ಹಿಂದಿ ಚಿತ್ರರಂಗದ ಹಿರಿಯ, ಖ್ಯಾತ ನಟ ಅಮಿತಾಭ್ ಬಚ್ಚನ್ ತಮ್ಮ ಮಗನ ಸಾಧನೆಗೆ ಸಂತಸ, ಹೆಮ್ಮೆ ವ್ಯಕ್ತಪಡಿಸುವುದರಿಂದ ಹಿಂದೆ ಸರಿಯಲ್ಲ. ಇಂಡಿಯನ್ ಸ್ಪೋರ್ಟ್ಸ್ ಹಾನರ್ಸ್ ಸಮಾರಂಭದಲ್ಲಿ ನಟ ಅಭಿಷೇಕ್ ಬಚ್ಚನ್ ಟ್ರೋಫಿ ಸ್ವೀಕರಿಸಿದ ನಂತರ ತಮ್ಮ ಮಗನ ಬಗ್ಗೆ ಹೆಮ್ಮೆ ಪಡಿಸಿರುವ ಅಮಿತಾಭ್ ಬಚ್ಚನ್ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ. ಇದಕ್ಕಾಗಿ ಅವರು ವಿಶೇಷ ವಿಡಿಯೋ ಕೂಡ ಶೇರ್ ಮಾಡಿದ್ದಾರೆ.
ಅಮಿತಾಭ್ ಬಚ್ಚನ್ ಅವರು ಸಾಮಾಜಿಕ ಜಾಲತಾಣದಲ್ಲಿ, ''ನನ್ನ ಹೆಮ್ಮೆ ಅಭಿಷೇಕ್, ನಿನ್ನ ಸಾಧನೆಗಳ ಬಗ್ಗೆ ಹೆಮ್ಮೆ ಇದೆ, ದೊಡ್ಡ ಸಾಧನೆ ಮಾಡಲು ಸದ್ಯ ಸದ್ದಿಲ್ಲದೇ ಹೆಮ್ಮೆ ವ್ಯಕ್ತಪಡಿಸುತ್ತೇನೆ'' ಎಂದು ಬರೆದುಕೊಂಡಿದ್ದಾರೆ. ತಂದೆ ಮಗನ ವಿಶೇಷ ವಿಡಿಯೋ ಕೂಡ ಶೇರ್ ಮಾಡಿದ್ದಾರೆ.
ಇಂಡಿಯನ್ ಸ್ಪೋರ್ಟ್ಸ್ ಆನರ್ಸ್ 2023ರಲ್ಲಿ ಅಭಿಷೇಕ್ ಬಚ್ಚನ್ ಅವರಿಗೆ 'ಕ್ಲಬ್ ಆಫ್ ದ ಇಯರ್' ಟ್ರೋಫಿಯನ್ನು ನೀಡಿ ಗೌರವಿಸಲಾಗಿದೆ. ಈ ಗೌರವದಿಂದಾಗಿ ಜೂನಿಯರ್ ಬಚ್ಚನ್ ಅಭಿಮಾನಿಗಳು, ಬೆಂಬಲಿಗರು ಹಾಗೂ ಕುಟುಂಬ ಸದಸ್ಯರಲ್ಲಿ ಸಂತಸದ ಅಲೆ ಎದ್ದಿದೆ.
ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಈ ಗೌರವದ ಸ್ವೀಕರಿಸಿದ ನಂತರ, ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ತಮ್ಮದೇ ಆದ ಶೈಲಿಯಲ್ಲಿ ಮಗನನ್ನು ಹೊಗಳಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಅಪ್ಪ - ಮಗನ ಬಾಂಧವ್ಯದ ಕುರಿತಾಗಿದೆ. ಸುಮಾರು 1 ನಿಮಿಷದ ಈ ವಿಡಯೋದಲ್ಲಿ ಚಲನಚಿತ್ರದ ದೃಶ್ಯಗಳು, ಸಿನಿಮಾ ಈವೆಂಟ್ಗಳು, ಕೆಲ ವೈಯಕ್ತಿಕ ಕ್ಷಣಗಳನ್ನು ಸೇರಿಸಲಾಗಿದೆ. ಇದನ್ನು ನೋಡಿದ ಅಭಿಮಾನಿಗಳು ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸದ್ದು ಮಾಡುತ್ತಿದ್ದು, ಇದಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ.