ಹೈದರಾಬಾದ್:'ಕಬೀರ್ ಸಿಂಗ್' ನಂತರ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಇತ್ತೀಚಿನ ಚಿತ್ರವೇ 'ಅನಿಮಲ್'. ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿರುವ ಚಿತ್ರ ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈಗಾಗಲೇ ಪ್ರೀಮಿಯರ್ ನೋಡಿದ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿಕ್ರಿಯೆ: ಅನಿಮಲ್ ನೋಡಿದ ಕೆಲವು ಪ್ರೇಕ್ಷಕರು, ಗೂಸ್ಬಂಪ್ಸ್ ಗ್ಯಾರಂಟಿ ಎನ್ನುತ್ತಿದ್ದಾರೆ. ರಣಬೀರ್ ಕಪೂರ್ ನಟನೆ ಈ ಸಿನಿಮಾಗೆ ಪ್ಲಸ್ ಪಾಯಿಂಟ್ ಆಗಿದೆ ಅನ್ನೋದು ಅವರ ಮಾತು. ಇನ್ನು ಕೆಲವರು, ನಿರ್ದೇಶನ ಚೆನ್ನಾಗಿದೆ. ಹಿನ್ನೆಲೆ ಸಂಗೀತ ಚಿತ್ರದ ಹೈಲೈಟ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದು ಕೇವಲ ಮನರಂಜನೆ ಮಾತ್ರವಲ್ಲ, ಎಲ್ಲರನ್ನೂ ಮೆಚ್ಚಿಸುವ ಹಲವು ಅಂಶಗಳನ್ನು ಒಳಗೊಂಡಿದೆ ಎಂದು ನೆಟಿಜನ್‌ವೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದು ಮಾಸ್ಟರ್ ಪೀಸ್ ಸಿನಿಮಾ. ಬಂಧಗಳ ಮಹತ್ವ ಆಧರಿಸಿದ ಸಿನಿಮಾಗಳಲ್ಲಿ ಇದೊಂದು ಲ್ಯಾಂಡ್ ಮಾರ್ಕ್. ಸಿನಿಮಾ 3.21 ಗಂಟೆ ಇದೆ ಎಂದು ಪ್ರಶ್ನಿಸುವ ಪ್ರೇಕ್ಷಕರಿಗೆ, ಎಲ್ಲದಕ್ಕೂ ಇಲ್ಲಿ ಉತ್ತರವಿದೆ ಎಂಬುದು ಮತ್ತೊಬ್ಬರು ಮಾತು.
'ಅನಿಮಲ್' ಸಿನಿಮಾ: ಅಪ್ಪ-ಮಗನ ಸೆಂಟಿಮೆಂಟ್ನಲ್ಲಿ ಮೂಡಿಬಂದಿರುವ ಸಿನಿಮಾದಲ್ಲಿ ಅನಿಲ್ ಕಪೂರ್ ತಂದೆಯ ಪಾತ್ರ ಮಾಡಿದ್ದಾರೆ. ಧರ್ಮೇಂದ್ರ ಅವರ ಮಗ ಬಾಬಿ ಡಿಯೋಲ್ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಸಂಗೀತ ಪ್ರೇಮಿಗಳನ್ನು ಆಕರ್ಷಿಸಿವೆ. ಇದಲ್ಲದೇ ರಣಬೀರ್ ವಿಭಿನ್ನ ಶೇಡ್‌ಗಳು ಕೂಡ ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ಆಸಕ್ತಿ ಹೆಚ್ಚಿಸುತ್ತಿದೆ. ಚಿತ್ರವನ್ನು ಭದ್ರಕಾಳಿ ಪಿಕ್ಚರ್ಸ್ ಮತ್ತು ಸಿರೀಸ್ ಜಂಟಿಯಾಗಿ ನಿರ್ಮಿಸಿದೆ.
ಇದನ್ನೂ ಓದಿ:ಅನಿಮಲ್ vs ಸ್ಯಾಮ್ ಬಹದ್ದೂರ್: ರಣ್ಬೀರ್ ರಶ್ಮಿಕಾ ಸಿನಿಮಾ 100 ಕೋಟಿ ಕಲೆಕ್ಷನ್ ಸಾಧ್ಯತೆ!
ಬೆಂಗಳೂರಿಗೆ ಆಗಮಿಸಿದ್ದ ಚಿತ್ರತಂಡ: ಅನಿಮಲ್ ಪ್ರಮೋಶನ್ ಸಲುವಾಗಿ ರಣ್ಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಸಂದೀಪ್ ರೆಡ್ಡಿ ವಂಗಾ ಹಾಗೂ ಬಾಬಿ ಡಿಯೋಲ್ ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದರು. ಆಗ ಬೆಂಗಳೂರಿನಲ್ಲಿ ಅನಿಮಲ್ ಪ್ರಚಾರದ ವಿಡಿಯೋ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದ್ದವು. ಟ್ರೇಲರ್ನಿಂದಲೇ ಕುತೂಹಲ ಹುಟ್ಟಿಸಿರುವ ಅನಿಮಲ್ ಅನ್ನು ಕನ್ನಡದ ಖ್ಯಾತ ಕೆ.ವಿ.ಎನ್ ಸಂಸ್ಥೆ ಕರ್ನಾಟಕದಲ್ಲಿ ಬಿಡುಗಡೆ ಮಾಡುತ್ತಿದೆ.