ಕರ್ನಾಟಕ

karnataka

ETV Bharat / entertainment

AI ಫೋಟೋ ಹಂಚಿಕೊಂಡ ಅಮಿತಾಭ್​ ಬಚ್ಚನ್​​: ಹಿರಿಯ ನಟನ ಮುಂದಿನ ಸಿನಿಮಾ ಮಾಹಿತಿ ಇಲ್ಲಿದೆ - ಬಿಗ್ ಬಿ ಎಐ ಫೋಟೋ

Amitabh Bachchan: ಹಿರಿಯ ನಟ ಅಮಿತಾಭ್​ ಬಚ್ಚನ್​​​ ಅವರ ಸಿನಿಮಾ ಮಾಹಿತಿ ಈ ಕೆಳಗಿದೆ.

ಅಮಿತಾಭ್​ ಬಚ್ಚನ್
Amitabh Bachchan

By ETV Bharat Karnataka Team

Published : Oct 31, 2023, 12:25 PM IST

81ರ ಹರೆಯದಲ್ಲೂ ಸಿನಿಮಾ ಮತ್ತು ಸೋಷಿಯಲ್​ ಮೀಡಿಯಾಗಳಲ್ಲಿ ಸಕ್ರಿಯರಾಗಿರೋ ಮುಖೇನ ಯುವಕರಿಗೆ ಸ್ಫೂರ್ತಿಯಾಗಿರುವ ಭಾರತೀಯ ಚಿತ್ರರಂಗದ ಹಿರಿಯ ನಟ ಅಮಿತಾಭ್​ ಬಚ್ಚನ್. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿರುವ ಜನಪ್ರಿಯ ಸೆಲೆಬ್ರಿಟಿಗಳ ಪೈಕಿ ಅಮಿತಾಭ್ ಬಚ್ಚನ್ ಕೂಡ ಒಬ್ಬರು. ತಮ್ಮ ವೃತ್ತಿಜೀವನ, ವೈಯಕ್ತಿಕ ಜೀವನದ ಜೊತೆ ಜೊತೆಗೆ ಫನ್ನಿ ಪೋಸ್ಟ್​​ಗಳನ್ನು ಶೇರ್ ಮಾಡುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಾರೆ. ತಮ್ಮ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ರಂಜಿಸಲು ಯಾವುದೇ ಅವಕಾಶವನ್ನು ಮಿಸ್​ ಮಾಡಿಕೊಳ್ಳಲ್ಲ ಬಿಗ್ ಬಿ. ಇದೀಗ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಸಹಾಯದಿಂದ ರಚಿಸಲಾದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಚಿತ್ರಕ್ಕೆ, 'ಎಐ ಜಿಂದಾಬಾದ್' ಎಂದು ಶೀರ್ಷಿಕೆ ನೀಡಿದ್ದಾರೆ.

ಬಿಗ್ ಬಿ ಎಐ ಫೋಟೋ: ಈ ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿದ್ದ ಎಕ್ಸ್, ಇನ್​ಸ್ಟಾಗ್ರಾಮ್​​​​​ ಸೇರಿದಂತೆ ಪಾಪ್ಯುಲರ್ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ಸ್​​​ನಲ್ಲಿ ತಮಾಷೆಯ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಆಗಾಗ್ಗೆ ತಮ್ಮ ದೈನಂದಿನ ಜೀವನಶೈಲಿಯ ಒಂದು ನೋಟವನ್ನು ಅಭಿಮಾನಿಗಳಿಗೆ ಕೊಡುತ್ತಾರೆ. ದೇಶದ ಪ್ರಮುಖ ವಿಷಯಗಳ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಒಟ್ಟಾರೆ ಹಿರಿಯ ನಟನ ಪೋಸ್ಟ್​​ಗಳು ಕುತೂಹಲಕಾರಿಯಾಗಿರುತ್ತವೆ. ಇದೀಗ ಹೊಸದಾಗಿ ಹಂಚಿಕೊಂಡಿರುವ ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋದಲ್ಲಿ ಬಹಳ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡಕ ನಟನ ತೂಕದ ನೋಟಕ್ಕೆ ಮತ್ತಷ್ಟು ಮೆರುಗು ನೀಡಿದೆ.

