ಕರ್ನಾಟಕ

karnataka

ETV Bharat / entertainment

Animal: ಹೊಸ ಪೋಸ್ಟರ್​ನೊಂದಿಗೆ 'ಅನಿಮಲ್​' ಟೀಸರ್​ ಡೇಟ್​ ಅನೌನ್ಸ್ - Animal teaser date

Animal teaser date announced: ಇಂದು 'ಅನಿಮಲ್​' ಚಿತ್ರದ ಹೊಸ ಪೋಸ್ಟರ್​ ಅನಾವರಣದೊಂದಿಗೆ ಟೀಸರ್​ ರಿಲೀಸ್​ ಡೇಟ್​ ಕೂಡ ಅನೌನ್ಸ್​ ಆಗಿದೆ.

Animal
Animal: ಹೊಸ ಪೋಸ್ಟರ್​ನೊಂದಿಗೆ 'ಅನಿಮಲ್​' ಟೀಸರ್​ ಡೇಟ್​ ಅನೌನ್ಸ್

By ETV Bharat Karnataka Team

Published : Sep 18, 2023, 5:49 PM IST

2023ರ ಬಹುನಿರೀಕ್ಷಿತ ಸಿನಿಮಾ 'ಅನಿಮಲ್​'. ಕಬೀರ್​ ಸಿಂಗ್​ ಖ್ಯಾತಿಯ ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ ಆಕ್ಷನ್​ ಕಟ್ ಹೇಳಿರುವ ಈ ಚಿತ್ರದಲ್ಲಿ ಬಾಲಿವುಡ್​ ಬಹುಬೇಡಿಕೆ ನಟ ರಣ್​ಬೀರ್​ ಕಪೂರ್​ ಮತ್ತು ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಸ್ಕ್ರೀನ್​ ಶೇರ್​ ಮಾಡಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್​ ಕೂಡ ಮುಕ್ತಾಯವಾಗಿದ್ದು, ಬಿಡುಗಡೆಗೆ ಸಜ್ಜಾಗಿದೆ. ಇಂದು ಚಿತ್ರದ ಹೊಸ ಪೋಸ್ಟರ್​ ಅನಾವರಣದೊಂದಿಗೆ ಟೀಸರ್​ ರಿಲೀಸ್​ ಡೇಟ್​ ಕೂಡ ಅನೌನ್ಸ್​ ಆಗಿದೆ.

ಪೋಸ್ಟರ್​ ಜೊತೆ ಟೀಸರ್​ ಡೇಟ್​ ಅನೌನ್ಸ್​: ಸೆಪ್ಟೆಂಬರ್​ 28 ರಂದು 'ಅನಿಮಲ್​' ಟೀಸರ್​ ಬಿಡುಗಡೆಯಾಗಲಿದೆ ಎಂದು ತಯಾರಕರು ಘೋಷಿಸಿದ್ದಾರೆ. ಟೀಸರ್​ ಬಿಡುಗಡೆ ದಿನಾಂಕವನ್ನು ಘೋಷಿಸಲು ನಟ ಬಾಬಿ ಡಿಯೋಲ್​ ಇನ್​ಸ್ಟಾಗ್ರಾಮ್​ ವೇದಿಕೆಯನ್ನು ಬಳಸಿಕೊಂಡರು. "ಅವನು ಸೊಗಸುಗಾರ. ಅವನು ವೈಲ್ಡ್​. ಅವನ ರೂಪವನ್ನು ನೀವು ಸೆಪ್ಟೆಂಬರ್​ 28 ರಂದು ನೋಡುತ್ತೀರಿ. #AnimalTeaserOn28thSept @AnimalTheFilm #AnimalOn1stDec" ಎಂದು ಪೋಸ್ಟ್​ಗೆ ಕ್ಯಾಪ್ಶನ್​ ನೀಡಿದ್ದಾರೆ.

