ಕರ್ನಾಟಕ

karnataka

ETV Bharat / entertainment

ವಿರಾಟ್​ ಹುಟ್ಟುಹಬ್ಬ: ವಿಶೇಷವಾಗಿ ಶುಭಕೋರಿದ ಅನುಷ್ಕಾ... ಪುತ್ರಿಯ ಫೋಟೋ ಶೇರ್ - ನಟಿ ಅನುಷ್ಕಾ ಶರ್ಮಾ

ವಿರಾಟ್ ಕೊಹ್ಲಿ ಹುಟ್ಟುಹಬ್ಬಕ್ಕೆ ನಟಿ ಅನುಷ್ಕಾ ಶರ್ಮಾ ವಿಶೇಷವಾಗಿ ಶುಭ ಕೋರಿದ್ದಾರೆ.

Anushka Sharma birthday post for Virat Kohli
ವಿರಾಟ್​ ಹುಟ್ಟುಹಬ್ಬಕ್ಕೆ ಅನುಷ್ಕಾ ವಿಶ್

By

Published : Nov 5, 2022, 1:00 PM IST

ಭಾರತೀಯ ಕ್ರಿಕೆಟ್​ ತಂಡದ ಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿ 34ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಪತ್ನಿ ನಟಿ ಅನುಷ್ಕಾ ಶರ್ಮಾ ವಿಶೇಷವಾಗಿ ಶುಭ ಕೋರಿದ್ದಾರೆ.

ಅನುಷ್ಕಾ ಶರ್ಮಾ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ''ಇಂದು ನಿಮ್ಮ ಜನ್ಮದಿನ, ಹಾಗಾಗಿ ಖಂಡಿತವಾಗಿಯೂ ನಿಮ್ಮ ಬೆಸ್ಟ್​ ಫೋಟೋಗಳನ್ನು ಆರಿಸಿಕೊಂಡಿದ್ದೇನೆ'' ಎಂದು ಬರೆದು ವಿರಾಟ್​ ಅವರ ಫನ್ನಿ ಫೋಟೋ ಶೇರ್​ ಮಾಡಿದ್ದಾರೆ. ಜೊತೆಗೆ ಪುತ್ರಿ ವಮಿಕಾ ಅವರೊಂದಿಗಿನ ಫೋಟೋ ಸಹ ಹಂಚಿಕೊಂಡಿದ್ದಾರೆ. ಈ ಪೋಸ್ಟ್​​ಗೆ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿ ಪ್ರೀತಿಯ ಸಂದೇಶ ಕಳುಹಿಸುತ್ತಿದ್ದಾರೆ.

ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ. ವಿಶ್ವಶ್ರೇಷ್ಠ ನಾಯಕ ಎಂಎಸ್ ಧೋನಿಯಿಂದ ತೆರವಾದ ನಾಯಕತ್ವ ಸ್ಥಾನವನ್ನು ವಿರಾಟ್ ಕೊಹ್ಲಿ ವಹಿಸಿಕೊಂಡಿದ್ದರು. ಸದ್ಯ ಭಾರತ ತಂಡಕ್ಕೆ ರೋಹಿತ್​ ಶರ್ಮಾ ನಾಯಕರಾಗಿ ಮುಂದುವರಿದಿದ್ದಾರೆ. ಇಂದು ವಿರಾಟ್​ ಜನ್ಮದಿನ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಕ್ರಿಕೆಟ್​ನಲ್ಲಿ ಕೊಹ್ಲಿ ಮೇಲೆ ಅಭಿಮಾನಿಗಳು ಭಾರಿ ಭರವಸೆ ಇರಿಸಿಕೊಂಡಿದ್ದಾರೆ.

ಪುತ್ರಿ ವಮಿಕಾಳೊಂದಿಗೆ ವಿರಾಟ್ ಕೊಹ್ಲಿ

ಇದನ್ನೂ ಓದಿ:ಅಸಾಧ್ಯ ಅನ್ನೋ ಮಾತೇ ಇಲ್ಲ..! ಪಾಕ್​ ವಿರುದ್ಧ ಪಂದ್ಯ ಗೆಲ್ಲಿಸಿದ್ದ ಕೊಹ್ಲಿಗೆ ಇಂದು ಜನ್ಮದಿನದ ಸಂಭ್ರಮ

ಬಾಲಿವುಡ್​ ನಟಿ ಅನುಷ್ಕಾ ಶರ್ಮಾರನ್ನು ಪ್ರೀತಿಸುತ್ತಿದ್ದ ವಿರಾಟ್​ ಕೊಹ್ಲಿ 2017ರಲ್ಲಿ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ದಂಪತಿಗೆ ಓರ್ವ ಹೆಣ್ಣು ಮಗುವಿದ್ದು, ಸದ್ಯ ಸುಖ ಸಂಸಾರ ನಡೆಸುತ್ತಿದ್ದಾರೆ. ಬೆಸ್ಟ್​ ಕಪಲ್​ ಎಂದೇ ಹೆಸರುವಾಸಿಯಾಗಿದ್ದಾರೆ.

ವಿರಾಟ್ ಕೊಹ್ಲಿ

ABOUT THE AUTHOR

...view details