ಕರ್ನಾಟಕ

karnataka

ETV Bharat / entertainment

ಯಶಸ್ಸಿನ ಶಿಖರದಿಂದ ಜಾರಿ ಬಿದ್ದ ಟೀಂ ಇಂಡಿಯಾ; ಪತಿಯನ್ನು ಬಿಗಿದಪ್ಪಿ ಸಂತೈಸಿದ ಅನುಷ್ಕಾ ಶರ್ಮಾ - ಈಟಿವಿ ಭಾರತ ಕನ್ನಡ

Anushka Sharma hugs Virat Kohli: ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತ ಬಳಿಕ ವಿರಾಟ್​ ಕೊಹ್ಲಿಯನ್ನು ಪತ್ನಿ ಅನುಷ್ಕಾ ಶರ್ಮಾ ಅಪ್ಪಿಕೊಂಡು ಸಂತೈಸಿದರು.

Anushka Sharma hugs Virat Kohli after team India faces defeat against Australia in World Cup Final
ವಿಶ್ವಕಪ್​ನಲ್ಲಿ ಭಾರತಕ್ಕೆ ಸೋಲು; ಪತಿಯನ್ನು ಅಪ್ಪಿಕೊಂಡು ಸಂತೈಸಿದ ಅನುಷ್ಕಾ ಶರ್ಮಾ

By ETV Bharat Karnataka Team

Published : Nov 20, 2023, 10:18 AM IST

ಭಾರತವನ್ನು ಮಣಿಸಿದ ಆಸ್ಟ್ರೇಲಿಯಾ 2023ರ ವಿಶ್ವಕಪ್​ ತನ್ನದಾಗಿಸಿಕೊಂಡಿದೆ. ಪ್ರಾರಂಭದಿಂದಲೂ ಎಲ್ಲಾ ಪಂದ್ಯಗಳನ್ನೂ ಗೆದ್ದುಕೊಂಡು ಬಂದಿದ್ದ ಟೀಂ ಇಂಡಿಯಾ ಅಂತಿಮ ಕದನದಲ್ಲಿ ಸೋಲೊಪ್ಪಿಕೊಂಡಿತು. ಪ್ರಯತ್ನ ಮೀರಿ ಗೆಲುವಿಗಾಗಿ ಶ್ರಮಿಸಿದರೂ, ಮ್ಯಾಚ್​ ಕೈತಪ್ಪಿ ಹೋಯಿತು. ಭಾರತ ಸೋತ ಬಳಿಕ ವಿರಾಟ್ ಕೊಹ್ಲಿಯನ್ನು ಪತ್ನಿ ಅನುಷ್ಕಾ ಶರ್ಮಾ ತಬ್ಬಿಕೊಂಡು ಸಂತೈಸಿದರು. ಈ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ​

ನವೆಂಬರ್​ 19ರಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ ವಿಶ್ವಕಪ್​ ಪೈನಲ್‌ ಕದನದಲ್ಲಿ ಕಾಂಗರೂ ಪಡೆ 6 ವಿಕೆಟ್​ಗಳಿಂದ ಜಯ ದಾಖಲಿಸಿದೆ. ಸೋಲಿನ ನಂತರ ಇಡೀ ತಂಡದ ಸದಸ್ಯರು ಭಾವುಕರಾದರು. ಈ ವೇಳೆ ಪತಿ ವಿರಾಟ್​ ಕೊಹ್ಲಿಯನ್ನು ಅನುಷ್ಕಾ ಶರ್ಮಾ ತಬ್ಬಿ ಸಂತೈಸಿದರು. ಮತ್ತೊಂದು ವೈರಲ್​ ಫೋಟೋದಲ್ಲಿ, ಟೀಂ ಇಂಡಿಯಾ ಸೋಲುತ್ತಿದ್ದಂತೆ ಕೆ.ಎಲ್.ರಾಹುಲ್​ ಪತ್ನಿ ಆಥಿಯಾ ಶೆಟ್ಟಿ ಮತ್ತು ಅನುಷ್ಕಾ ಶರ್ಮಾ ಭಾವುಕರಾಗಿರುವುದನ್ನು ನೋಡಬಹುದು.

ಮತ್ತೊಂದೆಡೆ, ಪಂದ್ಯ ಮುಗಿದ ತಕ್ಷಣ ಅನೇಕ ಸಿನಿಮಾ ತಾರೆಯರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಟೀಂ ಇಂಡಿಯಾದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ಕೂಡ ಭಾರತ ತಂಡದ ಜೊತೆ ನಿಂತುಕೊಂಡಿದ್ದಾರೆ. ಟೀಂ ಇಂಡಿಯಾಗೆ ಧೈರ್ಯ ತುಂಬಿದ್ದಾರೆ. 'ಆತ್ಮೀಯ ಟೀಂ ಇಂಡಿಯಾ, ವಿಶ್ವಕಪ್‌ನಲ್ಲಿ ನಿಮ್ಮ ಪ್ರತಿಭೆ ಮತ್ತು ದೃಢಸಂಕಲ್ಪ ಗಮನಾರ್ಹವಾಗಿದೆ. ನೀವು ಉತ್ತಮ ಉತ್ಸಾಹದಿಂದ ಆಟವಾಡಿದ್ದೀರಿ ಮತ್ತು ದೇಶಕ್ಕೆ ದೊಡ್ಡ ಹೆಮ್ಮೆ ತಂದಿದ್ದೀರಿ. ನಾವು ಇಂದು ಮತ್ತು ಯಾವಾಗಲೂ ನಿಮ್ಮೊಂದಿಗೆ ಇರುತ್ತೇವೆ' ಎಂದು ತಿಳಿಸಿದ್ದಾರೆ.

ಇಡೀ ವಿಶ್ವವೇ ನಮ್ಮ ಕ್ರೀಡಾ ಪರಂಪರೆಯ ಬಗ್ಗೆ ಹೆಮ್ಮೆಪಡುವಂತೆ ಮಾಡಿದ್ದಕ್ಕಾಗಿ ಬಾಲಿವುಡ್​ ನಟ ಶಾರುಖ್​ ಖಾನ್​ ತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ. 'ಭಾರತ ತಂಡ ಇಡೀ ಪಂದ್ಯಾವಳಿಯನ್ನು ಆಡಿದ ರೀತಿ ಗೌರವಯುತವಾಗಿದೆ. ಕ್ರೀಡೆ ಅಂದ ಮೇಲೆ ಸೋಲು, ಗೆಲುವು ಇದ್ದೇ ಇರುತ್ತದೆ. ದುರದೃಷ್ಟವಶಾತ್, ಇಂದು ಸೋಲು ಅನುಭವಿಸಿದ್ದೇವೆ. ಆದರೂ ನಮ್ಮ ಕ್ರೀಡಾ ಪರಂಪರೆಯ ಬಗ್ಗೆ ಹೆಮ್ಮೆ ತಂದಿದ್ದಕ್ಕಾಗಿ ಭಾರತದ ಕ್ರಿಕೆಟ್​ ತಂಡಕ್ಕೆ ಧನ್ಯವಾದಗಳು. ನೀವು ಇಡೀ ಭಾರತಕ್ಕೆ ಮೆರುಗು ತಂದಿದ್ದೀರಿ. ಪ್ರೀತಿ ಮತ್ತು ಗೌರವದೊಂದಿಗೆ ನಮ್ಮ ದೇಶವನ್ನು ಒಂದು ಹೆಮ್ಮೆಯ ರಾಷ್ಟ್ರವನ್ನಾಗಿ ಮಾಡುತ್ತೀರಿ. 2023ರ ವಿಶ್ವಕಪ್‌ನಾದ್ಯಂತ ನಿಮ್ಮ ಪ್ರಾಮಾಣಿಕ ಪ್ರಯತ್ನಗಳು ಶ್ಲಾಘನೀಯ' ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಫೈನಲ್ ಪಂದ್ಯದ ಸಂಕ್ಷಿಪ್ತ ಮಾಹಿತಿ: ಮೊದಲು ಬ್ಯಾಟ್ ಮಾಡಿದ ಭಾರತ 240 ರನ್‌ಗಳಿಗೆ ಸೀಮಿತವಾಯಿತು. ಮಿಚೆಲ್ ಸ್ಟಾರ್ಕ್ ನೇತೃತ್ವದ ಆಸೀಸ್ ಬೌಲರ್‌ಗಳ ಅದ್ಭುತ ಪ್ರದರ್ಶನ ಹಾಗು ಟ್ರಾವಿಸ್ ಹೆಡ್ ಅವರ ಶತಕದಾಟ ಭಾರತಕ್ಕೆ ಮುಳುವಾಯಿತು. ಹೆಡ್ 120 ಎಸೆತಗಳಲ್ಲಿ 137 ರನ್ ಗಳಿಸುವುದರೊಂದಿಗೆ ತಂಡ 43 ಓವರ್‌ಗಳಲ್ಲಿ 241 ರನ್ ಗಳಿಸಿತು. ಅಂತಿಮವಾಗಿ ಆತಿಥೇಯರ ವಿಶ್ವ ಚಾಂಪಿಯನ್ ಕನಸು ಭಗ್ನಗೊಂಡಿತು.

ಇದನ್ನೂ ಓದಿ:'ಕ್ರೀಡೆಯಲ್ಲಿ ಸೋಲು, ಗೆಲುವು ಸಹಜ; ನೀವು ದೇಶಕ್ಕೆ ಹಮ್ಮೆ ತಂದಿದ್ದೀರಿ': ಟೀಂ ಇಂಡಿಯಾಗೆ ಧೈರ್ಯ ತುಂಬಿದ ಶಾರುಖ್ ಖಾನ್

ABOUT THE AUTHOR

...view details