ಕರ್ನಾಟಕ

karnataka

ETV Bharat / entertainment

ಹೊಸ ಫೋಟೋ ಶೇರ್ ಮಾಡಿದ ಅನುಷ್ಕಾ ಶರ್ಮಾ: ಅಭಿಮಾನಿಗಳು ಹೀಗಂದ್ರು ನೋಡಿ! - ಅನುಷ್ಕಾ ಶರ್ಮಾ ಸಿನಿಮಾ

ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಇನ್​ಸ್ಟಾಗ್ರಾಮ್​ನಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ.

Anushka Sharma new instagram post
ಹೊಸ ಫೋಟೋ ಶೇರ್ ಮಾಡಿದ ಅನುಷ್ಕಾ ಶರ್ಮಾ

By

Published : Mar 16, 2023, 6:15 PM IST

ನಟಿ ಅನುಷ್ಕಾ ಶರ್ಮಾ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇಂದು ತಾವು ತಿಂದ ತಿನಿಸಿನ (croissant, ಬೇಕರಿ ತಿನಿಸು) ಫೋಟೋ ಜೊತೆಗೆ ತಮ್ಮ ಫೋಟೋವನ್ನೂ ಕೂಡ ಹಂಚಿಕೊಂಡಿದ್ದಾರೆ. ವಿಚಿತ್ರ ಭಂಗಿಯಲ್ಲಿ ತಮ್ಮ ಫೋಟೋ ಶೇರ್​ ಮಾಡಿದ್ದು, ಅಭಿಮಾನಿಗಳು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಆ ತಿನಿಸನ್ನು ಆಸ್ವಾದಿಸಿದ ಬಳಿಕ ನೀವು ಅನುಷ್ಕಾ ಶರ್ಮಾರ ಭಂಗಿ ನೋಡಲೇಬೇಕು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಅವರ ಇನ್‌ಸ್ಟಾಗ್ರಾಂ ಫೋಟೋಗಳು ಮೊದಮೊದಲು ವಿಚಿತ್ರವಾಗಿ ಕಂಡ ಜನರಿಗೆ, ಮುಂದಿನ ಫೋಟೋ ನೋಡಿದಾಗ ಅಸಲಿ ವಿಚಾರ ಬಯಲಾಗಿದೆ. ಅವರ ಮೊದಲೆರಡು ಫೋಟೋಗಳು ಕ್ಯೂಟ್​ ಆ್ಯಂಡ್​ ವಿಚಿತ್ರ ಭಂಗಿಯಲ್ಲಿದ್ದು, ನಂತರ ತಾವು ತಿಂದ ತಿನಿಸಿನ ಫೋಟೋ ಹಾಕಿದ್ದಾರೆ. ಈ ತಿನಿಸನ್ನು ಆಸ್ವಾದಿಸಿದ ಅನುಷ್ಕಾ ಹೀಗೆ ವಿಚಿತ್ರ ಪೋಸ್ ಕೊಡಲೇಬೇಕು ಎಂದು ನೆಟ್ಟಿಗರು ಕಾಮೆಂಟ್​ ಮಾಡುತ್ತಿದ್ದಾರೆ.

ಇನ್ನು ಈ ತಿನಿಸನ್ನು (croissant) ಬಿ-ಕಾಂಪ್ಲೆಕ್ಸ್ ವಿಟಮಿನ್‌ಗಳ ಆರೋಗ್ಯಕರ ಮೂಲವೆಂದು ಪರಿಗಣಿಸಲಾಗುತ್ತದೆ. ಇದು ನಮ್ಮ ಜೀವಕೋಶಗಳಿಗೆ ಶಕ್ತಿಯನ್ನು ನೀಡುತ್ತದೆ. ಜೀರ್ಣಕಾರಿ ಕಾರ್ಯಗಳನ್ನು ಸುಗಮಗೊಳಿಸುತ್ತದೆ. ವಿಟಮಿನ್‌ಗಳು ದೇಹದಲ್ಲಿ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ.. ಅನುಷ್ಕಾ ಶರ್ಮಾ ಸಿನಿಮಾ ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ನಟಿ. ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ 62.7 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್​ಗಳನ್ನು ಹೊಂದಿದ್ದಾರೆ. ಈವರೆಗೆ 1,200ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ಬಗೆಬಗೆಯ ಫೋಟೋಗಳನ್ನು ಹಂಚಿಕೊಳ್ಳೋದಂದ್ರೆ ಈ ನಟಿಗೆ ಎಲ್ಲಿಲ್ಲದ ಆಸಕ್ತಿ. ಅಭಿಮಾನಿಗಳು ಕೂಡ ಹೊಸ ಅಪ್​ಡೇಟ್ಸ್​​ಗೆ ಕಾಯುತ್ತಿರುತ್ತಾರೆ.

