ಬಾಲಿವುಡ್ನ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ 'ಕಾಫಿ ವಿತ್ ಕರಣ್' ಅತ್ಯಂತ ಜನಪ್ರಿಯ ಹಿಂದಿ ಕಿರುತೆರೆ ಕಾರ್ಯಕ್ರಮಗಳಲ್ಲೊಂದು. ಇತ್ತೀಚೆಗಷ್ಟೇ ಆರಂಭಗೊಂಡಿರುವ ಸೀಸನ್ 8ರಲ್ಲಿ ದೀಪ್ವೀರ್ ಜೋಡಿ, ಡಿಯೋಲ್ ಬ್ರದರ್ಸ್ ಅತಿಥಿಗಳಾಗಿ ಆಗಮಿಸಿ ಪ್ರೇಕ್ಷಕರನ್ನು ಮೋಡಿ ಮಾಡಿದ್ದರು. ಮುಂದಿನ ಅತಿಥಿಗಳಾಗಿ ಬಾಲಿವುಡ್ ನಟಿಯರಾದ ಸಾರಾ ಅಲಿ ಖಾನ್, ಅನನ್ಯಾ ಪಾಂಡೆ ಕಾಣಿಸಿಕೊಳ್ಳಲಿದ್ದಾರೆ.
ಕಳೆದ 20 ವರ್ಷಗಳಿಂದ ಈ ಪಾಪ್ಯುಲರ್ ಚಾಟ್ ಶೋ ನಡೆಯುತ್ತಿದೆ. ಅಕ್ಟೋಬರ್ 26ರಂದು ಸೀಸನ್ 8 ಆರಂಭಗೊಂಡಿತು. ಬಾಲಿವುಡ್ನ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಮೂಲಕ ಗ್ರ್ಯಾಂಡ್ ಓಪನಿಂಗ್ ಪಡೆದ ಶೋನ ಎರಡನೇ ವಾರದ ಅತಿಥಿಗಳಾಗಿ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಕಾಣಿಸಿಕೊಂಡರು. ವರದಿಗಳಂತೆ, ಮೂರನೇ ವಾರದ ಅತಿಥಿಗಳಾಗಿ ಸಾರಾ ಅಲಿ ಖಾನ್ ಮತ್ತು ಅನನ್ಯಾ ಪಾಂಡೆ ಪಾಲ್ಗೊಳ್ಳಲಿದ್ದು, ಶೋ ಈ ಹಿಂದಿಗಿಂತಲೂ ಕೊಂಚ ವಿಭಿನ್ನವಾಗಿರಲಿದೆ. ಮುಂದಿನ ಸಂಚಿಕೆ ಹೆಚ್ಚು ಮನರಂಜನಾತ್ಮಕವಾಗಿರಲಿದೆ ಎಂದು ಹೇಳಲಾಗಿದೆ.
ಕರಣ್ ಜೋಹರ್ ಅವರು ತಮ್ಮ ಶೋನ ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಬಯಸಿದ್ದಾರೆ. ಮುಂದಿನ ಸಂಚಿಕೆ ಯಂಗ್ಸ್ಟರ್ಗಳಿಗೆ ಹೆಚ್ಚು ಹಿಡಿಸಲಿದೆ ಎಂದು ನಂಬಿದ್ದಾರೆ. ಬಾಲಿವುಡ್ನಲ್ಲಿ ಬೆಳೆಯುತ್ತಿರುವ ಸಾರಾ ಅಲಿ ಖಾನ್ ಮತ್ತು ಕೆಲ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಅನನ್ಯಾ ಪಾಂಡೆ ಅವರು ಕಾರ್ಯಕ್ರಮದ ಮೂರನೇ ವಾರದ ಅತಿಥಿಗಳಾಗಿ ಗುರುತಿಸಿಕೊಳ್ಳಲಿದ್ದಾರೆ. ಇಬ್ಬರೂ ಯಂಗ್ಸ್ಟರ್ಗಳಾದ ಹಿನ್ನೆಲೆಯಲ್ಲಿ ಈ ಶೋ ಯುವಕರನ್ನು ಹೆಚ್ಚು ಆಕರ್ಷಿಸಲಿದೆ ಎಂದು ಹೇಳಲಾಗುತ್ತಿದೆ.