ಹೊಸ ಪೋಸ್ಟರ್​ನಲ್ಲಿ ರಣ್​ಬೀರ್​ ಕಪೂರ್​ ಅವರು ಸಿಗರೇಟ್​ ಸೇದುತ್ತಿರುವಂತೆ ಮತ್ತು ಕೈಯಲ್ಲಿ ಲೈಟರ್​ ಹಿಡಿದಿರುವಂತೆ ತೋರಿಸಲಾಗಿದೆ. ಅವರ ಉದ್ದನೆಯ ಕೂದಲು ಮತ್ತು ಬ್ಲ್ಯಾಕ್​ ಸನ್ಗ್ಲಾಸ್​​ ಜೊತೆ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಚಿತ್ರ ನಿರ್ಮಾಪಕರು ಪ್ರೀ ಟೀಸರ್​ ಅನ್ನು ಅನಾವರಣಗೊಳಿಸಿದ್ದರು.

ಇದನ್ನೂ ಓದಿ:ರಶ್ಮಿಕಾ, ರಣಬೀರ್​ ಅಭಿನಯದ 'ಅನಿಮಲ್​' ಶೂಟಿಂಗ್​ ಕಂಪ್ಲೀಟ್; ಅಭಿಮಾನಿಗಳಲ್ಲಿ ಗರಿಗೆದರಿದ ನಿರೀಕ್ಷೆ​

'ಅನಿಮಲ್' ಸಿನಿಮಾ ಡಿಸೆಂಬರ್​ 1 ರಂದು ಚಿತ್ರಮಂದಿರಗಳಲ್ಲಿ ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಸೇರಿ ಐದು ಭಾಷೆಗಳಲ್ಲಿ ದೇಶಾದ್ಯಂತ ಅದ್ಧೂರಿಯಾಗಿ ತೆರೆ ಕಾಣಲಿದೆ. ರಣ್​ಬೀರ್​, ರಶ್ಮಿಕಾ ಅಲ್ಲದೇ ಅನಿಲ್ ಕಪೂರ್, ಬಾಬಿ ಡಿಯೋಲ್ ಸಹ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿಮಲ್ ಚಿತ್ರಕ್ಕೆ ಭೂಷಣ್ ಕುಮಾರ್, ಕ್ರಿಶನ್ ಕುಮಾರ್ ಅವರ ಟಿ ಸೀರೀಸ್, ಮುರಾದ್ ಖೇತಾನಿಯ ಸಿನಿ1 ಸ್ಟುಡಿಯೋಸ್, ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ ಬಂಡವಾಳ ಹೂಡಿದೆ.

ರಣ್​​​ಬೀರ್​ ಇತ್ತೀಚೆಗೆ ನಟಿ ಶ್ರದ್ಧಾ ಕಪೂರ್ ಜೊತೆಗೆ 'ತು ಜೂಟಿ ಮೆ ಮಕ್ಕರ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಲವ್ ರಂಜನ್ ನಿರ್ದೇಶನದ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಕ್ಸ್​ ಆಫೀಸ್​ನಲ್ಲಿ ಸಖತ್​ ಸದ್ದು ಮಾಡಿದೆ. 'ತು ಜೂಟಿ ಮೆ ಮಕ್ಕರ್'ಗೂ ಮುನ್ನ ಬಂದ ಬ್ರಹ್ಮಾಸ್ತ್ರ ಕೂಡ ಯಶಸ್ವಿ ಆಗಿತ್ತು. ರಶ್ಮಿಕಾ ಮಂದಣ್ಣ 'ಪುಷ್ಪ 2' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2024ರ ಆಗಸ್ಟ್​ 15 ರಂದು ಅಂದರೆ ಸ್ವಾತಂತ್ರ್ಯ ದಿನಾಚರಣೆಯಂದು ಚಿತ್ರ ತೆರೆ ಕಾಣಲಿದೆ.

ಇದನ್ನೂ ಓದಿ:Animal: ರಗಡ್​ ಲುಕ್​ನಲ್ಲಿ ರಣ್​ಬೀರ್​ ಕಪೂರ್​ - ಅನಿಮಲ್​​ ಸೆಟ್​ನಿಂದ ನಟನ ಫೋಟೋ ವೈರಲ್​​

ABOUT THE AUTHOR

...view details