ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಇದೀಗ ಡಬಲ್ ಖುಷಿಯಲ್ಲಿದ್ದಾರೆ. ಒಂದೆಡೆ ಫ್ರಾನ್ಸ್ನಲ್ಲಿ ಜರುಗುತ್ತಿರುವ ಕಾನ್ ಚಲನಚಿತ್ರೋತ್ಸವದಲ್ಲಿ ಅನುರಾಗ್ ಕಶ್ಯಪ್ ಅವರ ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದರೆ, ಇನ್ನೊಂದೆಡೆ ಅವರ ಮಗಳು ಆಲಿಯಾ ಕಶ್ಯಪ್ ತಮ್ಮ ದೀರ್ಘ ಕಾಲದ ಗೆಳೆಯ ಶೇನ್ ಗ್ರೆಗೊಯಿರ್ ಜೊತೆ ಎಂಗೇಜ್ ಆಗಿದ್ದಾರೆ. ಅನುರಾಗ್ ಕಶ್ಯಪ್ ಅವರ ಮಾಜಿ ಪತ್ನಿ ಹಾಗೂ ಫಿಲ್ಮ್ ಎಡಿಟರ್ ಆರತಿ ಭಟ್ ಅವರ ಮಗಳಾದ ಆಲಿಯಾ ಕಶ್ಯಪ್, ಗೆಳೆಯ ಶೇನ್ ಜೊತೆ ಇಂಡೋನೇಷ್ಯಾದಲ್ಲಿ ಹಾಲಿಡೇಸ್ ಟ್ರಿಪ್ನಲ್ಲಿದ್ದು, ಅಲ್ಲಿ ಗೆಳೆಯ ಶೇನ್ ಪ್ರೀ ಪ್ರೊಪೋಸಲ್ ಗೆ ಒಕೆ ಹೇಳಿದ್ದಾರೆ. ಆಲಿಯಾ ಕಶ್ಯಪ್ ತನ್ನ ಪ್ರೀತಿ ಒಪ್ಪಿಗೆ ಮುದ್ರೆ ಒತ್ತುತ್ತಿದ್ದಂತೆ, ಪ್ರೀತಿಯ ಸಂಕೇತವಾಗಿ ಶೇನ್ ಆಲಿಯಾ ಕೈಬೆರಳಿಗೆ ಡೈಮಂಡ್ ರಿಂಗ್ ತೊಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಆಲಿಯಾ, ಶೇನ್ಗೆ ಯೆಸ್ ಹೇಳಿರುವ ವಿಷಯವನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಆಲಿಯಾ, "ಹೌದು" ಎಂದು ಹೇಳುವ ಮೂಲಕ ಪ್ರೀತಿಯ ಪೋಸ್ಟ್ ಅನ್ನು ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮಕ್ಕೆ ಕರೆದೊಯ್ದರು. ತನ್ನ ಇನ್‌ಸ್ಟಾಗ್ರಾಮ್ ಅನುಯಾಯಿಗಳೊಂದಿಗೆ ಸುದ್ದಿಯನ್ನು ಹಂಚಿಕೊಂಡ ಆಲಿಯಾ ಬರೆದಿದ್ದಾರೆ, "ಸರಿ ಇದು ಸಂಭವಿಸಿದೆ !!!!! ನನ್ನ ಆತ್ಮೀಯ ಸ್ನೇಹಿತ, ನನ್ನ ಸಂಗಾತಿ, ನನ್ನ ಆತ್ಮ ಸಂಗಾತಿ ಮತ್ತು ಈಗ ನನ್ನ ಭಾವೀಪತಿ! ನೀನು ನನ್ನ ಜೀವನದ ಪ್ರೀತಿ. ನಿಜ ಏನು ಹಾಗೂ ಬೇಷರತ್ತಾದ ಪ್ರೀತಿ ಹೇಗಿರುತ್ತದೆ ಎಂದು ನನಗೆ ತೋರಿಸಿದ್ದಕ್ಕಾಗಿ ಧನ್ಯವಾದಗಳು. ಹೌದು ಎಂದು ಹೇಳುವುದು ನಾನು ಮಾಡಿದ ಅತ್ಯಂತ ಸುಲಭವಾದ ಕೆಲಸವಾಗಿದೆ ಮತ್ತು ನನ್ನ ಉಳಿದ ಜೀವನವನ್ನು ನಿಮ್ಮೊಂದಿಗೆ ಕಳೆಯಲು ನಾನು ಕಾಯಲು ಸಾಧ್ಯವಿಲ್ಲ, ಮೈ ಲವ್." ಎಂದು ಬರೆದುಕೊಂಡಿದ್ದಾರೆ.
ಲೈಫ್ ಸ್ಟೈಲ್, ಫ್ಯಾಷನ್ ಮತ್ತು ಸೌಂದರ್ಯದ ಕುರಿತು ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಆಲಿಯಾ ಅವರು ಮತ್ತೆ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ಫೋಟೋದಲ್ಲಿ ತಮ್ಮ ಕೈಬೆರಳಿನಲ್ಲಿರುವ ಉಂಗುರವನ್ನು ತೋರಿಸುತ್ತಿದ್ದರೆ, ಇನ್ನೊಂದರಲ್ಲಿ ಜೋಡಿ ಚುಂಬಿಸುತ್ತಿರುವುದಿದೆ. ಪೋಸ್ಟ್ ಕೊನೆಗೆ ಆಲಿಯಾ ಎಂಗೇಜ್ ಆಗಿರುವ ಆ ಭಾವನೆ ಇನ್ನೂ ನನ್ನನ್ನು ಹಾಗೆಯೇ ತೇಲಾಡಿಸುತ್ತಿದೆ. "ನಾನು ನಿನ್ನನ್ನು ಶಾಶ್ವತವಾಗಿ ಪ್ರೀತಿಸುತ್ತೇನೆ ಮತ್ತು ಯಾವಾಗಲೂ ನಿಶ್ಚಿತ ಭಾವಿಪತಿ (ಇನ್ನೂ ನಾನು ನಿನ್ನನ್ನು ಕರೆಯುತ್ತೇನೆ ಎಂದು ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ.)" ಎಂದು ಬರೆದುಕೊಂಡಿದ್ದಾರೆ.