ಕರ್ನಾಟಕ

karnataka

ETV Bharat / entertainment

'ಸಂಕುಚಿತತೆ, ಪುರುಷತ್ವ ವಿಚಾರವನ್ನು ಕಾಂತಾರ ವೈಭವೀಕರಿಸಿದೆ': ಬಾಲಿವುಡ್‌ ನಿರ್ಮಾಪಕ - kantara movie issues

ಕಾಂತಾರ ಸಿನಿಮಾ ಬಗ್ಗೆ ಬಾಲಿವುಡ್ ಸಿನಿಮಾ ನಿರ್ಮಾಪಕ ಆನಂದ್ ಗಾಂಧಿ ಮಾತನಾಡಿದ್ದಾರೆ.

anand gandhi reaction on kantara movie
ಕಾಂತಾರ ಚಿತ್ರದ ಬಗ್ಗೆ ಆನಂದ್ ಗಾಂಧಿ ಹೇಳಿಕೆ

By

Published : Dec 4, 2022, 12:58 PM IST

ಇಡೀ ಭಾರತೀಯ ಚಿತ್ರರಂಗದಲ್ಲೇ ಸದ್ದು ಮಾಡಿದ ಸ್ಯಾಂಡಲ್​ವುಡ್​ನ 'ಕಾಂತಾರ' ಸಿನಿಮಾ ಬಿಡುಗಡೆ ಕಂಡು 60 ದಿನ ಕಳೆದಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಪ್ರಿಯರು ಮಾತ್ರವಲ್ಲ, ಭಾರತೀಯ ಸ್ಟಾರ್ ನಟ ನಟಿಯರು ಕಾಂತಾರವನ್ನು ಹಾಡಿ ಹೊಗಳಿದ್ದಾರೆ. ​​ಸದ್ಯ ಒಟಿಟಿಯಲ್ಲೂ ಚಿತ್ರ ಲಭ್ಯವಿದೆ.

ಕೆಲ ದಿನಗಳ ಹಿಂದೆ ಆ ದಿನಗಳು ಖ್ಯಾತಿಯ ನಟ ಚೇತನ್​ ಕಾಂತಾರ ಸಿನಿಮಾದಲ್ಲಿ ಬರುವ ಭೂತ ಕೋಲ ಆಚರಣೆಯ ಬಗ್ಗೆ ಧ್ವನಿ ಎತ್ತಿ ವಿವಾದಕ್ಕೀಡಾಗಿದ್ದರು. ಇವರ ವಿರುದ್ಧ ಸಾಕಷ್ಟು ಅಸಮಾಧಾನ ಕೇಳಿಬಂದವು. ಇದೀಗ ಈ ಸಿನಿಮಾ ಬಗ್ಗೆ ಬಾಲಿವುಡ್ ನಿರ್ಮಾಪಕ ಆನಂದ್ ಗಾಂಧಿ ಮಾತನಾಡಿದ್ದಾರೆ. ಅವರು ನಿರ್ಮಿಸಿರುವ ತುಂಬಾಡ್ ಚಿತ್ರವನ್ನು ಹೊಗಳಿರುವ ಅವರು, 'ಕಾಂತಾರ' ಚಿತ್ರವನ್ನು ತೆಗಳಿದ್ದಾರೆ.

2018ರಲ್ಲಿ ತುಂಬಾಡ್ ಸಿನಿಮಾ ತೆರೆಗೆ ಬಂದು ಸೂಪರ್ ಹಿಟ್ ಆಯಿತು. ವಿಮರ್ಶಕರಿಂದ ಮೆಚ್ಚುಗೆ ಸಹ ಗಳಿಸಿತ್ತು. ಅನೇಕರು ಕಾಂತಾರವನ್ನು ತುಂಬಾಡ್ ಚಿತ್ರಕ್ಕೆ ಹೋಲಿಕೆ ಮಾಡಿದ್ದರು. 'ತುಂಬಾಡ್​'ನ ಕ್ರಿಯೇಟಿವ್​ ಪ್ರೊಡ್ಯೂಸರ್ ಆದ ಆನಂದ್ ಗಾಂಧಿ ಕಾಂತಾರ ಬಗ್ಗೆ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:ಕಾಂತಾರಕ್ಕೆ 'ವರಾಹ ರೂಪಂ' ಸೇರ್ಪಡೆ.. ಹಾಡು ಕೇಳಿ ಆನಂದಿಸಿ

ಆನಂದ್ ಗಾಂಧಿ ಟ್ವೀಟ್:ಕಾಂತಾರ ಚಿತ್ರ ತುಂಬಾಡ್ ​ಸಿನಿಮಾದಂತೆ ಇಲ್ಲ. ಸಂಕುಚಿತತೆ ಹಾಗೂ ಪುರುಷತ್ವ ಸಂಕೇತವನ್ನು ಖಂಡಿಸುವ ರೀತಿಯಲ್ಲಿ ತುಂಬಾಡ್ ಸಿನಿಮಾ ಇತ್ತು. ಆದರೆ, ಕಾಂತಾರ ಚಿತ್ರ ಅವುಗಳನ್ನು ವೈಭವೀಕರಿಸುವಂತಿದೆ ಎಂದು ಟ್ವೀಟ್ ಮಾಡಿದ್ದಾರೆ. ಅವರ ಈ ಟ್ವೀಟ್​ಗೆ ಸಿನಿಪ್ರಿಯರು, ವಿಶೇಷವಾಗಿ ಕಾಂತಾರ ಚಿತ್ರದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ABOUT THE AUTHOR

...view details