ಎರಡು ಬಹುನಿರೀಕ್ಷಿತ ಬಾಲಿವುಡ್ ಸಿನಿಮಾಗಳು ಒಂದೇ ದಿನ ತೆರೆಗಪ್ಪಳಿಸಿ, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿದೆ. ರಶ್ಮಿಕಾ ಮಂದಣ್ಣ - ರಣ್ಬೀರ್ ಕಪೂರ್ ಅಭಿನಯದ ಅನಿಮಲ್ ಮತ್ತು ವಿಕ್ಕಿ ಕೌಶಲ್ ಮುಕ್ಯಭೂಮಿಕೆಯ ಸ್ಯಾಮ್ ಬಹದ್ದೂರ್ ಚಿತ್ರಗಳು ಶುಕ್ರವಾರದಂದು ತೆರೆಗಪ್ಪಳಿಸಿ, ಬಾಕ್ಸ್ ಆಫೀಸ್‌ನಲ್ಲಿ ಮುಖಾಮುಖಿಯಾಗಿದೆ.
ಎರಡೂ ಚಿತ್ರಗಳು ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ಅನಿಮಲ್ ಸಿನಿಮಾ ದೊಡ್ಡ ಸಂಖ್ಯೆಯೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಆರಂಭಿಸಿದೆ. ಹಿಂದಿ ಆವೃತ್ತಿಯಲ್ಲಿ ಮಾತ್ರ ಲಭ್ಯವಿರುವ ಸ್ಯಾಮ್ ಬಹದ್ದೂರ್ ಕೂಡ ಉತ್ತಮ ಅಂಕಿ ಅಂಶಗಳನ್ನು ಹೊಂದಿದೆ. ಆದ್ರೆ ಎರಡೂ ಚಿತ್ರಗಳು ಎರಡನೇ ದಿನ ಕೊಂಚ ಕುಸಿತ ಕಾಣಲಿದೆ ಎಂದು ಸಿನಿಮೋದ್ಯಮದ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ತಿಳಿಸಿದೆ.
ಅನಿಮಲ್ ಕಲೆಕ್ಷನ್: ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಒಂದು ಕಂಪ್ಲೀಟ್ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾವಾಗಿದ್ದು, ತೆರೆಕಂಡ ಮೊದಲ ದಿನ ಭಾರತದಲ್ಲಿ 61 ಕೋಟಿ ರೂಪಾಯಿ ಗಳಿಸಸಿದೆ. ಅದಾಗ್ಯೂ, ಎರಡನೇ ದಿನ ಸಂಗ್ರಹಣೆಯಲ್ಲಿ ಕುಸಿತ ಸಾಧ್ಯತೆ ಇದೆ. ವಾರಾಂತ್ಯದ ದಿನಗಳಲ್ಲಿ ಸಿನಿಮಾ ಗಳಿಕೆ ಉತ್ತಮವಾಗಿರುತ್ತದೆ. ಆದ್ರೆ ಈ ಸಿನಿಮಾ ಮಾತ್ರ ಕೊಂಚ ಕುಸಿತ ಕಾಣಲಿದೆ ಎಂದು ಅಂದಾಜಿಸಲಾಗಿದೆ. ಎರಡಂಕಿಯ ಕಲೆಕ್ಷನ್ ಇರಲಿದೆ ಎಂದು ಆರಂಭಿಕ ಅಂದಾಜುಗಳು ಸುಳಿವು ನೀಡಿದೆ. ಆದಾಗ್ಯೂ, ಮೊದಲ ದಿನದ ಕಲೆಕ್ಷನ್ಗೆ ಹೋಲಿಸಿದರೆ ಕೊಂಚ ಕಡಿಮೆ ಆಗಲಿದೆ (9.46 ಕೋಟಿ ರೂ. ಇಳಿಕೆ ಸಾಧ್ಯತೆ). ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡಿರುವ ಅನಿಮಲ್ ಚಿತ್ರದಲ್ಲಿ ರಣ್ಬೀರ್ ಕಪೂರ್ ನಾಯಕನಾಗಿ ನಟಿಸಿದ್ದು, ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಾಬಿ ಡಿಯೋಲ್ ಎದುರಾಳಿ ಪಾತ್ರ ನಿರ್ವಹಿಸಿದ್ದು, ಅನಿಲ್ ಕಪೂರ್ ನಾಯಕ ರಣ್ಬೀರ್ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ.