ಕರ್ನಾಟಕ

karnataka

ETV Bharat / entertainment

'ಈಶ್ವರ್'​ ಸಿನಿಮಾಗೆ 34ರ ಸಂಭ್ರಮ: ನಿರ್ದೇಶಕ ಕೆ.ವಿಶ್ವನಾಥ್ ನೆನಪಿಸಿಕೊಂಡ ನಟ ಅನಿಲ್ ​ಕಪೂರ್​ - etv bharat kannada

ಈಶ್ವರ್​ ಸಿನಿಮಾಗೆ 34 ವರ್ಷದ ಸಂಭ್ರಮ - ಖ್ಯಾತ ನಿರ್ದೇಶಕ ದಿವಂಗತ ಕೆ ವಿಶ್ವನಾಥ್ ನೆನಪಿಸಿಕೊಂಡ ನಟ ಅನಿಲ್ ​ಕಪೂರ್​

eeshwar turns 34
ನಿರ್ದೇಶಕ ಕೆ.ವಿಶ್ವನಾಥ್ ನೆನಪಿಸಿಕೊಂಡ ನಟ ಅನಿಲ್ ​ಕಪೂರ್​

By

Published : Feb 25, 2023, 9:07 AM IST

ಬಾಲಿವುಡ್​ ನಟ ಅನಿಲ್​ ಕಪೂರ್​ ಅವರ 'ಈಶ್ವರ್'​ ಸಿನಿಮಾವು 34 ವರ್ಷಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಅನಿಲ್​ ಕಪೂರ್​ ಅವರು ಖ್ಯಾತ ನಿರ್ದೇಶಕ ದಿವಂಗತ ಕಾಸಿನಾಧುನಿ ವಿಶ್ವನಾಥ್​ ಅವರನ್ನು ಸ್ಮರಿಸಿಕೊಂಡಿದ್ದಾರೆ. ತಮ್ಮ ನಟನಾ ವೃತ್ತಿಯನ್ನು ಗಟ್ಟಿಗೊಳಿಸಲು ಕಾರಣಕರ್ತರಾದ ಅತ್ಯುತ್ತಮ ನಿರ್ದೇಶಕರಲ್ಲಿ ವಿಶ್ವನಾಥ್​ ಒಬ್ಬರು ಎಂದು ಬಣ್ಣಿಸಿದ್ದಾರೆ. ಈ ಬಗ್ಗೆ ಅನಿಲ್​ ಕಪೂರ್​ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ ಹಂಚಿಕೊಂಡಿದ್ದು, ಹೃದಯಸ್ಪರ್ಶಿ ಮಾತುಗಳನ್ನು ಬರೆದುಕೊಂಡಿದ್ದಾರೆ.

ನಿರ್ದೇಶಕ ಕೆ.ವಿಶ್ವನಾಥ್ ನೆನಪಿಸಿಕೊಂಡ ನಟ ಅನಿಲ್ ​ಕಪೂರ್​

ಈಶ್ವರ್​ ಸಿನಿಮಾದ ದೃಶ್ಯಗಳು ಮತ್ತು ವಿಶ್ವನಾಥ್​ ಅವರೊಂದಿಗಿರುವ ಫೋಟೋವನ್ನು ಪೋಸ್ಟ್​ ಮಾಡಿಕೊಂಡಿರುವ ಅನಿಲ್​ ಕಪೂರ್​, " ಈಶ್ವರ್​ ಸಿನಿಮಾ 34 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆ ಕೆ ವಿಶ್ವನಾಥ್​ ಜಿ ಅವರನ್ನು ಸ್ಮರಿಸುತ್ತಿದ್ದೇನೆ. ಅವರು ನನ್ನ ಸಿನಿ ವೃತ್ತಿಜೀವನವನ್ನು ರೂಪಿಸಿದವರಲ್ಲಿ ಒಬ್ಬರು. ನಾನು ಅವರಿಂದ ಬಹಳಷ್ಟು ಕಲಿತಿದ್ದೇನೆ. ನಿಜವಾಗಿಯೂ ಆ ಕಾಲದ ಶ್ರೇಷ್ಠರಲ್ಲಿ ಅವರೂ ಒಬ್ಬರು" ಎಂದು ಹೇಳಿಕೊಂಡಿದ್ದಾರೆ.

