ಕರ್ನಾಟಕ

karnataka

ETV Bharat / entertainment

13 ವರ್ಷಗಳ ಹಿಂದಿನ ಟ್ವೀಟ್ ಈಗ ವೈರಲ್​: ಅಮಿತಾಭ್​ ಬಚ್ಚನ್​​ ಟ್ರೋಲ್​​ - ಕೌನ್​​ ಬನೇಗಾ ಕರೋಡ್​​​ಪತಿಯಲ್ಲಿ ಪ್ರಶ್ನಿಸಿ ಎಂದ ನೆಟ್ಟಿಗರು! - ಬ್ರಾ

Amitabh Bachchan viral tweet: ನಟ ಅಮಿತಾಭ್​ ಬಚ್ಚನ್​​ ಅವರ 13 ವರ್ಷಗಳ ಹಳೇ ಟ್ವೀಟ್​ ವೈರಲ್​ ಆಗುತ್ತಿದೆ.

Amitabh Bachchan tweet about ladies innerwear goes viral
ಒಳಉಡುಪಿನ ಬಗ್ಗೆ ಅಮಿತಾಭ್​ ಬಚ್ಚನ್​​ ಟ್ವೀಟ್

By

Published : Jul 27, 2023, 4:29 PM IST

Updated : Jul 27, 2023, 4:56 PM IST

ಭಾರತದ ಸೂಪರ್​ ಸ್ಟಾರ್​ ಅಮಿತಾಭ್​ ಬಚ್ಚನ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮ 80ರ ಹರೆಯದಲ್ಲೂ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಿಂದಿ ಚಿತ್ರರಂಗದ ಪ್ರಸಿದ್ಧ ನಟ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ತಾರೆಗಳಲ್ಲಿ ಒಬ್ಬರು. ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್​ ಇರುವ ಬಿಗ್ ಬಿ ಹೆಚ್ಚಾಗಿ ಪೋಸ್ಟ್​ಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.

ಅಮಿತಾಭ್​ ಬಚ್ಚನ್ ಟ್ರೋಲ್​: ಟ್ವಿಟರ್‌ನಿಂದ ಹಿಡಿದು ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಿರಿಯ ನಟ ಅಮಿತಾಭ್​ ಬಚ್ಚನ್ ಸಕ್ರಿಯರಾಗಿದ್ದಾರೆ. ತಮ್ಮ ಬ್ಲಾಗ್ ಮೂಲಕ ಅಭಿಮಾನಿಗಳೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಬಿಗ್ ಬಿ ಅವರ 13 ವರ್ಷದ ಹಳೇ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವೈರಲ್ ಟ್ವೀಟ್‌ನಿಂದಾಗಿ ಅಮಿತಾಭ್​ ಬಚ್ಚನ್ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.

13 ವರ್ಷದ ಬಿಗ್​ ಬಿ ಟ್ವೀಟ್ ವೈರಲ್​: 2010ರ ಜೂನ್ 12ರಂದು ನಟ ಅಮಿತಾಭ್​ ಬಚ್ಚನ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಒಂದನ್ನು ಮಾಡಿದ್ದರು. ''ಇಂಗ್ಲಿಷ್ ಭಾಷೆಯಲ್ಲಿ ಬ್ರಾ ಅನ್ನೋದು ಏಕವಚನದಲ್ಲಿದೆ ಮತ್ತು ಪ್ಯಾಂಟಿಸ್ ಬಹುವಚನ ಏಕೆ?'' ಎಂದು ಟ್ವೀಟ್ ಮಾಡಿದ್ದರು.

