ ಡಾಕ್ಯುಮೆಂಟ್ ಅನ್ನು ಹಂಚಿಕೊಳ್ಳುತ್ತ, "ಹೇ ಅನುಷ್ಕಾ ಶರ್ಮಾ, ನಾವು ಬೇಗ ತಲುಪಬೇಕಿತ್ತು!. ನಾವು ಮುಂದಿನ ಹಂತಕ್ಕೆ ವಿಷಯಗಳನ್ನು ತೆಗೆದುಕೊಂಡು ಹೋಗಬೇಕೇ? ಎಂದು ಪೂಮಾ ಸಂಸ್ಥೆ ಪೋಸ್ಟ್ ಮಾಡಿದೆ.

ಕುತೂಹಲಕಾರಿ ವಿಷಯವೆಂದರೆ, ಅನುಷ್ಕಾ ಅವರ ಪತಿ ವಿರಾಟ್ ಕೊಹ್ಲಿ ಪೂಮಾ ಬ್ರ್ಯಾಂಡ್​ ಅಂಬಾಸಿಡರ್ ಆಗಿದ್ದಾರೆ. ನಟಿ ಕರೀನಾ ಕಪೂರ್ ಖಾನ್ ಅವರು ಪೂಮಾ ಉತ್ಪನ್ನಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಪ್ರಚಾರ ಮಾಡುತ್ತಿರುತ್ತಾರೆ. ಈಗ ಅನುಷ್ಕಾ ಅವರು ಕರೀನಾ ಸ್ಥಾನಕ್ಕೆ ಹೋಗಲಿದ್ದಾರಾ ಅಥವಾ ಪೂಮಾ ಭಾಗವಾಗಲು ಬೆಬೋ ಮತ್ತು ವಿರಾಟ್ ಅವರ ತಂಡಕ್ಕೆ ಸೇರುತ್ತಾರೆಯೇ ಎಂಬುದು ಕುತೂಹಲಕಾರಿಯಾಗಿದೆ.

ಇದನ್ನೂ ಓದಿ:ಕಮಿಷನ್ ನೀಡದ್ದಕ್ಕೆ ನಟಿ ಉರ್ಫಿ ಜಾವೇದ್​ಗೆ ಅತ್ಯಾಚಾರ, ಕೊಲೆ ಬೆದರಿಕೆ?: ರಿಯಲ್ ಎಸ್ಟೇಟ್ ಬ್ರೋಕರ್ ಸೆರೆ

ABOUT THE AUTHOR

...view details