'ಚಕ್ಡಾ ಎಕ್ಸ್‌ಪ್ರೆಸ್'ನಲ್ಲಿ ಅನುಷ್ಕಾ ಅಭಿನಯ: ಇನ್ನು ಪ್ರೋಸಿತ್ ರಾಯ್ ನಿರ್ದೇಶನದ 'ಚಕ್ಡಾ ಎಕ್ಸ್‌ಪ್ರೆಸ್'ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ದಂತಕಥೆ ಜೂಲನ್ ಗೋಸ್ವಾಮಿ ಪಾತ್ರದಲ್ಲಿ ನಟಿ ಅನುಷ್ಕಾ ಶರ್ಮಾ ಅಭಿನಯಿಸಿದ್ದಾರೆ. ಜೂಲನ್ ಗೋಸ್ವಾಮಿ ಅವರ ಜೀವನ ಆಧರಿಸಿದ ಕ್ರೀಡಾ ಬಯೋಪಿಕ್ ಇದೇ ಸಾಲಿನಲ್ಲಿ ತೆರೆ ಕಾಣಲಿದೆ. ಶಾರುಖ್​ ಖಾನ್​ ನಟನೆಯ ಝೀರೋ ಚಿತ್ರದಲ್ಲಿ ಅನುಷ್ಕಾ ಕೊನೆಯದಾಗಿ ಕಾಣಿಸಿಕೊಂಡಿದ್ದರು. ನಾಲ್ಕು ವರ್ಷಗಳ ಬ್ರೇಕ್​​ ನಂತರ ಮತ್ತೆ ಬೆಳ್ಳಿತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಅನುಷ್ಕಾ ತಾಯಿಯಾದ ನಂತರ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರ. ಹಾಗಾಗಿ ಅವರನ್ನು ಮತ್ತೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ:ಬಿಜಿಲಿ ಮಹಾದೇವರ ದರ್ಶನ ಪಡೆದ ಬಾಲಿವುಡ್​ ನಟಿ ಸಾರಾ ಅಲಿಖಾನ್​​

ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಆಗಾಗ್ಗೆ ದೇವಸ್ಥಾನಗಳಿಗೆ ಭೇಟಿ ಕೊಡುವ ಮೂಲಕ ಗಮನ ಸೆಳೆಯುತ್ತಾರೆ. ಇತ್ತೀಚೆಗಷ್ಟೇ ಉಜ್ಜಯಿನಿಯ ವಿಶ್ವವಿಖ್ಯಾತ ಬಾಬಾ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದರು. ಬಾಬಾ ಮಹಾಕಾಳೇಶ್ವರನಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಭಸ್ಮ ಆರತಿ ಸಲ್ಲಿಸಿದ ನಂತರ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮಹಾಕಾಳ್​ ದೇವರ ಗರ್ಭಗುಡಿಗೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದರು. ಕೆಲ ಹೊತ್ತು ಕುಳಿತು ಪ್ರಾರ್ಥನೆ ಸಲ್ಲಿಸಿದ್ದರು. ಪುಣ್ಯ ಕ್ಷೇತ್ರಗಳ ಭೇಟಿ ವಿಚಾರವಾಗಿ ಅಭಿಮಾನಿಗಳು ಮಾತ್ರವಲ್ಲದೇ ಚಿತ್ರರಂಗದವರೂ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:ಚಿತ್ರರಂಗಕ್ಕೆ ಅಜಯ್-ಕಾಜೋಲ್ ಪುತ್ರನ ಎಂಟ್ರಿ ಬಗ್ಗೆ ಕೇಳಿದ್ದಕ್ಕೆ ದೇವ್​ಗನ್​ ಉತ್ತರವೇನು ಗೊತ್ತಾ?

ABOUT THE AUTHOR

...view details