ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಈ ಬಾರಿ ಮೊದಲ ಬಾರಿಗೆ ಫ್ರಾನ್ಸ್ನಲ್ಲಿ ನಡೆದ 76ನೇ ಕಾನ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದು, ಫ್ಯಾಷನ್ ಅವತಾರದಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗಿಯಾಗಿರುವ ಫೋಟೋಗಳನ್ನು ನಟಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಪಿಂಕ್ ಡ್ರೆಸ್ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾಳೆ. ಅದಕ್ಕಿಂತ ಒಂದು ದಿನದ ಹಿಂದೆ ಹಂಚಿಕೊಂಡ ಫೋಟೋಗಳಲ್ಲಿ ಶ್ವೇತವರ್ಣದ ಬಟ್ಟೆ ತೊಟ್ಟು, ಮಾದಕ ನೋಟ ಬೀರಿದ್ದ ನಟಿ ಅನುಷ್ಕಾ ಶರ್ಮಾ.
ಶನಿವಾರ ಇನ್ಸ್ಟಾಗ್ರಾಂನಲ್ಲಿ ಕಾನ್ ಚಿತ್ರೋತ್ಸವದಲ್ಲಿ ತನ್ನ ಎರಡನೇ ದಿನದ ಫೋಟೋಗಳ ಸರಣಿಯನ್ನು ಹಂಚಿಕೊಂಡಿದ್ದು, "La nuit... @festivaldecannes," ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಅನುಷ್ಕಾ ಗುಲಾಬಿ ಬಣ್ಣದ ಟ್ಯೂಬ್ ಟಾಪ್ ಧರಿಸಿ ಅದಕ್ಕೆ ಹೊಂದಿಕೆಯಾಗುವಂತಹ ಮಿನುಗುವ ಪ್ಯಾಂಟ್ ಧರಿಸಿ ಸುಂದರವಾಗಿ ಕಾಣುತ್ತಿದ್ದರು. ಉಡುಪಿಗೆ ತಕ್ಕಂತೆ ಮೃದುವಾದ ಗ್ಲಾಮ್ ಮೇಕ್ಅಪ್ ಮಾಡಿಕೊಂಡು, ಕಾರ್ಟಿಯರ್ ಅವರ ಪ್ರಾಡಾ ಆಭರಣಗಳನ್ನು ಧರಿಸಿ, ಕಾನ್ ಅಂಗಳಕ್ಕೆ ಕಾಲಿಟ್ಟಿದ್ದರು.
ಅಂದಕ್ಕೆ ಒಪ್ಪುವಂತೆ ತನ್ನ ಕೂದಲನ್ನು ಪೋನಿಟೇಲ್ ಕಟ್ಟಿದ ಫೋಟೋಗಳನ್ನು ಅನುಷ್ಕಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಹಾರ್ಟ್ ಇಮೋಜಿಗಳು ಮತ್ತು ಫೈರ್ ಎಮೋಟಿಕಾನ್‌ಗಳಿಂದ ಕಾಮೆಂಟ್ ಬಾಕ್ಸ್ಗಳನ್ನು ತುಂಬಿದ್ದಾರೆ. "Queen is slayin!" ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ."ಇಡೀ ಚಿತ್ರರಂಗದಲ್ಲಿ ನಿಮಗಿಂತ ಉತ್ತಮರು ಯಾರೂ ಇಲ್ಲ. ನೀವು ಅತ್ಯಂತ ಸುಂದರ ಮತ್ತು ಸುಂದರಿ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಕಮೆಂಟ್ಗಳ ಸುರಿಮಳೆ ಹರಿಸಿದ್ದಾರೆ.