ಟ್ರೋಲಿಗರ ಗುರಿಯಾದ ಬಿಗ್​ ಬಿ ಟ್ವೀಟ್:ಸಾಮಾಜಿಕ ಜಾಲತಾಣ ಬಳಕೆದಾರರು ಬಿಗ್ ಬಿ ಅವರ 13 ವರ್ಷದ ಹಳೇ ಟ್ವೀಟ್ ಅನ್ನು ಸದ್ಯ ವೈರಲ್​ ಮಾಡಿ, ಸಂಚಲನ ಸೃಷ್ಟಿಸಿದ್ದಾರೆ. ಬಿಗ್​ ಬಿ ಅವರ ಬ್ರಾ, ಪ್ಯಾಂಟಿಸ್ ಟ್ವೀಟ್​ ಟ್ರೋಲಿಗರ ಗುರಿಯಾಗಿದೆ. ಹಿರಿಯ ನಟನನ್ನು ಟ್ರೋಲ್ ಮಾಡಲಾಗುತ್ತಿದೆ. ಈ ಟ್ವೀಟ್​ಗೆ ಜನರು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಇದನ್ನೂ ಓದಿ:ಸಹೋದ್ಯೋಗಿಗಳು 'ಪರಿ'ಣಿತಿ ಹೆಸರೇಳಿ ನನ್ನನ್ನು ಚುಡಾಯಿಸುತ್ತಿದ್ದರು: ಸಂಸದ ರಾಘವ್​ ಚಡ್ಡಾ

ನೆಟ್ಟಿಗರು ಹೀಗಂದ್ರು:ಒಬ್ಬ ಸಾಮಾಜಿಕ ಜಾಲತಾಣ ಬಳಕೆದಾರ ಕಾಮೆಂಟ್​ ಮಾಡಿ, ''ಬಚ್ಚನ್​​ ಸರ್ ಬಹಳ ಒಳ್ಳೆಯ ಪ್ರಶ್ನೆ, ಇದನ್ನು ಕೌನ್​ ಬನೇಗಾ ಕರೋಡ್​​ಪತಿಯ ಮುಂದಿನ ಸೀಸನ್‌ನಲ್ಲಿ ಕೇಳಿ'' ಎಂದು ಬರೆದಿದ್ದಾರೆ. ಮತ್ತೋರ್ವ ಇಂಟರ್​ನೆಟ್ ಬಳಕೆದಾರ ಪ್ರತಿಕ್ರಿಯಿಸಿ ''ಈ ಪ್ರಶ್ನೆಗೆ ಇಂದು ಸ್ಪಷ್ಟ ಉತ್ತರ ಸಿಗಬೇಕು'' ಎಂದು ಬರೆದಿದ್ದಾರೆ. ''ನಿಮ್ಮಿಂದ ಇಂಥದ್ದನ್ನು ನಿರೀಕ್ಷಿಸಿರಲಿಲ್ಲ'' ಎಂದು ಓರ್ವರು ಕಾಮೆಂಟ್​ ಮಾಡಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, ''ದೇಶವು ತಿಳಿದುಕೊಳ್ಳಲು ಬಯಸುತ್ತದೆ'' ಎಂದು ಹೇಳಿದ್ದಾರೆ. ''ಕೌನ್​ ಬನೇಗಾ ಕರೋಡ್​​​ಪತಿಯಲ್ಲಿ 5 ಕೋಟಿಗೆ ಈ ಪ್ರಶ್ನೆ ಕೇಳಿ'' ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರು, ಈ ರೀತಿಯ ಟ್ವೀಟ್ ಮೂಲಕ ಬಿಗ್ ಬಿ ಅವರನ್ನು ಟೀಕಿಸುತ್ತಿದ್ದಾರೆ..

ಇದನ್ನೂ ಓದಿ:Kiara Advani Photos: ಬಾರ್ಬಿ ಲುಕ್​ನಲ್ಲಿ ಬಾಲಿವುಡ್​ ಬ್ಯೂಟಿ ಕಿಯಾರಾ ಅಡ್ವಾಣಿ

'ಕಲ್ಕಿ 2898 ಎಡಿ' ಅಮಿತಾಭ್​ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ. ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​, ತಮಿಳು ಸೂಪರ್​ ಸ್ಟಾರ್ ಕಮಲ್ ಹಾಸನ್, ಬಾಲಿವುಡ್​ ಬಹು ಬೇಡಿಕೆ ನಟಿ ದೀಪಿಕಾ ಪಡುಕೋಣೆ, ಬಹುಭಾಷಾ ನಟಿ​​ ದಿಶಾ ಪಟಾನಿ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

Last Updated : Jul 27, 2023, 4:56 PM IST

ABOUT THE AUTHOR

...view details