ಕರ್ನಾಟಕ

karnataka

ETV Bharat / entertainment

ಪವಿತ್ರ ರಿಷ್ತಾ ನಟಿ ಅಂಕಿತಾ ಲೋಖಂಡೆ ತಂದೆ ಶಶಿಕಾಂತ್​ ವಿಧಿವಶ: ಕಂಬನಿ ಮಿಡಿದ ಗಣ್ಯರು - ಅಂಕಿತಾ ಲೋಖಂಡೆ ತಂದೆ ನಿಧನ

Ankita Lokhande father last rites: ಪವಿತ್ರ ರಿಷ್ತಾ ಖ್ಯಾತಿಯ ನಟಿ ಅಂಕಿತಾ ಲೋಖಂಡೆ ಅವರ ತಂದೆ ಶಶಿಕಾಂತ್​ ಲೋಖಂಡೆ ವಿಧಿವಶರಾಗಿದ್ದಾರೆ.

ankita lokhande father Shashikant
ನಟಿ ಅಂಕಿತಾ ಲೋಖಂಡೆ ತಂದೆ ಶಶಿಕಾಂತ್​ ವಿಧಿವಶ

By

Published : Aug 13, 2023, 2:15 PM IST

ಜನಪ್ರಿಯ ನಟಿ ಅಂಕಿತಾ ಲೋಖಂಡೆ ಅವರ ತಂದೆ ಶಶಿಕಾಂತ್​ ಲೋಖಂಡೆ ಅವರು ಶನಿವಾರದಂದು (ಆಗಸ್ಟ್ 12) ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು. ನಟಿ ಅಂಕಿತಾ ಲೋಖಂಡೆ ಅವರ ಸಿನಿ ಸ್ನೇಹಿತರು, ಹಿತೈಷಿಗಳು ಸೇರಿದಂತೆ ಅಭಿಮಾನಿಗಳು ಲೋಖಂಡೆ ಕುಟುಂಬದ ದುಃಖವನ್ನು ಹಂಚಿಕೊಂಡಿದ್ದಾರೆ. ಅಂಕಿತಾರ ತಂದೆಯ ನಿಧನದ ಸುದ್ದಿ ಕೇಳಿದ ಸಹನಟರು, ಚಿತ್ರರಂಗದವರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ವಯೋಸಹಜ ಅನಾರೋಗ್ಯ ಹಿನ್ನೆಲೆ ಕೊನೆಯುಸಿರು: ಶಶಿಕಾಂತ್​ ಲೋಖಂಡೆ ಅವರು ತಮ್ಮ ಮುದ್ದು ಮಗಳು ಅಂಕಿತಾರ ಸಿನಿ ಪಯಣಕ್ಕೆ ನೀಡಿದ ಕೊಡುಗೆ ಮಹತ್ವದ್ದು. ಅವರು ನಟಿಯ ಶಕ್ತಿಯ ಆಧಾರ ಸ್ತಂಭವಾಗಿ ಗುರುತಿಸಿಕೊಂಡಿದ್ದರು. ಶಶಿಕಾಂತ್​ ಲೋಖಂಡೆ ಮರಣದ ನಿಖರ ಕಾರಣಗಳು ಸೀಮಿತವಾಗಿವೆ. ವಯೋಸಹಜ ಅನಾರೋಗ್ಯ ಹಿನ್ನೆಲೆ ಕೊನೆಯುಸಿರೆಳೆದಿದ್ದಾರೆಂದು ವರದಿಯಾಗಿದೆ.

ಓಶಿವಾರ ಸ್ಮಶಾನದಲ್ಲಿ ಶಶಿಕಾಂತ್​ ಲೋಖಂಡೆ ಅಂತ್ಯಕ್ರಿಯೆ:ಇಂದು (ಆಗಸ್ಟ್ 13, 2023) ಬೆಳಗ್ಗೆ 11 ಗಂಟೆ ಹೊತ್ತಿಗೆ ಓಶಿವಾರ ಸ್ಮಶಾನದಲ್ಲಿ ಶಶಿಕಾಂತ್​ ಲೋಖಂಡೆ ಅವರ ಅಂತ್ಯಕ್ರಿಯೆ ವಿಧಿವಿಧಾನಗಳೊಂದಿಗೆ ನೆರವೇರಿತು. ಕುಟುಂಬಸ್ಥರು, ಆಪ್ತರು, ಅಭಿಮಾನಿಗಳಿಗೆ ಅಂತಿಮ ನಮನ ಸಲ್ಲಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು.

