ಮುಂಬೈ: ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಬಾಹ್ಯಾಕಾಶ ಪ್ರೇಮಿ ಕೂಡಾ. ಮಂಗಳವಾರ ತಡರಾತ್ರಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಬಾಹ್ಯಾಕಾಶದ ಸುಂದರ ದೃಶ್ಯವನ್ನೊಳಗೊಂಡ ವಿಡಿಯೋ ಹಂಚಿಕೊಂಡಿದ್ದರು. ಇದರಲ್ಲಿ ಐದು ಗ್ರಹಗಳು ಆಕಾಶದಲ್ಲಿ ನೇರ ರೇಖೆಯಲ್ಲಿ ಒಟ್ಟಿಗೆ ಗೋಚರಿದ್ದವು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದ್ರೆ ಇದು ಜ.26ರ ಹಳೆಯ ವಿಡಿಯೋ ಆಗಿದ್ದು, ಈಗಾಗಲೇ ಯೂಟೂಬ್ನಲ್ಲಿದೆ ಎಂದು ವೀಕ್ಷಕರು ವಿಡಿಯೋ ಲಿಂಕ್ ಸಮೇತ ಕಮೆಂಟ್ ಮಾಡಿದ್ದಾರೆ. ಜೊತೆಗೆ ಈ ರೀತಿಯ ವಿಡಿಯೋ ಪೋಸ್ಟ್ ಮಾಡುವ ಮುನ್ನ ಒಮ್ಮೆ ಪರಿಶೀಲಿಸಿ ಅಂತಾ ಬಿಗ್ ಬಿಗೆ ಸಲಹೆ ನೀಡಿದ್ದಾರೆ.
"ಎಂತಹ ಸುಂದರ ದೃಶ್ಯ.! ಇಂದು 5 ಗ್ರಹಗಳು ಒಟ್ಟಿಗೆ ಇವೆ. ಈ ಸುಂದರ ಮತ್ತು ಅಪರೂಪದ ದೃಶ್ಯವನ್ನು ನೀವು ನೋಡಿರುವಿರಿ" ಎಂದು ಬರೆದಿರುವ ಅಮಿತಾಭ್ ಬಚ್ಚನ್, ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 45 ಸೆಕೆಂಡುಗಳ ವಿಡಿಯೋ ಪೋಸ್ಟ್ ಮಾಡಿದ್ದರು. ಅದರಲ್ಲಿ ಬುಧ, ಶುಕ್ರ, ಮಂಗಳ, ಗುರು ಮತ್ತು ಯುರೇನಸ್ ಗ್ರಹಗಳು ಸರಳ ರೇಖೆಯಲ್ಲಿ ಜೋಡಿಸಿದಂತೆ ಗೋಚರಿಸುತ್ತವೆ. ಆ ನಂತರ ಚಂದ್ರನ ಸುಂದರ ದೃಶ್ಯವೂ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಪೋಸ್ಟ್ ಮಾಡಿದ 50 ನಿಮಿಷಗಳಲ್ಲಿ ಗಂಟೆಗಳಲ್ಲಿ 2.3 ಮಿಲಿಯನ್ ಮಂದಿ ವೀಕ್ಷಿಸಿದ್ದು, ಇಲ್ಲಿಯವರೆಗೆ 1.1 ಮಿಲಿಯನ್ಗೂ ಹೆಚ್ಚು ಲೈಕ್ಸ್ ಪಡೆದುಕೊಂಡಿತ್ತು.
ಯುಟೂಬ್ ವಿಡಿಯೋ ಲಿಂಕ್ ಸಮೇತ ಪೋಸ್ಟ್ ಮಾಡಿದ ವೀಕ್ಷಕರು: ನೀವು ಸೂಪರ್ ಸ್ಟಾರ್. ನೀವು ವಿಡಿಯೋ ಪೋಸ್ಟ್ ಮಾಡುವ ಮುನ್ನ ಒಮ್ಮೆ ಪರಿಶೀಲಿಸಬೇಕು. ಇಲ್ಲದಿದ್ದರೆ ತಪ್ಪು ಮಾಹಿತಿ ರವಾನೆ ಆಗುತ್ತದೆ. ಏಕೆಂದ್ರೆ ಇದು ಹಳೆಯ ವಿಡಿಯೋ ಎಂದು ವೀಕ್ಷಕರು ಯುಟೂಬ್ ಲಿಂಕ್ ಸಮೇತ್ ಅಮಿತಾಭ್ ಬಚ್ಚನ್ ಅವರಿಗೆ ಸಲಹೆ ನೀಡಿ ಕಮೆಂಟ್ ಮಾಡಿದ್ದಾರೆ. ಯುಟೂಬ್ ಲಿಂಕ್ ಇಲ್ಲಿದೆ... https://www.youtube.com/shorts/gvJ3P1aRXZk
ಇದನ್ನೂ ಓದಿ :ಒಂದು ಕಾಲದಲ್ಲಿ ಖಂಡಿತವಾಗಿಯೂ ಮಂಗಳ ಗ್ರಹದಲ್ಲಿ ನೀರಿತ್ತು ಎಂದ ನಾಸಾ!
ಬಿಗ್ 'ಬಿ' ಅವರ ಈ ಪ್ಲಾನೆಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕುತೂಹಲ ಉಂಟುಮಾಡಿದ್ದು, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ನಟ ಸಿದ್ಧಾರ್ಥ್ ಕಪೂರ್, ಮಾನ್ಯತಾ, ರಶ್ಮಿ ದೇಸಾಯಿ, ನಿಶಾ ರಾವಲ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.