ನವದೆಹಲಿ:ಹಿರಿಯ ನಟ ಅನುಪಮ್ ಖೇರ್ ಅವರ ಮುಂಬರುವ 525 ನೇ ಚಿತ್ರ 'ದಿ ಸಿಗ್ನೇಚರ್'ನ ಫಸ್ಟ್ ಲುಕ್ ಬಿಡುಗಡೆಯಾಗಿದೆ. ತಮ್ಮ ಮುಂದಿನ ಸಿನಿಮಾದ ಬಗ್ಗೆ ಖೇರ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
ಪೋಸ್ಟರ್‌ನಲ್ಲಿ ಕಾಣುವಂತೆ ಅನುಪಮ್ ಖೇರ್ ಅವರು ರಸ್ತೆಯಲ್ಲಿ ನಿಂತು ಕೈಯಲ್ಲಿ ಛತ್ರಿ ಹಿಡಿದು, ಮತ್ತೊಂದು ಕೈಯಲ್ಲಿ ಚೀಲವನ್ನು ಹಿಡಿದುಕೊಂಡು ಗಾಢ ಚಿಂತನೆಯಲ್ಲಿರುವಂತೆ ತೋರಿಸಲಾಗಿದೆ.
ತಮ್ಮ 525 ನೇ ಸಿನಿಮಾಗೆ ದಿ ಸಿಗ್ನೇಚರ್ ಎಂದು ಹೆಸರಿಸಿ ಅಂತಿಮಗೊಳಿಸಲಾಗಿದೆ. ಈ ಸಿನಿಮಾದ ಬಗ್ಗೆ ಹೆಚ್ಚು ಉತ್ಸುಕನಾಗಿದ್ದೇನೆ. ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇವೆ ಎಂದು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ಸಿನಿಮಾವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಗಜೇಂದ್ರ ಅಹಿರೆ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಕೆಸಿ ಬೊಕಾಡಿಯಾ ನಿರ್ಮಾಣ ಮತ್ತು ಅನುಪಮ್ ಖೇರ್ ಸ್ಟುಡಿಯೋ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ಚಿತ್ರದ ಶೀರ್ಷಿಕೆಯನ್ನು ನಿರ್ಧರಿಸಲು ನಮಗೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು.. ಜೈ ಹೋ ಎಂದು ಬರೆದುಕೊಂಡಿದ್ದಾರೆ.
ಚಲನಚಿತ್ರ ವಿಮರ್ಶಕ ಮತ್ತು ವಿಶ್ಲೇಷಕ ತರುಣ್ ಆದರ್ಶ್ ಅವರು ಕೂಡ ಅನುಪಮ್ ಖೇರ್ ಮತ್ತು ಮಹಿಮಾ ಚೌಧರಿ ಅಭಿನಯದ 'ದಿ ಸಿಗ್ನೇಚರ್' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಓದಿ:ದಿಶಾ ಪಟಾನಿ ಮಾದಕ ಲುಕ್ಗೆ ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್