ಕರ್ನಾಟಕ

karnataka

ETV Bharat / entertainment

ಪತ್ನಿ ಜಯಾ ವಿವಾಹಕ್ಕೆ ಇದೇ ಕಾರಣ... ಕರೋಡ್​​​​ಪತಿ ಶೋನಲ್ಲಿ ರಹಸ್ಯ ಬಹಿರಂಗ ಪಡಿಸಿದ ಅಮಿತಾಬ್ - Amitabh Bachchan reveals his marriage story

ಅಮಿತಾಬ್ ಬಚ್ಚನ್ ಅವರು ಕೌನ್ ಬನೇಗಾ ಕರೋಡ್​ಪತಿ ಶೋನಲ್ಲಿ ಪತ್ನಿ ಜಯಾ ಅವರನ್ನು ಮದುವೆಯಾಗಲು ಕಾರಣ ಏನು ಎಂಬ ಬಗ್ಗೆ ಹೇಳಿಕೊಂಡಿದ್ದಾರೆ.

eals-his-marriage-story-in-kbc
ಅಮಿತಾಬ್​ ಬಚ್ಚನ್​ ಬಹಿರಂಗ

By

Published : Nov 16, 2022, 8:33 PM IST

ಹೈದರಾಬಾದ್:ಬಾಲಿವುಡ್​ ಬಾದ್​ಶಾ ಅಮಿತಾಬ್ ಬಚ್ಚನ್ ತಾವು ನಡೆಸಿಕೊಡುವ ಜನಪ್ರಿಯ ಶೋ 'ಕೌನ್ ಬನೇಗಾ ಕರೋಡ್​ಪತಿಯಲ್ಲಿ ತಮ್ಮ ವಿವಾಹದ ಬಗ್ಗೆ ಮಾತನಾಡಿದ್ದು, ಪತ್ನಿ ಜಯಾ ಬಚ್ಚನ್​ ಅವರನ್ನು ಏಕೆ ಮದುವೆಯಾದ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಶೋನಲ್ಲಿ ಸ್ಪರ್ಧಿಯೊಬ್ಬರು ತನ್ನ ಹೋರಾಟ, ಯಶಸ್ಸು ಮತ್ತು ಜೀವನಕ್ಕೆ ಸಂಬಂಧಿಸಿದ ಸಂತೋಷ ಮತ್ತು ದುಃಖಗಳನ್ನು ಹಂಚಿಕೊಂಡಾಗ, ಬಿಗ್ ಬಿ ಕೂಡ ತನ್ನ ಖಾಸಗಿ ಜೀವನದ ನೆನಪುಗಳ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ.

ಜಯಾ ಕೂದಲಿಗೆ ಬಿಗ್​ ಬಿ ಆಕರ್ಷಿತ: ಪ್ರಿಯಾಂಕಾ ಮಹರ್ಷಿ ಎಂಬ ಸ್ಪರ್ಧಿ ಹಾಟ್‌ಸೀಟ್‌ನಲ್ಲಿ ಕುಳಿತಿದ್ದರು. ಅವರ ಕೂದಲನ್ನು ನೋಡಿದ ಬಿಗ್ ಬಿ ತಮ್ಮ ಹಿಂದಿನ ದಿನಗಳನ್ನು ಮೆಲಕು ಹಾಕಿದ್ದಾರೆ. ನನ್ನ ಹೆಂಡತಿಯ ಕೂದಲು ತುಂಬಾ ಉದ್ದವಾಗಿದೆ. ಆಕೆಯ ಕೇಶರಾಶಿಗೆ ನಾನು ಮನಸೋತಿದ್ದೆ. ಈ ಕಾರಣಕ್ಕಾಗಿ ನಾವಿಬ್ಬರು ಮದುವೆಯಾದೆವು ಎಂದು ಬಹಿರಂಗಪಡಿಸಿದ್ದಾರೆ. ಇದನ್ನು ಕೇಳಿದ ಪ್ರೇಕ್ಷಕರು ಖುಷಿಪಟ್ಟು ಚಪ್ಪಾಳೆ ತಟ್ಟಿದ್ದಾರೆ.

ಬಿಗ್ ಬಿ- ಜಯಾ ಜೋಡಿ:ಬಿಗ್ ಬಿ ಮತ್ತು ಜಯಾ ಅವರು ಮೊದಲ ಬಾರಿಗೆ 'ಗುಡ್ಡಿ' (1971) ಚಿತ್ರದ ಸಮಯದಲ್ಲಿ ಭೇಟಿಯಾದರು. ಶೈ ಚಿತ್ರವನ್ನು ಹೃಷಿಕೇಶ್ ಮುಖರ್ಜಿ ನಿರ್ಮಿಸಿದ್ದಾರೆ. 1970 ರಲ್ಲಿ ಈ ತಾರಾ ಜೋಡಿ 'ಬನ್ಸಿ ಔರ್ ಬಿರ್ಜು' ಚಿತ್ರಕ್ಕಾಗಿ ಒಟ್ಟಿಗೆ ಕೆಲಸ ಮಾಡಿದರು. ಇದಾದ ನಂತರ ಈ ಜೋಡಿ 'ಜಂಜೀರ್', 'ಚುಪ್ಕೆ ಚುಪ್ಕೆ' ಮತ್ತು 'ಅಭಿಮಾನ' ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.

ಓದಿ:ನಮ್ಮ ಚಿಕ್ಕ ಸ್ನೇಹಿತರು, ಹೇಳದೇ ಹೊರಟು ಬಿಟ್ಟರು.. ಸಾಕು ನಾಯಿ ನಿಧನಕ್ಕೆ ಬಿಗ್​​ ಬಿ ಭಾವನಾತ್ಮಕ ಪೋಸ್ಟ್

ABOUT THE AUTHOR

...view details