ಕಳೆದ ಕೆಲ ದಿನಗಳಿಂದ ಹಿಂದಿ ಚಿತ್ರರಂಗದಲ್ಲಿ ಮತ್ತೊಂದು ಜೋಡಿಯ ಪ್ರೇಮ ಪ್ರಣಯದ ಕುರಿತಾಗಿ ವದಂತಿಗಳು ಹರಡುತ್ತಿವೆ. ರೂಮರ್ ಲವ್ ಬರ್ಡ್ಸ್ ಅನನ್ಯಾ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ಶನಿವಾರ ರಾತ್ರಿ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಮಳೆ ಸರಿಯುತ್ತಿದ್ದ ವೇಳೆ ಕಾರಿನಲ್ಲಿ ಹೊರಟಿದ್ದು, ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ಈ ಕ್ಯೂಟ್ ಕಪಲ್ ಕಾರಿನಲ್ಲಿ ಕುಳಿತಿರುವ ಹಲವು ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿದೆ. ಇತ್ತೀಚೆಗಷ್ಟೇ ವಿದೇಶ ಪ್ರವಾಸದ ಮೂಲಕ ಸದ್ದು ಮಾಡಿದ್ದ ಈ ಜೋಡಿ, ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡು, ಅಭಿಮಾನಿಗಳ ಖುಷಿಗೆ ಕಾರಣರಾಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಒಂದು ಫೋಟೋದಲ್ಲಿ, ನಟಿ ಅನನ್ಯಾ ಪಾಂಡೆ ತನ್ನ ಕೈಯಿಂದ ಮುಖವನ್ನು ಮರೆಮಾಚಿಕೊಳ್ಳಲು ಯತ್ನಿಸಿದ್ದಾರೆ. ಜೊತೆಗೆ ಆದಿತ್ಯ ರಾಯ್ ಕಪೂರ್ ಅವರೊಂದಿಗೆ ನಗುತ್ತಾ ಮಾತನಾಡಿದರು. ಆದಿತ್ಯ ಮುಗುಳ್ನಗೆ ಬೀರಿದಾಗ, ಅನನ್ಯಾ ತಮ್ಮ ಮುಖವನ್ನು ಮರೆಮಾಚಲು ಯತ್ನಿಸಿದ್ದಾರೆ.
ಅನನ್ಯಾ ಪಾಂಡೆ ಗುಲಾಬಿ ಬಣ್ಣದ ಡ್ರೆಸ್ ಧರಿಸಿದ್ದರೆ, ಆದಿತ್ಯ ರಾಯ್ ಕಪೂರ್ ಬಿಳಿ ಶರ್ಟ್ ಆರಿಸಿಕೊಂಡರು. ಮುಂಬೈ ಮೂಲದ ಪಾಪರಾಜಿಯೋರ್ವರು, ಆನ್‌ಲೈನ್‌ನಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಿದ್ದಂತೆ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. ಅನೇಕ ಅಭಿಮಾನಿಗಳು ಈ ಜೋಡಿ ಒಟ್ಟಿಗೆ ಚೆನ್ನಾಗಿ ಕಾಣಿಸುತ್ತಾರೆ ಎಂದು ತಿಳಿಸಿದರು. ಆದರೆ ಅನೇಕರಿಗೆ ಆದಿತ್ಯ ರಾಯ್ ಕಪೂರ್ ಅನನ್ಯಾ ಜೊತೆ ಡೇಟಿಂಗ್ ನಡೆಸುತ್ತಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.