1989ರ ಬಾಲಿವುಡ್​ ಚಿತ್ರ 'ಈಶ್ವರ್​': ಈಶ್ವರ್​ 1989ರ ಬಾಲಿವುಡ್​ ಚಲನಚಿತ್ರವಾಗಿದ್ದು, ಕೆ. ವಿಶ್ವನಾಥ್​ ಬರೆದು ನಿರ್ದೇಶಿಸಿದ್ದಾರೆ. ನಾಯಕನಾಗಿ ಅನಿಲ್​ ಕಪೂರ್​ ಮತ್ತು ನಾಯಕಿಯಾಗಿ ಸೌತ್​ ಸ್ಟಾರ್​ ವಿಜಯಶಾಂತಿ ಅಭಿನಯಿಸಿದ್ದಾರೆ. ಈ ಚಿತ್ರವು ತೆಲುಗಿನ ಕಲ್ಟ್​ ಕ್ಲಾಸಿಕ್​ ಸ್ವಾತಿ ಮುತ್ಯಂನ ರಿಮೇಕ್​ ಆಗಿದ್ದು, ಇದರಲ್ಲಿ ಹಿರಿಯ ನಟ ಕಮಲ್​ ಹಾಸನ್​ ಕಾಣಿಸಿಕೊಂಡಿದ್ದಾರೆ. ಚಿತ್ರವು ಪ್ರೀತಿ ಮತ್ತು ಸಂತೋಷವನ್ನು ಎಲ್ಲೆಡೆ ಹರಡುವ ಈಶ್ವರ್​ ಕಥೆಯ ಸುತ್ತ ಸುತ್ತುತ್ತದೆ. ಅವನು ಒಬ್ಬ ಮಗನಿರುವ ವಿಧವೆ ಲಲಿತಾಳನ್ನು ಮದುವೆಯಾಗುತ್ತಾನೆ.

ಇದನ್ನೂ ಓದಿ:'ಪ್ಯಾರ್ ತೋ ಹೋನಾ ಹಿ ಥಾ, ಪ್ಯಾರ್ ತೋ ಹೈ': ಕಾಜೋಲ್‌ - ಅಜಯ್ 24ನೇ ವಿವಾಹ ವಾರ್ಷಿಕೋತ್ಸವ

ಖ್ಯಾತ ನಿರ್ದೇಶಕರು ಕೆ. ವಿಶ್ವನಾಥ್​: ಕೆ. ವಿಶ್ವನಾಥ್​ ಅವರು ಅನೇಕ ಕಥೆಗಳನ್ನು ಬರೆದು ನಿರ್ದೇಶಿಸಿದ್ದಾರೆ. ಇವರ ಚಿತ್ರಗಳು ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಗಿಟ್ಟಿಸಿಕೊಂಡಿದೆ. ಈಶ್ವರ್​ ಚಿತ್ರವು ಅತ್ಯುತ್ತಮ ಕಥೆಗಾಗಿ ಫಿಲ್ಮ್​ ಫೇರ್​ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅವರು ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಏಳು ರಾಜ್ಯ ನಂದಿ ಪ್ರಶಸ್ತಿಗಳು, ಅನೇಕ ಫಿಲ್ಮ್​ ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿ ಪುರಸ್ಕೃತ ವಿಶ್ವನಾಥ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.​ ಅವರು ಫೆಬ್ರವರಿ 2 ರಂದು ಹೈದರಾಬಾದ್​ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.

ಏತನ್ಮಧ್ಯೆ, ಅನಿಲ್​ ಕಪೂರ್​ ಇತ್ತೀಚೆಗೆ ಆದಿತ್ಯ ರಾಯ್​ ಕಪೂರ್​ ಎದುರು ಆಕ್ಷನ್​ ಥ್ರಿಲ್ಲರ್​ ವೆಬ್​ ಸರಣಿ 'ದಿ ನೈಟ್​ ಮ್ಯಾನೇಜರ್'​ನಲ್ಲಿ ಕಾಣಿಸಿಕೊಂಡರು. ಇದು 2023ರ ಫೆಬ್ರವರಿ 17ರಿಂದ ಓಟಿಟಿ ಪ್ಲಾಟ್​ಫಾರ್ಮ್​ ಡಿಸ್ನಿ + ಹಾಟ್​ಸ್ಟಾರ್​ನಲ್ಲಿ ಪ್ರತ್ಯೇಕವಾಗಿ ಸ್ಟ್ರೀಮ್​ ಆಗುತ್ತಿದೆ. ಇದಲ್ಲದೇ ಬಾಲಿವುಡ್​ ನಟ ಹೃತಿಕ್​ ರೋಷನ್​ ಮತ್ತು ನಟಿ ದೀಪಿಕಾ ಪಡುಕೋಣೆ ಅವರ ಮುಂದಿನ 'ಫೈಟರ್​' ಸಿನಿಮಾದಲ್ಲಿ ಅನಿಲ್​ ಕಪೂರ್​ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:ಪಾಕಿಸ್ತಾನದಲ್ಲೂ RRR​ ಕ್ರೇಜ್: ನಾಟು ನಾಟು ಹಾಡಿಗೆ ನಟಿಯಿಂದ ಭರ್ಜರಿ ಸ್ಟೆಪ್ಸ್‌- ನೋಡಿ

ABOUT THE AUTHOR

...view details