ಅಂತಿಮ ನಮನ ಸಲ್ಲಿಸಿದ ಸಿನಿ ಸ್ನೇಹಿತರು:ಜನಪ್ರಿಯ ಧಾರಾವಾಹಿ ಪವಿತ್ರ ರಿಷ್ತಾದಲ್ಲಿನ ಅರ್ಚನಾ ಪಾತ್ರಕ್ಕೆ ಮೆಚ್ಚುಗೆ ಸ್ವೀಕರಿಸಿರುವ ನಟಿ ಅಂಕಿತಾ ಲೋಖಂಡೆ ತಂದೆ ನಿಧನದ ಕುರಿತು ಇನ್ನೂ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡಿಲ್ಲ. ಈ ಕಠಿಣ ಸಂದರ್ಭದಲ್ಲಿ ನಟಿಯ ಸ್ಥಿತಿಯನ್ನು ಅಭಿಮಾನಿಗಳು ಅರ್ಥ ಮಾಡಿಕೊಂಡಿದ್ದಾರೆ. ಪತಿ ವಿಕ್ಕಿ ಜೈನ್ ಅಂಕಿತಾರ ದುಃಖ ಹಂಚಿಕೊಂಡಿದ್ದಾರೆ. ಇನ್ನು ಕುಟುಂಬಸ್ಥರು, ಸ್ನೇಹಿತರನ್ನು ಹೊರತುಪಡಿಸಿ ನಿರ್ಮಾಪಕ ಸಂದೀಪ್​ ಸಿಂಗ್​​, ಶ್ರದ್ಧಾ ಆರ್ಯ, ಕುಶಾಲ್​ ಟಂಡನ್​ ಸೇರಿದಂತೆ ಕಿರುತೆರೆ, ಹಿರಿತೆರೆ ಗಣ್ಯರು ಅಂತಿಮ ನಮನ ಸಲ್ಲಿಸಲು ಆಗಮಿಸಿದ್ದರು.

ಹೃದಯಸ್ಪರ್ಶಿ ಬರಹದ ಮೂಲಕ ತಂದೆಗೆ ಗೌರವ: ಇತ್ತೀಚೆಗೆ ಫಾದರ್ಸ್ ಡೇ ಅಂದು ನಟಿ ಅಂಕಿತಾ ಲೋಖಂಡೆ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ತಂದೆಗೆ ವಿಶೇಷ ಬರಹದ ಮೂಲಕ ಗೌರವ ಸಲ್ಲಿಸಿದ್ದರು. ಹೃದಯಸ್ಪರ್ಶಿ ಬರಹದಲ್ಲಿ ತಂದೆಯ ಅಚಲ ಬೆಂಬಲ, ತ್ಯಾಗಕ್ಕೆ ಕೃತಘ್ಞತೆ ಸಲ್ಲಿಸಿದ್ದರು. ಆದ್ರಿಂದು ತಂದೆ ಪಂಚಭೂತಗಳಲ್ಲಿ ಲೀನರಾಗಿದ್ದು, ನಟಿ ಕಣ್ಣೀರಲ್ಲಿ ಮುಳುಗಿದ್ದಾರೆ.

ಇದನ್ನೂ ಓದಿ:ತೆರೆಕಂಡ ಎರಡೇ ದಿನದಲ್ಲಿ 83 ಕೋಟಿ ರೂ. ಸಂಪಾದಿಸಿದ ಗದರ್ 2: ಓಎಂಜಿ 2 ಕಲೆಕ್ಷನ್​?

ಏಕ್ತಾ ಕಪೂರ್​ ಅವರ ಪವಿತ್ರ ರಿಷ್ತಾದಲ್ಲಿ ನಟಿ ಅಂಕಿತಾ ಲೋಖಂಡೆ ಕಾಣಿಸಿಕೊಂಡಿದ್ದರು. ಅರ್ಚನಾ ಪಾತ್ರ ನಿರ್ವಹಿಸಿದ್ದು, ದಿ. ನಟ ಸುಶಾಂತ್​ ಸಿಂಗ್​ ರಜಪೂತ್​​ ಅವರಿಗೆ ಜೋಡಿಯಾಗಿದ್ದರು. ವಿವಾಹಿತ ಜೋಡಿಯ ಸುತ್ತ ಕಥೆ ಹೆಣೆಯಲಾಗಿದ್ದು, ಈ ಇಬ್ಬರಿಗೂ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತು. ಪವಿತ್ರ ರಿಷ್ತಾ ಜನರ ಮನೆ ಮಾತಾಗಿತ್ತು. ಈಗಲೂ ಪವಿತ್ರ ರಿಷ್ತಾ ತನ್ನ ಜನಪ್ರಿಯತೆ ಉಳಿಸಿಕೊಂಡಿದೆ.

ಇದನ್ನೂ ಓದಿ:Actor Rajinikanth: ಭಾರತದಲ್ಲಿ ಜೈಲರ್​ ಅಬ್ಬರ.. ಆಧ್ಯಾತ್ಮಿಕ ಪ್ರವಾಸದಲ್ಲಿ ರಜನಿಕಾಂತ್​ - ಬದ್ರಿನಾಥ್ ದೇವಸ್ಥಾನದಲ್ಲಿ ವಿಶೇಷ ಪೂಜೆ

ABOUT THE AUTHOR

...view details