ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಸಾಕು ನಾಯಿ ಮೃತಪಟ್ಟಿದೆ. ತಮ್ಮ ಮುದ್ದು ನಾಯಿ ಜೊತೆಗಿನ ಫೋಟೋ ಹಂಚಿಕೊಂಡಿರುವ ಬಿಗ್ ಬಿ, ಭಾವನಾತ್ಮಕ ಬರಹ ಬರೆದಿದ್ದಾರೆ. ಅಮಿತಾಬ್ ಕಂಬನಿ ಮಿಡಿದಿರುವ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸುದ್ದಿಯಾಗಿದೆ.
ಸದಾ ಕುಟುಂಬಕ್ಕೆ ಸಮಯ ಕೊಡುವ, ಜೊತೆಗೆ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಸೂಪರ್ಸ್ಟಾರ್ ಈಗ ಸೋಷಿಯಲ್ ಮೀಡಿಯಾದಲ್ಲಿ ಬಹಳ ಎಮೋಷನಲ್ ಆಗಿ ಪೋಸ್ಟ್ ಮಾಡಿದ್ದಾರೆ. ''ನಮ್ಮ ಒಬ್ಬರು ಚಿಕ್ಕ ಸ್ನೇಹಿತರು, ಕೆಲಸದ ಸಮಯದಲ್ಲಿ ಜೊತೆಯಲ್ಲಿದ್ದರು, ಹಾಗೆಯೇ ಬೆಳೆಯುತ್ತಿದ್ದರು, ಒಂದು ದಿನ ಹೇಳದೇ ಹೊರಟು ಬಿಟ್ಟರು'' ಎಂದು ಮುದ್ದಿನ ನಾಯಿ ಬಗ್ಗೆ ಬರೆದ ಅಮಿತಾಬ್ ಕಣ್ಣೀರಿನ ಇಮೋಜಿ ಹಾಕಿದ್ದಾರೆ.