ಕರ್ನಾಟಕ

karnataka

ETV Bharat / entertainment

ಮೂರು ದಶಕದ ಬಳಿಕ ಅಮಿತಾಬ್ ಬಚ್ಚನ್‌ ಜೊತೆಗೆ ರಜಿನಿಕಾಂತ್​ ಸಿನಿಮಾ; ಅಭಿಮಾನಿಗಳಲ್ಲಿ ಕಾತರ - ಸಿನಿಮಾ ಮಾಡುವ ಮೂಲಕ ಇದೀಗ ಸದ್ದು

'ತಲೈವರ್​ 170' ಸಿನಿಮಾದಲ್ಲಿ ಇಬ್ಬರು ಅಭಿನಯಿಸಲಿದ್ದಾರೆ. ಈ ಸಿನಿಮಾ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡಲಿದೆ ಅಂತಿದ್ದಾರೆ ಸಿನಿಮಾ ಪಂಡಿತರು.

Amitabh Bachchan joining Rajinikanth thalaivar 170 movie
Amitabh Bachchan joining Rajinikanth thalaivar 170 movie

By ETV Bharat Karnataka Team

Published : Oct 25, 2023, 3:14 PM IST

ಬೆಂಗಳೂರು: ತಮಿಳು ಸೂಪರ್‌ಸ್ಟಾರ್​ ರಜಿನಿಕಾಂತ್​​ 33 ವರ್ಷಗಳ ಬಳಿಕ ತಮ್ಮ ಸ್ನೇಹಿತನೊಂದಿಗೆ ಹೊಸ ಸಿನಿಮಾ ಮಾಡುತ್ತಿದ್ದಾರೆ. 'ಜೈಲರ್'​​ ಯಶಸ್ಸಿನ​ ಬಳಿಕ ಮತ್ತೊಂದು ಚಿತ್ರ ಘೋಷಿಸಿರುವ ಅವರು ಬಾಲಿವುಡ್‌ನ ಹಿರಿಯ ನಟ ಅಮಿತಾಬ್​​ ಬಚ್ಚನ್​ ಜೊತೆಗೆ ತೆರೆ ಹಂಚಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ. ಈ ಸಿನಿಮಾದ ಹೆಸರು 'ತಲೈವರ್​ 170'.

ಈ ಕುರಿತು ರಜಿನಿಕಾಂತ್​ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಮಾಹಿತಿ ನೀಡಿದ್ದಾರೆ. ಅಮಿತ್​ ಬಚ್ಚನ್​ ಜೊತೆಗಿರುವ ಫೋಟೋ ಹಂಚಿಕೊಂಡು, '33 ವರ್ಷಗಳ ಬಳಿಕ ನನ್ನ ಸ್ನೇಹಿತನೊಂದಿಗೆ ಮತ್ತೆ ಕೆಲಸ ಮಾಡುತ್ತಿದ್ದೇನೆ. ಅಮಿತಾಬ್​​ ಬಚ್ಚನ್​ ತಮ್ಮ ಮುಂದಿನ ಚಿತ್ರ ಲೈಕಾ ನಿರ್ಮಾಣದ 'ತಲೈವರ್​ 170'ರಲ್ಲಿ ನಟಿಸುತ್ತಿದ್ದಾರೆ. ಇದೊಂದು ಹೃದಯ ತುಂಬಿದ ಸಮಯವಾಗಲಿದೆ' ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

'ತಲೈವರ್​​ 170' ಸಿನಿಮಾ ಕುರಿತು: 'ತಲೈವರ್​ 170' ಚಿತ್ರಕ್ಕೆ ಲೈಕಾ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಿದೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಟಿ.ಜೆ.ಗ್ಯಾನವೆಲ್​ ನಿರ್ದೇಶಿಸುತ್ತಿದ್ದಾರೆ. ರಾಣಾ ದುಗ್ಗುಬಾಟಿ ಮತ್ತು ಫಹಾದ್​ ಫಸಲ್​ ಕೂಡ ನಟಿಸುತ್ತಿದ್ದಾರೆ. ಈ ಮೊದಲೇ ಘೋಷಿಸಿದಂತೆ ಚಿತ್ರದಲ್ಲಿ ದುಶರಾ ವಿಜಯನ್​, ರಿತಿಕ ಸಿಂಗ್​​, ಮಂಜು ವಾರಿಯರ್​​ ಕೂಡ ಬಣ್ಣ ಹಚ್ಚುತ್ತಿದ್ದಾರೆ. 'ಜೈಲರ್'​ ಸಿನಿಮಾಗೆ ಅದ್ಭುತ ಸಂಗೀತ ಸಂಯೋಜಿಸಿದ್ದ ಅನಿರುದ್ದ್​​ ರವಿಚಂದ್ರನ್​​ ಅವರ ಸಂಗೀತ ಚಿತ್ರಕ್ಕಿರಲಿದೆ.

'ಜೈಲರ್'​​ ಕಲಾನಿಧಿ ಮಾರನ್​ ಅವರ ಸನ್​ ಪಿಕ್ಚರ್ಸ್​​ ನಿರ್ಮಾಣದಲ್ಲಿ ಮೂಡಿಬಂದ ಆ್ಯಕ್ಷ್ಯನ್​ ಕಾಮಿಡಿ ಚಿತ್ರ. ಇದು ಬಾಕ್ಸ್​​ ಆಫೀಸ್​ನಲ್ಲಿ ಧೂಳೆಬ್ಬಿಸಿತು. ಇದೀಗ ರಜಿನಿಕಾಂತ್​​ 'ಲಾಲ್​ ಸಲಾಂ' ಚಿತ್ರದಲ್ಲಿ ಮಿಂಚಲು ಅಣಿಯಾಗುತ್ತಿದ್ದಾರೆ. ರಜಿನಿಕಾಂತ್​​ ಮಗಳು ಐಶ್ವರ್ಯ ರಜಿನಿಕಾಂತ್​ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ಲೈಕಾ ನಿರ್ಮಾಣದಡಿ ಸುಬಸ್ಕರನ್​ ಅಲಿರಾಜ್​ ನಿರ್ಮಿಸುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ವಿಷ್ಣು ವಿಶಾಲ್​ ಮತ್ತು ವಿಕ್ರಾಂತ್​ ಇದ್ದಾರೆ.

ಇದನ್ನೂ ಓದಿ: ತಮಿಳಿನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ 4ನೇ ಚಿತ್ರ ಲಿಯೋ; ಉಳಿದ ಮೂರು ಚಿತ್ರಗಳು ಯಾವವು?

ABOUT THE AUTHOR

...view details