ಕರ್ನಾಟಕ

karnataka

ETV Bharat / entertainment

ಸರ್​ಪ್ರೈಸ್! 'ಘೋಸ್ಟ್'​ ಕುರಿತು ವಿಡಿಯೋ ಕಾಲ್​ನಲ್ಲಿ ಅನುಪಮ್​ ಖೇರ್- ಶಿವಣ್ಣ ಮಾತುಕತೆ - ಈಟಿವಿ ಭಾರತ ಕನ್ನಡ

ಬಾಲಿವುಡ್ ನಟ ಅನುಪಮ್ ಖೇರ್ ಹಾಗೂ ಶಿವಣ್ಣ ವಿಡಿಯೋ ಕಾಲ್ ಮೂಲಕ 'ಘೋಸ್ಟ್' ಸಿನಿಮಾದ ಹಿಂದಿ ರಿಲೀಸ್​ ಬಗ್ಗೆ ಮಾತನಾಡಿದ್ದಾರೆ.

Anupam Kher And Shivarajkumar
ಸರ್​ಪ್ರೈಸ್! 'ಘೋಸ್ಟ್'​ ಕುರಿತು ವಿಡಿಯೋ ಕಾಲ್​ನಲ್ಲಿ ಅನುಪಮ್​ ಖೇರ್- ಶಿವಣ್ಣ ಮಾತುಕತೆ

By ETV Bharat Karnataka Team

Published : Sep 25, 2023, 6:20 PM IST

ಟೈಟಲ್​ನಿಂದಲೇ ಸೌತ್​ ಇಂಡಸ್ಟ್ರಿಯಲ್ಲಿ ಸಖತ್​ ಟಾಕ್​ ಆಗುತ್ತಿರುವ ಸಿನಿಮಾ 'ಘೋಸ್ಟ್​'. ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್​​ ಗ್ಯಾಂಗ್​ಸ್ಟರ್ ಆಗಿ ಕಾಣಿಸಿಕೊಂಡಿರುವ ಪ್ಯಾನ್ ಇಂಡಿಯಾ ಚಿತ್ರವಿದು. ಸದ್ಯ ಟೀಸರ್​ನಿಂದಲೇ ವರ್ಲ್ಡ್‌ ವೈಡ್ ಕ್ರೇಜ್ ಹುಟ್ಟಿಸಿರುವ ಘೋಸ್ಟ್ ಸಿನಿಮಾ ದಕ್ಷಿಣ ಭಾರತದಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಸೌಂಡ್ ಮಾಡುತ್ತಿದೆ. ನಿರ್ದೇಶಕ ಶ್ರೀನಿ ಆ್ಯಕ್ಷನ್​ ಕಟ್​ ಹೇಳಿರುವ ಈ ಚಿತ್ರದ ಬಿಡುಗಡೆಯ ದಿನಾಂಕ ಕೂಡ ಅನೌನ್ಸ್​ ಆಗಿದೆ. ಚಿತ್ರ ರಿಲೀಸ್​ಗೂ ಮುನ್ನವೇ ಭಾರೀ ಬ್ಯುಸಿನೆಸ್​​ ಮಾಡಿದೆ. ​

ಈಗಾಗಲೇ ಚಿತ್ರತಂಡ ಶಿವ ರಾಜ್​ಕುಮಾರ್​ ಸಖತ್ ಎನರ್ಜಿಟಿಕ್ ಆಗಿರುವ ತ್ರಿಡಿ ಪೋಸ್ಟರ್​ ಅನ್ನು ಅನಾವರಣ ಮಾಡಿತ್ತು. ಇದೀಗ ಬಾಲಿವುಡ್ ನಟ ಅನುಪಮ್ ಖೇರ್ ಹಾಗೂ ಶಿವಣ್ಣ ವಿಡಿಯೋ ಕಾಲ್ ಮೂಲಕ ಘೋಸ್ಟ್ ಸಿನಿಮಾದ ಕ್ರೇಜ್ ಬಗ್ಗೆ ಮಾತನಾಡಿದ್ದಾರೆ. ಅನುಪಮ್ ಖೇರ್ ಶಿವಣ್ಣನಿಗೆ ಘೋಸ್ಟ್​ ಹಿಂದಿಯಲ್ಲಿ ಬಿಡುಗಡೆ ಆಗುವುದರ ಬಗ್ಗೆ ಯಾವ ರೀತಿ ಸಿದ್ಧತೆ ನಡೆಯುತ್ತಿದೆ? ಎಂದು ಪ್ರಶ್ನಿಸಿದ್ದಾರೆ. ಈ ಕಡೆ ಶಿವ ರಾಜ್​ಕುಮಾರ್, ಸದ್ಯದಲ್ಲೇ ಘೋಸ್ಟ್ ಚಿತ್ರದ ಬಗ್ಗೆ ಒಂದು ಗುಡ್ ನ್ಯೂಸ್ ಇದೆ. ವೈಟ್​ ಆಂಡ್​ ವಾಚ್. ಸರ್​ಪ್ರೈಸ್​​ ಎಂದು ಉತ್ತರಿಸಿದ್ದಾರೆ.

ಹಾಗಾಗಿ ಆ ಸರ್​ಪ್ರೈಸ್​ ಏನಾಗಿರಬಹುದು? ಎಂಬುದು ಸದ್ಯ ಶಿವಣ್ಣನ ಅಭಿಮಾನಿಗಳಲ್ಲಿರುವ ಕುತೂಹಲದ ಪ್ರಶ್ನೆ. ಇನ್ನು ಘೋಸ್ಟ್​ ಸಿನಿಮಾದ ಥಿಯೇಟ್ರಿಕಲ್, ಸ್ಯಾಟಲೈಟ್ ಹಾಗೂ ಡಿಜಿಟಲ್ ರೈಟ್ಸ್ ಈಗಾಗಲೇ ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ಆರ್​ಆರ್​ಆರ್​, ಜವಾನ್​ ಸೇರಿದಂತೆ ಅನೇಕ ಸೂಪರ್​ ಹಿಟ್​ ಚಿತ್ರಗಳನ್ನು ವಿತರಣೆ ಮಾಡಿರುವ ಪೆನ್​ ಸ್ಟುಡಿಯೋ ಸಂಸ್ಥೆ ಘೋಸ್ಟ್​ ಚಿತ್ರದ ವಿತರಣಾ ಹಕ್ಕನ್ನು ಪಡೆದುಕೊಂಡಿದೆ.

ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಭಾಷೆಗಳಲ್ಲಿ ಘೋಸ್ಟ್ ಚಿತ್ರವನ್ನು ಪೆನ್ ಸ್ಟುಡಿಯೋ ಸಂಸ್ಥೆ ಬಿಡುಗಡೆ ಮಾಡುತ್ತಿದೆ. ಅಕ್ಟೋಬರ್ ಮೊದಲ ವಾರ ಘೋಸ್ಟ್ ಚಿತ್ರದ ಪ್ರಚಾರಕ್ಕಾಗಿ ಶಿವರಾಜ​ಕುಮಾರ್ ಮುಂಬೈ, ದೆಹಲಿ ಮುಂತಾದ ಕಡೆ ತೆರಳುತ್ತಿದ್ದಾರೆ.‌

ಚಿತ್ರತಂಡ ಹೀಗಿದೆ..ನಿರ್ದೇಶಕ ಶ್ರೀನಿ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಂಭಾಷಣೆ ಮಾಸ್ತಿ ಹಾಗೂ ಪ್ರಸನ್ನ ಅವರದ್ದು. ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಮತ್ತು ಮಹೇಂದ್ರ ಸಿಂಹ ಛಾಯಾಗ್ರಹಣವಿದೆ. ಐದು ಸಾಹಸ ಸನ್ನಿವೇಶಗಳು ಸಿನಿಮಾದಲ್ಲಿದೆ. ಶಿವರಾಜ​ಕುಮಾರ್, ಅನುಪಮ್ ಖೇರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿನಿಮಾ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಅಕ್ಟೋಬರ್ 19ರಂದು ವಿಶ್ವಾದ್ಯಂತ ತೆರೆ ಕಾಣುತ್ತಿದೆ. ಟೀಸರ್ ನಿಂದಲೇ ಕ್ರೇಜ್ ಹುಟ್ಟಿಸಿರುವ ಘೋಸ್ಟ್ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಹೇಗೆ ಕಾಣ್ತಾರೆ? ಅನ್ನೋದು ಅಭಿಮಾನಿಗಳಲ್ಲಿ ಕೌತುಕ ಮೂಡಿಸಿದೆ.

ಇದನ್ನೂ ಓದಿ:ಬಿಡುಗಡೆಗೂ ಮುನ್ನವೇ 'ಘೋಸ್ಟ್' ಕೋಟಿ ಕೋಟಿ ವ್ಯವಹಾರ: ಹ್ಯಾಟ್ರಿಕ್ ಹೀರೋ‌ ಸಿನಿಮಾ ಬಗ್ಗೆ ಭಾರಿ ಕುತೂಹಲ!

ABOUT THE AUTHOR

...view details