ಅಭಿಮಾನಿಗಳ ಮೆಚ್ಚುಗೆ: ಬಿಗ್ ಬಿ ಎಐ ಫೋಟೋ ಅವರ ನೈಜ ಚಿತ್ರವನ್ನೇ ಹೋಲುತ್ತದೆ. ಫೋಟೋಗೆ ಮೆಚ್ಚುಗೆ ಸೂಚಿಸಿರುವ ಅಭಿಮಾನಿಗಳು, ನಟನ ನೋಟವನ್ನು ಗುಣಗಾನ ಮಾಡುತ್ತಿದ್ದಾರೆ. ಫೈಯರ್, ರೆಸ್ಪೆಕ್ಟ್​​, ಲವ್​ ಸಿಂಬಲ್​ನ ಎಮೋಜಿಯೊಂದಿಗೆ ಬಿಗ್​ ಬಿ ಫೋಟೋಗಳಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. 'ಸರ್ ನೀವು ಎಐಗಿಂತ ಉತ್ತಮವಾಗಿ ಕಾಣುತ್ತೀರಿ' ಎಂದು ಓರ್ವರು ಕಾಮೆಂಟ್​ ಮಾಡಿದ್ರೆ, ಮತ್ತೋರ್ವರು 'ರಿಯಲ್ ಬಾಸ್' ಎಂದು ತಿಳಿಸಿದ್ದಾರೆ.

ಬಿಗ್ ಬಿ ಸಿನಿಮಾಗಳು: ಇನ್ನು ಹಿರಿಯ ನಟ ಸರಣಿ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಬಿಗ್​ ಬಜೆಟ್​, ಬಿಗ್​​ ಸ್ಟಾರ್ಸ್​ನ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ವಿಕಾಸ್ ಬಹ್ಲ್ ನಿರ್ದೇಶನದ ಗಣಪತ್ ಸಿನಿಮಾದಲ್ಲಿ ಬಿಗ್​ ಬಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಟೈಗರ್ ಶ್ರಾಫ್, ಕೃತಿ ಸನೋನ್ ಮುಖ್ಯಭೂಮಿಕೆಯಲ್ಲಿದ್ದರು. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಬಿಗ್​ ಬಜೆಟ್​ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಾಗ್ ಅಶ್ವಿನ್ ನಿರ್ದೇಶನ ಸೈನ್ಸ್​ ಫಿಕ್ಷನ್​ ಸಿನಿಮಾ ಕಲ್ಕಿ 2898 ಎಡಿ ಯಲ್ಲಿ ಪ್ರಭಾಸ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ ಜೊತೆ ಅಮಿತಾಭ್​​ ಬಚ್ಚನ್​ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:ಶಾರುಖ್​​ ಖಾನ್ ಜನ್ಮದಿನದಂದು ಡಂಕಿ ಟೀಸರ್​ ರಿಲೀಸ್​​​: ಮುಂಬೈನಲ್ಲಿ ಅಭಿಮಾನಿಗಳಿಗಾಗಿ ಖಾನ್ ಬರ್ತ್​​ಡೇ ಪಾರ್ಟಿ!

ರಜನಿಕಾಂತ್ ಮುಖ್ಯಭೂಮಿಕೆಯ ತಲೈವರ್​​ 170 ಚಿತ್ರದಲ್ಲಿ ಅಮಿತಾಭ್​ ಬಚ್ಚನ್​ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. 32 ವರ್ಷಗಳ ಗ್ಯಾಪ್​ ಬಳಿಕ ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜರು ತೆರೆಹಂಚಿಕೊಳ್ಳುತ್ತಿದ್ದು, ಇತ್ತೀಚೆಗಷ್ಟೇ ಮುಂಬೈ ಶೂಟಿಂಗ್​ ಶೆಡ್ಯೂಲ್​ ಕಂಪ್ಲೀಟ್​ ಆಗಿದೆ. ರಿಭು ದಾಸ್‌ ಗುಪ್ತಾ ಅವರ ಸೆಕ್ಷನ್ 84 ಸಿನಿಮಾದಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ. ದೀಪಿಕಾ ಪಡುಕೋಣೆ ಜೊತೆ ಹಾಲಿವುಡ್ ಸಿನಿಮಾ ದಿ ಇಂಟರ್ನ್‌ನ ಹಿಂದಿ ರೂಪಾಂತರದಲ್ಲಿ ನಟಿಸಲಿದ್ದಾರೆ.

ಇದನ್ನೂ ಓದಿ:ರಜನಿಕಾಂತ್ - ಅಮಿತಾಭ್ ಬಚ್ಚನ್ ಸಿನಿಮಾ: ಮುಂಬೈ ಶೂಟಿಂಗ್​ ಶೆಡ್ಯೂಲ್ ಕಂಪ್ಲೀಟ್​

ABOUT THE AUTHOR

...view details