ಬಾಲಿವುಡ್ ನಟ ರಣ್‌ಬೀರ್ ಕಪೂರ್ ಅವರ ಕೊನೆಯ ಚಿತ್ರ ಬ್ರಹ್ಮಾಸ್ತ್ರ ಸೂಪರ್ ಹಿಟ್ ಆಗಿತ್ತು. 2022ರಲ್ಲಿ ಭರ್ಜರಿ ಗೆಲುವು ಕಂಡಿರುವ ಅವರು ಹೊಸ ವರ್ಷವನ್ನು ಹೊಸ ಭರವಸೆಯೊಂದಿಗೆ ಶುರು ಮಾಡುತ್ತಿದ್ದಾರೆ. ಅವರ ಮುಂದಿನ ಚಿತ್ರ ಅನಿಮಲ್ ಫಸ್ಟ್ ಲುಕ್ ರಿಲೀಸ್ ಅಗಿದ್ದು, ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ರಣ್‌ಬೀರ್ ಕಪೂರ್ ಫಸ್ಟ್ ಲುಕ್:ಅನಿಮಲ್ ಚಿತ್ರ ತಯಾರಕರು ಹೊಸ ವರ್ಷದಂದು ರಣ್‌ಬೀರ್ ಕಪೂರ್ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ಈ ಚಿತ್ರವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ. ಇವರು 2019ರ ಬ್ಲಾಕ್‌ಬಸ್ಟರ್ ಕಬೀರ್ ಸಿಂಗ್ ಮೂಲಕ ಬಾಲಿವುಡ್‌ನಲ್ಲಿ ನಿರ್ದೇಶಕರಾಗಿ ಎಂಟ್ರಿ ಕೊಟ್ಟವರು. ಈ ಚಿತ್ರ ಅವರ 2017ರ ತೆಲುಗು ಹಿಟ್ ಮೂವಿ ಅರ್ಜುನ್ ರೆಡ್ಡಿಯ ರಿಮೇಕ್ ಆಗಿದೆ.
ರಗಡ್ ಲುಕ್‌ನಲ್ಲಿ ರಣ್‌ಬೀರ್ ಕಪೂರ್: ಅನಿಮಲ್ ಸಿನಿಮಾನ್ನು ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್ ಅವರ ಟಿ-ಸೀರೀಸ್, ಮುರಾದ್ ಖೇತಾನಿಯ ಸಿನಿ1 ಸ್ಟುಡಿಯೋಸ್ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಿನ್ನೆ ಮಧ್ಯರಾತ್ರಿ ಚಿತ್ರ ತಯಾರಕರು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮಗಳಲ್ಲಿ ಫಸ್ಟ್ ಲುಕ್ ಅನಾವರಣಗೊಳಿಸಿದ್ದಾರೆ. ರಗಡ್ ಲುಕ್‌ನಲ್ಲಿ ರಣ್‌ಬೀರ್, ಕೊಡಲಿಯನ್ನು ಹಿಡಿದುಕೊಂಡು ಸಿಗರೇಟ್ ಹಚ್ಚುತ್ತಿರುವುದನ್ನು ಕಾಣಬಹುದು.
'ಪ್ರೇಕ್ಷಕರಿಗೆ ಚಿತ್ರದ, ನಾಯಕನ ಮೊದಲ ನೋಟವನ್ನು ಅನಾವರಣಗೊಳಿಸಲು ನಾವು ಸಂತೋಷಪಡುತ್ತೇವೆ. ಪೋಸ್ಟರ್‌ನಲ್ಲಿರುವ ರಣ್‌ಬೀರ್ ಕಪೂರ್ ಅವರ ನೋಟವು ಚಿತ್ರದ ಸಾರವನ್ನು ಚೆನ್ನಾಗಿ ಸಮರ್ಥಿಸುತ್ತದೆ. ಪ್ರೇಕ್ಷಕರು ಅರ್ಹವಾದ ಚಿತ್ರವನ್ನು ವೀಕ್ಷಿಸುತ್ತಾರೆ ಎಂಬ ವಿಶ್ವಾಸ ನಮಗಿದೆ' ಎಂದು ನಿರ್ಮಾಪಕರುಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.