ಕರ್ನಾಟಕ

karnataka

ETV Bharat / entertainment

'ಆರ್​​ಆರ್​ಆರ್​' ಸಿನಿಮಾ ನೋಡಿದ ಬಾಲಿವುಡ್​ನ ಬಿಗ್​-ಬಿ.. - ಗುಡ್ ಬೈ ಚಿತ್ರದ ಶೂಟಿಂಗ್​ನಲ್ಲಿ ಬಚ್ಚನ್ ಬ್ಯುಸಿ

'ಗುಡ್ ಬೈ' ಸಿನಿಮಾದ ಶೂಟಿಂಗ್‌ಗಾಗಿ ಅಮಿತಾಬ್ ಬಚ್ಚನ್ ಸದ್ಯ ಉತ್ತರಾಖಂಡದಲ್ಲಿದ್ದಾರೆ. ಹರಿದ್ವಾರ ಮತ್ತು ಋಷಿಕೇಶದ ವಿವಿಧ ಸ್ಥಳಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಬುಧವಾರ ರಾತ್ರಿ 'ಆರ್​ಆರ್​ಆರ್​' ಋಷಿಕೇಶದ ರಾಮ ಪ್ಯಾಲೇಸ್​​ನಲ್ಲಿ ವೀಕ್ಷಿಸಿದರು.

ಆರ್​​ಆರ್​ಆರ್​ ಸಿನಿಮಾ ನೋಡಿದ ಅಮಿತಾಬ್ ಬಚ್ಚನ್
Amitabh Bachchan watch RRR Movie

By

Published : Mar 31, 2022, 1:51 PM IST

ಋಷಿಕೇಶ (ಉತ್ತರಾಖಂಡ್​): ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್​ ಬಚ್ಚನ್ ಇತ್ತೀಚೆಗೆ ಬಿಡುಗಡೆಯಾದ 'ಆರ್​​ಆರ್​ಆರ್​' ಚಿತ್ರವನ್ನು ವೀಕ್ಷಿಸಿದ್ದಾರೆ. 'ಗುಡ್ ಬೈ' ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿ ಇರುವ ಬಿಗ್​-ಬಿ ಬಿಡುವು ಮಾಡಿಕೊಂಡು ದಕ್ಷಿಣ ಭಾರತದ ಸೂಪರ್‌ಹಿಟ್ ಚಿತ್ರ 'ಆರ್​​ಆರ್​ಆರ್​' ನೋಡಿದ್ದಾರೆ.

'ಗುಡ್ ಬೈ' ಸಿನಿಮಾದ ಶೂಟಿಂಗ್‌ಗಾಗಿ ಅಮಿತಾಭ್​ ಬಚ್ಚನ್ ಸದ್ಯ ಉತ್ತರಾಖಂಡದಲ್ಲಿದ್ದಾರೆ. ಹರಿದ್ವಾರ ಮತ್ತು ಋಷಿಕೇಶದ ವಿವಿಧ ಸ್ಥಳಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಬುಧವಾರ ರಾತ್ರಿ 'ಆರ್​ಆರ್​ಆರ್​' ಋಷಿಕೇಶದ ರಾಮ ಪ್ಯಾಲೇಸ್​​ನಲ್ಲಿ ವೀಕ್ಷಿಸಿದರು. ರಾಮ ಪ್ಯಾಲೇಸ್​ಗೆ ಬಂದಾಗ ಅವರನ್ನು ಮಾಲೀಕ ಅಶೋಕ್ ಗೋಯೆಲ್ ಮತ್ತು ಪುತ್ರ ಹಿಮಾಂಶು ಗೋಯಲ್ ಸ್ವಾಗತಿಸಿದರು.

'ಆರ್​​ಆರ್​ಆರ್​' ಸಿನಿಮಾ ನೋಡಿದ ಬಾಲಿವುಡ್​ನ ಬಿಗ್​-ಬಿ....

ಇದೇ ವೇಳೆ ಬಿಗ್​-ಬಿ ಅವರಿಗೆ ಆರತಿ ಬೆಳಗಿ, ಕುಂಕುಮವಿಟ್ಟ ಮಹಿಳೆಯರು ಬರಮಾಡಿಕೊಂಡರು. ಚಿತ್ರ ವೀಕ್ಷಿಸಲು ರಾಮಾ ಪ್ಯಾಲೇಸ್​ಗೆ ಅಮಿತಾಭ್ ಬಚ್ಚನ್ ಬಂದಿದ್ದಾರೆ ಎಂದು ವಿಷಯ ತಿಳಿದ ಅಭಿಮಾನಿಗಳು ರಾಮಾ ಪ್ಯಾಲೇಸ್ ಸುತ್ತ-ಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ಇನ್ನು, ತೆಹ್ರಿ ಜಿಲ್ಲೆಯ ನರೇಂದ್ರನಗರದ ಆನಂದ ಹೋಟೆಲ್‌ನಲ್ಲಿ ಅಮಿತಾಭ್​ ಬಚ್ಚನ್ ಉಳಿದುಕೊಂಡಿದ್ದಾರೆ. ಸರಿ ಸುಮಾರು 47 ವರ್ಷಗಳ ಬಳಿಕ ಅಮಿತಾಬ್ ಬಚ್ಚನ್ ರಿಷಿಕೇಶ್ ಮತ್ತು ಸುತ್ತ-ಮುತ್ತಲಿನ ಸ್ಥಳಗಳಲ್ಲಿ ಚಿತ್ರೀಕರಣಕ್ಕಾಗಿ ಬಂದಿದ್ದಾರೆ ಎನ್ನಲಾಗುತ್ತಿದೆ. ಮಾ.26ರಿಂದ 'ಗುಡ್ ಬೈ' ಚಿತ್ರದ ಶೂಟಿಂಗ್ ಶುರುವಾಗಿದೆ. ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಕೂಡ ನಟಿಸಿದ್ದಾರೆ.

ಇದನ್ನೂ ಓದಿ:ನೆರವಿಗೆ ಬಂದ ಆತ್ಮರಕ್ಷಣೆ ಕಲೆ.. ತಡರಾತ್ರಿ ಮನೆಗೆ ನುಗ್ಗಿದ ದರೋಡೆಕೋರರನ್ನು ಹಿಮ್ಮೆಟ್ಟಿಸಿದ ಯುವತಿ!

ABOUT THE AUTHOR

...view details